Advertisement
ಬಿಜಕಲ್ ಗ್ರಾಮದ ಗೋಪಾಲರಾವ್ ದೇಸಾಯಿ ಅವರ ಹೊಲದಲ್ಲಿ ಇರುವ ಗದ್ದಿ ದ್ಯಾಮಮ್ಮ ಎಂಬುವ ದೊಡ್ಡ ಬೇವಿನ ಮರದಿಂದ ಕಳೆದ ಒಂದು ವಾರದಿಂದ ಬಿಳಿ ಹಾಲು ಹೊರಬರುತ್ತಿದೆ. ಇದನ್ನು ನೋಡಲು ಸುತ್ತಮುತ್ತ ಜನ ಹಾಗೂ ಬಿಜಕಲ್ ಗ್ರಾಮಸ್ಥರು ತಂಡೋಪತಂಡವಾಗಿ 1ಕಿ.ಮೀ. ದೂರದಿಂದ ನಡೆದು ಕೊಂಡು ಬರುತ್ತಿದ್ದಾರೆ. ಇದು ದೈವ ಲೀಲೆ ಎಂದೇ ನಂಬಿ ಗಿಡಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಬೇವಿನ ಗಿಡದ ಬುಡಕ್ಕೆ ಕಲ್ಲುಗಳನ್ನಿಟ್ಟಿ ಗದ್ದಿ ದ್ಯಾಮಮ್ಮ ದೇವಿ ರೂಪದಲ್ಲಿ ಪೂಜಿಸುತ್ತಿದ್ದಾರೆ. ಸುದ್ದಿ ತಿಳಿದು ಸುತ್ತಲಿನ ಗ್ರಾಮಗಳ ಜನ ತಂಡೋಪ ತಂಡವಾಗಿ ಬಂದು ಮರವನ್ನು ವೀಕ್ಷಿಸುತ್ತಿದ್ದಾರೆ. ಹಾಲು ಜಿನುಗುತ್ತಿರುವುದು ಪವಾಡವೆಂದೇ ನಂಬಿ, ಪೂಜೆ ಸಲ್ಲಿಸುತ್ತಿದ್ದಾರೆ. ವಿಶೇಷ ಪೂಜೆ ಮಾಡಿ ಇಷ್ಟಾರ್ಥಸಿದ್ಧಿಗಾಗಿ ಪ್ರಾರ್ಥಿಸುತ್ತಿದ್ದಾರೆ.
Related Articles
Advertisement
ವೈಜ್ಞಾನಿಕವಾಗಿ ನೋಡಿದಾಗ ಬೇವಿನ ಮರದಲ್ಲಿ ಬಿಳಿ ದ್ರವ ಸುರಿಯೋದು ಸಹಜ ಪ್ರಕ್ರಿಯೆ ಎಂದಿದ್ದರೂ, ಜನ ಮಾತ್ರ ವಿಸ್ಮಯ ಎನ್ನುವ ರೀತಿಯಲ್ಲಿ ಅದನ್ನು ವೀಕ್ಷಿಸುತ್ತ್ತಿದ್ದಾರೆ. ನಾಳೆ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ. – ಶಿವಶಂಕರ ರ‍್ಯಾವಣಿಕಿ ಅರಣ್ಯ ಇಲಾಖೆ ಕುಷ್ಟಗಿ.
-ಮಲ್ಲಿಕಾರ್ಜುನ ಮೆದಿಕೇರಿ