Advertisement
“ಇನ್ಸ್ಟಂಟ್ ಬಾಲಿವುಡ್” ಜೊತೆ ಮಾತನಾಡಿದ ಅವರು “ ಚಿತ್ರರಂಗದಲ್ಲಿ ಒಬ್ಬ ಕಲಾವಿದನಾಗಿ ಎಲ್ಲ ರೀತಿಯ ದೃಶ್ಯಗಳನ್ನು ಮಾಡಬೇಕು, ಕೆಲವೊಮ್ಮೆ ಕೆಸರಿನಲ್ಲಿ ಹೆಜ್ಜೆ ಹಾಕಬೇಕು, ಕೆಲವೊಮ್ಮೆ ಬಿಸಿಲಿನಲ್ಲಿ ಗಂಟೆಗಟ್ಟಲೆ ನಿಲ್ಲಬೇಕಾಗುತ್ತದೆ. ಹಲವು ವರ್ಷಗಳ ಹಿಂದೆ ದಿಲೀಪ್ ಧವನ್ ಜತೆ ಧಾರಾವಾಹಿಯೊಂದನ್ನು ಮಾಡಿದ್ದೆ. ಇದರಲ್ಲಿ ನಾನು ಲಿಪ್-ಟು-ಲಿಪ್ ಕಿಸ್ ಮಾಡಿದ್ದೆ. ಇದು ಭಾರತೀಯ ಟಿವಿಯಲ್ಲಿ ಮೊಟ್ಟಮೊದಲ ಲಿಪ್-ಟು-ಲಿಪ್ ಚುಂಬನದ ದೃಶ್ಯವಾಗಿತ್ತು. ಆ ಸಮಯದಲ್ಲಿ ನಾನು ರಾತ್ರಿಯಿಡೀ ನಿದ್ದೆ ಮಾಡಲು ಸಾಧ್ಯವಾಗಲಿಲ್ಲ. ಅವನು ನನ್ನ ಸ್ನೇಹಿತನಂತೆ ಇರಲಿಲ್ಲ,ಅವನು ನೋಡೋಕೆ ಚೆನ್ನಾಗಿ ಕಾಣುತ್ತಿದ್ದ. ಆದರೆ ಆ ಸಂದರ್ಭಗಳಲ್ಲಿ ಅದು ಮುಖ್ಯವಾಗಿರಲಿಲ್ಲ. ದೈಹಿಕವಾಗಿ ಮತ್ತು ಮಾನಸಿಕವಾಗಿ ನಾನು ಸಿದ್ಧವಾಗಿರಲಿಲ್ಲ. ನಾನು ತುಂಬಾ ಚಿಂತಿತಳಾಗಿದ್ದೆ. ಆದರೆ ನಾನು ಅದನ್ನು ಮಾಡಲೇಬೇಕಿತ್ತು. ಕೆಲವರಿಗೆ ಕಾಮಿಡಿ ಬರಲ್ಲ, ಕೆಲವರಿಗೆ ಕ್ಯಾಮೆರಾ ನೋಡಿದಾಗ ಕಣ್ಣಲ್ಲಿ ಅಳು ಬರಲ್ಲ. ಆದರೆ ನಾನು ಜಾಸ್ತಿ ಯೋಚಿಸದೇ ಅದನ್ನು ಮಾಡಿಯೇ ಬಿಟ್ಟೆ. ಕಿಸ್ಸಿಂಗ್ ಸೀನ್ ಮುಗಿದ ತಕ್ಷಣ ನನ್ನ ಬಾಯಿಯನ್ನು ನಾನು ಡೆಂಟಲ್ ನಿಂದ ತೊಳೆದುಕೊಂಡಿದ್ದೆ. ಆ ಸ್ಥಿತಿ ನನಗೆ ತುಂಬಾ ಕಷ್ಟಕರವಾಗಿತ್ತು” ಎಂದು ಹೇಳಿದ್ದಾರೆ.
Advertisement
ಫಸ್ಟ್ ಕಿಸ್ಸಿಂಗ್ ಸೀನ್ ಬಳಿಕ ಬಾಯಿಯನ್ನು ಡೆಂಟಲ್‌ನಿಂದ ತೊಳೆದುಕೊಂಡಿದ್ದೆ: ನೀನಾ ಗುಪ್ತಾ
03:10 PM Jun 28, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.