Advertisement

ನೀರಜ್‌ ಚೋಪ್ರಾಗೆ ಟರ್ಕಿಯಲ್ಲಿ ತರಬೇತಿ

10:42 PM Mar 21, 2023 | Team Udayavani |

ನವದೆಹಲಿ: ಒಲಿಂಪಿಕ್‌ ಚಿನ್ನ ವಿಜೇತ ನೀರಜ್‌ ಚೋಪ್ರಾ ಅವರು ಟರ್ಕಿಯ ಗ್ಲೋರಿಯಾ ನ್ಪೋರ್ಟ್ಸ್ ಕೇಂದ್ರದಲ್ಲಿ 61 ದಿನಗಳ ಕಾಲ ತರಬೇತಿ ಪಡೆಯಲಿದ್ದಾರೆ ಎಂದು ಕ್ರೀಡಾ ಸಚಿವಾಲಯ ತಿಳಿಸಿದೆ.

Advertisement

25ರ ಹರೆಯದ ನೀರಜ್‌ ಅವರವು ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಂ ಯೋಜನೆಯಡಿ ಕಳೆದ ವರ್ಷವೂ ಟರ್ಕಿಯಲ್ಲಿಯೇ ತರಬೇತಿ ಪಡೆದಿದ್ದರು. ಅವರ ಬಾರಿಯ ತರಬೇತಿಯೂ ಈ ಯೋಜನೆಯಡಿ ನಡೆಯಲಿದೆ. ಅವರ ಎಲ್ಲ ಖರ್ಚುಗಳನ್ನು ಈ ಯೋಜನೆಯಡಿ ಭರಿಸಲಾಗುತ್ತದೆ. ಅವರು ಎಪ್ರಿಲ್‌ ಒಂದರಂದು ಟರ್ಕಿಗೆ ತೆರಳಲಿದ್ದು ಮೇ 31ರ ವರಗೆ ತರಬೇತಿ ಸಾಗಲಿದೆ.

ಟರ್ಕಿಯಲ್ಲಿ ತರಬೇತಿ ಪಡೆಯುವ ನೀರಜ್‌ ಚೋಪ್ರಾ ಅವರ ಪ್ರಸ್ತಾವಕ್ಕೆ ಮಾ. 16ರಂದು ಯುವಜನ ಸೇವೆ ಮತ್ತು ಕ್ರೀಡಾ ಸಚಿವಾಲಯವದ ಮಿಷನ್‌ ಒಲಿಂಪಿಕ್‌ ಸೆಲ್‌ ಒಪ್ಪಿಗೆ ಸೂಚಿಸಿದೆ. ನೀರಜ್‌ ಅವರಲ್ಲದೇ ಅವರ ಕೋಚ್‌ ಕ್ಲಾಸ್‌ ಬಾತೊìನೀಟ್ಜ್, ಫಿಸಿಯೋಥೆರಪಿಸ್ಟ್‌ ಅವರ ವಿಮಾನ ಖರ್ಚು, ಊಟ ಮತ್ತು ವಸತಿ, ವೈದ್ಯಕೀಯ ವಿಮೆ, ಸ್ಥಳೀಯ ಸಾರಿಗೆ ಎಲ್ಲವೂ ಈ ಯೋಜನೆಯಡಿ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next