ಚೆನ್ನೈ : ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ ಅವರಿಗೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ವಿಶೇಷ ಜೆರ್ಸಿ ಹಾಗೂ ಒಂದು ಕೋಟಿ ರೂ. ಬಹುಮಾನ ನೀಡಿ ಗೌರವಿಸಿದೆ. ಹಳದಿ ಬಣ್ಣದ ಈ ಜೆರ್ಸಿಯಲ್ಲಿ ಅವರ ಒಲಿಂಪಿಕ್ಸ್ ಸಾಧನೆಯ 87.58 ಮೀ. ದೂರದ ಸಂಖ್ಯೆಯನ್ನು ದಾಖಲಿಸಲಾಗಿದೆ.
“ನೀರಜ್ ಅವರ ಅದ್ಭುತ ಸಾಧನೆಗಾಗಿ ಇಡೀ ರಾಷ್ಟ್ರವೇ ಹೆಮ್ಮೆಪಡುತ್ತದೆ. ಒಲಿಂಪಿಕ್ಸ್ ಟ್ರ್ಯಾಕ್ ಆ್ಯಂಡ್ ಫೀಲ್ಡ್‌ನಲ್ಲಿ ಮೊದಲ ಪದಕ ಗೆದ್ದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅವರು ಮುಂದಿನ ಕ್ರೀಡಾ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ.
87.58 ಭಾರತೀಯ ಕ್ರೀಡಾ ಇತಿಹಾಸದಲ್ಲಿ ಶಾಶ್ವತವಾಗಿ ಅಚ್ಚಳಿಯದ ಸಂಖ್ಯೆಯಾಗಿದೆ. ನೀರಜ್ ಅವರಿಗೆ ಈ ವಿಶೇಷ ಜೆರ್ಸಿಯನ್ನು ಉಡುಗೊರೆಯಾಗಿ ನೀಡುವುದು ನಮ್ಮ ಪಾಲಿಗೊಂದು ಗೌರವ.
ಅವರು ದೇಶಕ್ಕೆ ಇನ್ನಷ್ಟು ಕೀರ್ತಿ ತರಲಿ ಎಂದು ಹಾರೈಸುತ್ತೇವೆ’ ಎಂದು ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕೆ.ಎಸ್. ವಿಶ್ವನಾಥನ್ ಈ ಸಂದರ್ಭದಲ್ಲಿ ಹೇಳಿದರು.
ಇದನ್ನೂ ಓದಿ :ಕಾಂಗ್ರೆಸ್ ಮಾಡಿದ ರಸ್ತೆ,ವಿಮಾನ ನಿಲ್ದಾಣ ಸೇರಿ ಎಲ್ಲವನ್ನೂ ಬಿಜೆಪಿ ಮಾರುತ್ತಿದೆ:ಪ್ರಿಯಾಂಕಾ