Advertisement

ನೀರಜ್‌ ಚೋಪ್ರಾ ಧ್ವಜಧಾರಿ

09:13 AM Aug 11, 2018 | Team Udayavani |

ಹೊಸದಿಲ್ಲಿ: ಸ್ಟಾರ್‌ ಜಾವೆಲಿನ್‌ ತ್ರೋವರ್‌ ನೀರಜ್‌ ಚೋಪ್ರಾ ಏಶ್ಯನ್‌ ಗೇಮ್ಸ್‌ ಉದ್ಘಾಟನಾ ಸಮಾರಂಭದ ಪಥಸಂಚಲನದಲ್ಲಿ ಭಾರತದ ಧ್ವಜಧಾರಿಯ ಗೌರವ ಸಂಪಾದಿಸಲಿದ್ದಾರೆ. ಜಕಾರ್ತಾಕ್ಕೆ ತೆರಳ ಲಿರುವ ಭಾರತದ ಕ್ರೀಡಾಪಟುಗಳಿಗೆ ಏರ್ಪಡಿಸಲಾದ ಬೀಳ್ಕೊ ಡುಗೆ ಸಮಾರಂಭದಲ್ಲಿ ಇಂಡಿಯನ್‌ ಒಲಿಂಪಿಕ್‌ ಅಸೋಸಿಯೇಶನ್‌ (ಐಒಎ) ಅಧ್ಯಕ್ಷ ನರೀಂದರ್‌ ಬಾತ್ರಾ ಈ ವಿಷಯವನ್ನು ಪ್ರಕಟಿಸಿದರು. ಆ. 18ರಿಂದ ಎ. 2ರ ತನಕ ಕ್ರೀಡಾಕೂಟ ನಡೆಯಲಿದೆ.

Advertisement

20ರ ಹರೆಯದ ನೀರಜ್‌ ಚೋಪ್ರಾ ಕಳೆದ ಗೋಲ್ಡ್‌ ಕೋಸ್ಟ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು. ಕಳೆದ ತಿಂಗಳು ಫಿನ್‌ಲ್ಯಾಂಡಿನಲ್ಲಿ ನಡೆದ ಸಾವೋ ಗೇಮ್ಸ್‌ನಲ್ಲೂ ಸ್ವರ್ಣ ಸಾಧನೆಯನ್ನು ಪುನರಾವರ್ತಿಸಿದ್ದರು.

2017ರ ಏಶ್ಯನ್‌ ಆ್ಯತ್ಲೆಟಿಕ್‌ ಚಾಂಪಿಯನ್‌ಶಿಪ್‌ನಲ್ಲಿ 85.23 ದೂರದ ಸಾಧನೆಯೊಂದಿಗೆ ಚಿನ್ನದ ಪದಕ ಗೆದ್ದ ಹೆಗ್ಗಳಿಕೆ ಕೂಡ ನೀರಜ್‌ ಚೋಪ್ರಾ ಪಾಲಿಗಿದೆ. ಪೋಲೆಂಡ್‌ನ‌ಲ್ಲಿ ನಡೆದ 2016ರ ಐಎಎಫ್ ವಿಶ್ವ ಅಂಡರ್‌-20 ಚಾಂಪಿಯನ್‌ಶಿಪ್‌ನಲ್ಲೂ ಬಂಗಾರದಿಂದ ಸಿಂಗಾರಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next