ಫಿನ್ ಲ್ಯಾಂಡ್: ಒಲಿಂಪಿಕ್ ಪದಕವೀರ ಜಾವೆಲಿನ್ ಪಟು ನೀರಜ್ ಚೋಪ್ರಾ ಶನಿವಾರ ಫಿನ್‌ಲ್ಯಾಂಡ್‌ನಲ್ಲಿ ನಡೆದ ಕುರ್ಟೇನ್ ಗೇಮ್ಸ್‌ನಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿ 86.69 ಮೀಟರ್ ಜಾವೆಲಿನ್ ಎಸೆದು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಅವರು ಟ್ರಿನಿಡಾಡ್ ಮತ್ತು ಟೊಬಾಗೋದ ಕೆಶೋರ್ನ್ ವಾಲ್ಕಾಟ್ ಮತ್ತು ಗ್ರೆನಡಾದ ವಿಶ್ವ ಚಾಂಪಿಯನ್ ಆಂಡರ್ಸನ್ ಪೀಟರ್ಸ್ ರನ್ನು ಹಿಂದಿಕ್ಕಿದರು. ವಾಲ್ಕಾಟ್ 86.64 ಮೀ ಎಸೆದು ಎರಡನೇ ಸ್ಥಾನ ಪಡೆದರೆ, ಪೀಟರ್ಸ್ 84.75 ಮೀ. ದೂರ ಎಸೆದು ಮೂರನೇ ಸ್ಥಾನ ಪಡೆದರು.
ತನ್ನ ಮೊದಲ ಪ್ರಯತ್ನದಲ್ಲೇ 86.69 ಮೀಟರ್ ದೂರು ಜಾವೆಲಿನ್ ಎಸೆದ ನೀರಜ್ ಚೋಪ್ರಾ ನಂತರದ ಎರಡು ಪ್ರಯತ್ನಗಳಲ್ಲಿ ಫೌಲ್ ಆದರು. ಟೋಕಿಯೊ ಒಲಿಂಪಿಕ್ಸ್ ನ ನಂತರ ಇದು ಅವರ ಎರಡನೇ ಸ್ಪರ್ಧೆಯಾಗಿದೆ. ಟೋಕಿಯೊ ಒಲಿಂಪಿಕ್ಸ್ ಅವರು ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದ ಮೊದಲ ಭಾರತೀಯ ಎಂಬ ಸಾಧನೆ ಮಾಡಿದ್ದಾರೆ.
ಈ ವಾರದ ಆರಂಭದಲ್ಲಿ ಪಾವೊ ನೂರ್ಮಿ ಗೇಮ್ಸ್‌ನಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕವನ್ನು ಗೆದ್ದಿದ್ದರು. ಅಲ್ಲಿ ಅವರು 89.30 ಮೀ ಎಸೆಯುವ ಮೂಲಕ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಮುರಿದರು.
ನೀರಜ್ ಚೋಪ್ರಾ ಮುಂದಿನ ಜೂನ್ 30 ರಂದು ಡೈಮಂಡ್ ಲೀಗ್ ನ ಸ್ಟಾಕ್ ಹೋಮ್ ಲೆಗ್ ನಲ್ಲಿ ಭಾಗವಹಿಸಲಿದ್ದಾರೆ.