Advertisement

ಸೈನಿಕನ ದೇಶಪ್ರೇಮ ಗೀತೆ ‘ನೀನೇ ನನ್ನ ಪ್ರೇಮ’

05:22 PM Dec 28, 2022 | Team Udayavani |

ನಟ ನಿಶ್ಚಿತ್‌ ಕೊರೋಡಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ “ನೀನೆ ನನ್ನ ಪ್ರೇಮ’ ಮ್ಯೂಸಿಕ್‌ ಆಲ್ಬಂ ಇತ್ತೀಚೆಗೆ ಬಿಡುಗಡೆಯಾಗಿದೆ. ದೇಶ ಕಾಯುವ ಸೈನಿಕನ ಕಥೆಯಾಧರಿಸಿದ “ನೀನೇ ನನ್ನ ಪ್ರೇಮ’ ಮ್ಯೂಸಿಕ್‌ ವಿಡಿಯೋ ಆಲ್ಬಂನಲ್ಲಿ ಸೈನಿಕನ ಮನಸ್ಸಿನ ತಲ್ಲಣ ಮತ್ತು ಭಾವನೆಗಳನ್ನು ಮನಮುಟ್ಟುವಂತೆ ಚಿತ್ರಿಸಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಗೀತೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Advertisement

“ನೀನೆ ನನ್ನ ಪ್ರೇಮ’ ಗೀತೆಯಲ್ಲಿ ನಟ ನಿಶ್ಚಿತ್‌ ಕೊರೋಡಿ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಿಶ್ವಿ‌ಕಾ ಭಾರದ್ವಾಜ್‌ ನಾಯಕಿಯಾಗಿದ್ದಾರೆ. ಉಳಿದಂತೆ ಸಂದೀಪ್‌ ಮಲಾನಿ, ಪಾರ್ಥ ನಂದೀಶ್‌, ಕಲಾಜ್ಯೋತಿ, ನಾಗಮಣಿ ನಾಗಭೂಷಣ್‌ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಯುವ ಪ್ರತಿಭೆ ನಾಗೇಂದ್ರ ಬಿಜೂರ್‌ ಹಾಗೂ ಚಂದ್ರ ಲವ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಗೀತೆಗೆ ಬಾಲಿವುಡ್‌ನ‌ ಖ್ಯಾತ ಹಿನ್ನಲೆ ಗಾಯಕ ಅರ್ಮನ್‌ ಮಲ್ಲಿಕ್‌ ಹಾಗೂ ಶಶಿಕಲಾ ಸುನಿಲ್‌ ಧ್ವನಿಯಾಗಿದ್ದಾರೆ. ಶಶಿಕುಮಾರ್‌ ಶಾಂತರಾಜು ಸಂಗೀತ ಸಂಯೋಜನೆಯಲ್ಲಿ ಈ ಹಾಡು ಮೂಡಿಬಂದಿದೆ. ವಿವಿಯನ್‌ ಅಂಬ್ರೋಸ್‌ ಕ್ಯಾಮರಾ ಕೈಚಳಕ ಅದ್ಭುತವಾಗಿ ಮೂಡಿ ಬಂದಿದೆ.

ಇನ್ನು ಈ ಗೀತೆಯನ್ನು ತಂಡ ದೇಶದ ಸೈನಿಕರಿಗೆ ಸಮರ್ಪಣೆ ಮಾಡಿದೆ. ಗೀತೆಯಲ್ಲಿ ಸೈನಿಕನ ದೇಶಭಕ್ತಿ ಮತ್ತು ಅವರ ಕುಟುಂಬದವರ ಭಾವನೆಗಳನ್ನು ಸಹಜವಾಗಿ ಚಿತ್ರಿಸಲಾಗಿದೆ. “ಪ್ರತಿಯೊಬ್ಬರಿಗೂ ಸೈನಿಕರ ಕಾರ್ಯ ಮತ್ತು ಅವರ ಸೇವೆಯ ಬಗ್ಗೆ ಹೆಮ್ಮೆ ಮೂಡುವಂತೆ ಮಾಡುವ ಸಲುವಾಗಿ ಇದೊಂದು ಚಿಕ್ಕ ಪ್ರಯತ್ನ. ನಮ್ಮ ಪ್ರಯತ್ನಕ್ಕೆ ಪ್ರೇಕ್ಷಕರು ಮತ್ತು ಚಿತ್ರರಂಗದಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಮ್ಮ ಪ್ರಯತ್ನ ಸಾರ್ಥಕವಾಗಿದೆ’ ಎನ್ನುತ್ತಾರೆ. “ನೀನೆ ನನ್ನ ಪ್ರೇಮ’ ಗೀತೆಯ ಹಿಂದಿನ ರೂವಾರಿ ನಾಗೇಂದ್ರ ಬಿಜೂರ್‌.

Advertisement

Udayavani is now on Telegram. Click here to join our channel and stay updated with the latest news.

Next