Advertisement

ಟೋಕಿಯೋ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ನೀರಜ್‌ ಚೋಪ್ರಾ 

01:23 PM Jan 30, 2020 | keerthan |

ನವದೆಹಲಿ: ಮೊಣಕೈ ಗಾಯದಿಂದ ಚೇತರಿಸಿಕೊಂಡ ಭಾರತದ ಜಾವೆಲಿನ್‌ ತಾರೆ ನೀರಜ್‌ ಚೋಪ್ರಾ ದಕ್ಷಿಣ ಆಫ್ರಿಕಾದಲ್ಲಿ ನಡೆದಅಥ್ಲೆಟಿಕ್ಸ್‌ ಸೆಂಟ್ರಲ್‌ ನಾರ್ಥ್ ಈಸ್ಟ್‌ (ಎಸಿಎನ್‌ಇ) ಕೂಟದ ಸ್ಪರ್ಧೆ ಯಲ್ಲಿ 87.86 ಮೀ. ಸಾಧನೆಯೊಂದಿಗೆ ಟೋಕಿಯೋ ಒಲಿಂಪಿಕ್ಸ್‌ ಅರ್ಹತೆ ಪಡೆದು ಕೊಂಡಿದ್ದಾರೆ.

Advertisement

2018ರ ಆಗಸ್ಟ್‌ನಲ್ಲಿ ನಡೆದಿದ್ದ ಜಕಾರ್ತಾ ಏಷ್ಯಾಡ್‌ ನೀರಜ್‌ ಪಾಲಿಗೆ ಕೊನೆಯ ಪ್ರಮುಖ ಸ್ಪರ್ಧೆ ಯಾಗಿತ್ತು. ಅಲ್ಲಿ ಅವರು 88.06 ಮೀ. ಎಸೆಯುವ ಮೂಲಕ ಚಿನ್ನದ ಪದಕ ಜಯಿಸಿದ್ದರು. ಮೊಣಕೈ ಗಾಯಕ್ಕೆ ತುತ್ತಾದ ನೀರಜ್‌ ಚೋಪ್ರಾ ಕಳೆದ 2019ರ ಎಲ್ಲ ಸ್ಪರ್ಧೆಗಳಿಂದ ದೂರ ಉಳಿದಿದ್ದರು. ಕಳೆದ ವರ್ಷದ ಕೊನೆಯಲ್ಲಿ ರಾಷ್ಟ್ರೀಯ ಓಪನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ಗೆ ಮರಳಬಹುದೆಂದು ಭಾವಿಸಲಾಗಿತ್ತು. ಆದರೆ ಇನ್ನೂ ಹೆಚ್ಚಿನ ಅವಧಿಯ ವಿಶ್ರಾಂತಿ ಪಡೆದು ಮರಳಿದ್ದಾರೆ.

ಪುನರಾಗಮನ ಸ್ಪರ್ಧೆಯಲ್ಲಿ ಭರ್ಜರಿ ಸಾಧನೆಗೈದಿ ದ್ದಾರೆ. ಗಾಯದ ಸಮಸ್ಯೆಯಿಂದ ಗುಣಮುಖವಾಗಿ ಬಂದ ಮೊದಲ ಕೂಟದಲ್ಲೇ ಇಷ್ಟೊಂದು ಉತ್ತಮ ಫ‌ಲಿತಾಂಶ ನೀಡುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ. ಒಲಿಂಪಿಕ್ಸ್‌ ಅರ್ಹತೆ ಪಡೆದಿರುವುದು ಸಂತಸ ತಂದಿದೆ. ಅಲ್ಲಿ ಇನ್ನೂ ಉತ್ತಮ ಪ್ರದರ್ಶನದೊಂದಿಗೆ ಭಾರತಕ್ಕೆ ಪದಕ ಗೆಲ್ಲಲು ಶ್ರಮಿಸಲಿದ್ದೇನೆ’ ಎಂದು ನೀರಜ್‌ ಚೋಪ್ರಾ ಹೇಳಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next