Advertisement

ಚಿನ್ನ ಗೆದ್ದ ನೀರಜ್‌ಗೆ ಹಣದ ಹೊಳೆ

09:30 PM Aug 08, 2021 | Team Udayavani |

ಬೆಂಗಳೂರು: ಭಾರತದಲ್ಲಿ ಕ್ರಿಕೆಟಿಗರು ಮಾತ್ರವಲ್ಲ ಎಲ್ಲ ರೀತಿಯ ಅಥ್ಲೀಟ್‌ಗಳೂ ಈಗ ಹಣದ ಹೊಳೆಯಲ್ಲಿ ತೇಲುತ್ತಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದರಂತೂ ಮತ್ತೆ ಮಾತೇ ಇಲ್ಲ.

Advertisement

ಕೇಂದ್ರ, ರಾಜ್ಯ ಸರ್ಕಾರಗಳ ಜೊತೆಗೆ ವಿವಿಧ ಕಾರ್ಪೊರೆಟ್‌ ಕಂಪನಿಗಳೂ ಕೋಟಿಗಟ್ಟಲೆ ರೂ. ಹಣ ನೀಡುತ್ತವೆ. ಈ ಬಾರಿ ಟೋಕ್ಯೊದಲ್ಲಿ ಚಿನ್ನ ಗೆದ್ದು ಮನೆ ಮಾತಾಗಿರುವ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ, ಹರ್ಯಾಣ ಸರ್ಕಾರ 6 ಕೋಟಿ ರೂ. ಘೋಷಿಸಿದೆ. ಭಾರತೀಯ ಮೂಲದ ಬಹುರಾಷ್ಟ್ರೀಯ ಕಂಪನಿ ಬೈಜುಸ್‌ 2 ಕೋಟಿ ರೂ. ಘೋಷಿಸಿದೆ.

ಅಷ್ಟು ಮಾತ್ರವಲ್ಲ ಬೆಳ್ಳಿ ಗೆದ್ದಿರುವ ಮೀರಾಬಾಯಿ ಚಾನು, ರವಿಕುಮಾರ್‌ ದಹಿಯ, ಕಂಚು ಗೆದ್ದಿರುವ ಲವ್ಲಿನಾ ಬೊರ್ಗೊಹೇನ್‌, ಪಿ.ವಿ.ಸಿಂಧು, ಭಜರಂಗ್‌ ಪುನಿಯಗೆ ತಲಾ 1 ಕೋಟಿ ರೂ. ನೀಡುವುದಾಗಿ ಬೈಜುಸ್‌ ಪ್ರಕಟಿಸಿದೆ.

ನೀರಜ್‌ಗೆ ಯಾರ್ಯಾರಿಂದ ಎಷ್ಟು ಹಣ?

1.ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ರಿಂದ 2 ಕೋಟಿ ರೂ. ಘೋಷಣೆ.

  1. ಭಾರತೀಯ ಕ್ರಿಕೆಟ್‌ ನಿಯಂತ್ರಣ ಸಂಸ್ಥೆಯಿಂದ 1 ಕೋಟಿ ರೂ.
  2. ಚೆನ್ನೈ ಸೂಪರ್‌ ಕಿಂಗ್ಸ್‌ ಐಪಿಎಲ್‌ ತಂಡದಿಂದ 1 ಕೋಟಿ ರೂ.
Advertisement

ಇಂಡಿಗೊದಿಂದ 1  ವರ್ಷ ಉಚಿತ ಟಿಕೆಟ್‌:

ಪ್ರತಿಷ್ಠಿತ ವಿಮಾನಯಾನ ಸಂಸ್ಥೆ ಇಂಡಿಗೊ ನೀರಜ್‌ ಚೋಪ್ರಾಗೆ ಒಂದು ವರ್ಷಗಳ ಕಾಲ ಉಚಿತ ಟಿಕೆಟ್‌ ನೀಡುವುದಾಗಿ ಘೋಷಿಸಿದೆ. ಈ ಅವಧಿಯಲ್ಲಿ ಅವರೆಷ್ಟೇ ಪ್ರಯಾಣ ಮಾಡಿದರೂ, ತಾನು ಅದರ ವೆಚ್ಚ ಭರಿಸುತ್ತೇನೆಂದು ಇಂಡಿಗೊ ಹೇಳಿದೆ.

ಸ್ಟಾರ್‌ ಏರ್‌ನಿಂದ ಜೀವಿತಾವಧಿ ಉಚಿತ ಸೇವೆ

ಇನ್ನು ಗೋ ಫ‌ರ್ಸ್ಟ್ ಮತ್ತು ಸ್ಟಾರ್‌ ಏರ್‌ ವಿಮಾನಯಾನ ಸಂಸ್ಥೆಗಳು ಪದಕ ಗೆದ್ದ ಭಾರತ 6 ಅಥ್ಲೀಟ್‌ಗಳು ಮತ್ತು ಪುರುಷರ ಹಾಕಿ ತಂಡದ ಎಲ್ಲ ಆಟಗಾರರಿಗೆ ಉಚಿತ ಟಿಕೆಟ್‌ ನೀಡುವುದಾಗಿ ಘೋಷಿಸಿವೆ. ಗೋ ಫ‌ರ್ಸ್ಟ್  5 ವರ್ಷ ಉಚಿತ ಟಿಕೆಟ್‌ ನೀಡುವುದಾಗಿ  ಹೇಳಿದರೆ, ಸ್ಟಾರ್‌ ಏರ್‌ ಜೀವಿತಾವಧಿ ಪೂರ್ಣ ಉಚಿತ ಟಿಕೆಟ್‌ ನೀಡುವುದಾಗಿ ಹೇಳಿದೆ. ವಿಮಾನಯಾನ ಸಂಸ್ಥೆಗಳ ಈ ನಡೆಗಳು ಅಚ್ಚರಿ ಮೂಡಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next