ಯೂಜಿನ್: ಟೋಕಿಯೊ ಒಲಿಂಪಿಕ್ಸ್ ನ ಚಿನ್ನದ ಪದಕ ವೀರ ನೀರಜ್ ಚೋಪ್ರಾ ಅವರು ವಿಶ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್ ನ ಫೈನಲ್ ತಲುಪಿದ್ದಾರೆ.
ನೀರಜ್ ಚೋಪ್ರಾ ಅವರು ಜಾವೆಲಿನ್ ಅರ್ಹತೆಯನ್ನು ಪಡೆದ ಮೊದಲ ಅಥ್ಲೀಟ್ ಆಗಿದ್ದರು. ಫೈನಲ್ ಗೆ ಅರ್ಹತೆ ಪಡೆಯಲು ಚೋಪ್ರಾ 83.5 ಮೀಟರ್ ಗೆ ಜಾವೆಲಿನ್ ಎಸೆಯಬೇಕಿತ್ತು. ಆದರೆ ನೀರಜ್ ಚೋಪ್ರಾ ಅವರು ತಮ್ಮ ಮೊದಲ ಪ್ರಯತ್ನದಲ್ಲೇ 88.39 ಮೀ ದೂರಕ್ಕೆ ಜಾವೆಲಿನ್ ಎಸೆದು ಚೊಚ್ಚಲ ವಿಶ್ವ ಚಾಂಪಿಯನ್‌ಶಿಪ್ ನ ಫೈನಲ್ ಪ್ರವೇಶ ಮಾಡಿದರು.
ಫೈನಲ್ ಪಂದ್ಯ ರವಿವಾರ ನಡೆಯಲಿದೆ. ಇಲ್ಲಿ ಚೋಪ್ರಾ ಪದಕ ಗೆದ್ದರೆ ಅವರು ಅಂಜು ಬಾಬಿ ಜಾರ್ಜ್ ನಂತರ ಪದಕ ಗೆದ್ದ ಎರಡನೇ ಭಾರತೀಯ ಎಂಬ ಗರಿಮೆಗೆ ಪಾತ್ರರಾಗಲಿದ್ದಾರೆ.
ಇದನ್ನೂ ಓದಿ:ಹೊಸ ರಾಷ್ಟ್ರಪತಿಯ ಹೊಸ ಜೀವನ : ಶಿಕ್ಷಕಿಯಿಂದ ಮೇಡಂ ಪ್ರಸಿಡೆಂಟ್ ವರೆಗೆ…
ಹಾಲಿ ಚಾಂಪಿಯನ್ ಗ್ರೆನಡಾದ ಆ್ಯಂಡರ್ಸನ್ ಪೀಟರ್ಸ್ ಮತ್ತು ಮತ್ತೊಬ್ಬ ಭಾರತೀಯ ರೋಹಿತ್ ಯಾದವ್ ಬಿ ಗುಂಪಿನಲ್ಲಿ ಸ್ಪರ್ಧಿಸಲಿದ್ದಾರೆ. ನೀರಜ್ ಚೋಪ್ರಾ ಅವರು ಎ ಗುಂಪಿನಲ್ಲಿದ್ದರು.