Advertisement
“2015ರ ನಂತರ ನಮ್ಮ ದೇಶದಲ್ಲಿ ಉತ್ಪಾದಿಸಿದ ಯೂರಿಯಾ ಮತ್ತು ಆಮದು ಮಾಡಿದ ಯೂರಿಯಾ ಎಲ್ಲದಕ್ಕೂ ಬೇವಿನೆಣ್ಣೆ ಲೇಪಿಸಲಾಗುತ್ತಿದೆ…’ ಇದು, ಈ ವರ್ಷದ ಆರಂಭದಲ್ಲಿ ಕೇಂದ್ರ ಸರಕಾರದ ರಾಸಾಯನಿಕ ಮತ್ತು ಫರ್ಟಿಲೈಸರ್‌ಗಳ ಸಹಾಯಕ ಸಚಿವ ಇಂದರ್ಜಿತ್ ಸಿಂಗ್ ನೀಡಿದ ಹೇಳಿಕೆ.
Related Articles
Advertisement
ಮಾರಾಟಕ್ಕಿಂತ ಬೆಲೆ ಹೆಚ್ಚುಗಮನಿಸಿ: ಯೂರಿಯಾದ ಮಾರಾಟ ದರವನ್ನು ಕೇಂದ್ರ ಸರಕಾರ ನಿಯಂತ್ರಿಸುತ್ತಿದೆ. ಯೂರಿಯಾ ಉತ್ಪಾದಿಸುವ ಕಂಪನಿಗಳ ಉತ್ಪಾದನಾ ವೆಚ್ಚವು ಮಾರಾಟ ಬೆಲೆಗಿಂತ ಹೆಚ್ಚಾಗಿದೆ; ಆ ಕಂಪನಿಗಳಿಗೆ ಈ ವೆಚ್ಚದ ವ್ಯತ್ಯಾಸವನ್ನು ತುಂಬಿ ಕೊಡಲಿಕ್ಕಾಗಿ ಕೇಂದ್ರ ಸರಕಾರವು ಪ್ರತಿ ವರುಷ ರೂ.70,000 ಕೋಟಿ ರೂಗಳನ್ನು ಸಬ್ಸಿಡಿಯ ರೂಪದಲ್ಲಿ ಪಾವತಿಸುತ್ತಿದೆ. ಬೇವಿನೆಣ್ಣೆ ಲೇಪಿಸಿದ ಯೂರಿಯಾದ ಮೂಲಕ ಈ ಸಬ್ಸಿಡಿ ಹೊರೆಯನ್ನು ರೂ.20,000 ಕೋಟಿ ಕಡಿಮೆ ಮಾಡ ಬಹುದೆಂಬುದು ಕೇಂದ್ರ ಸರಕಾರದ ಲೆಕ್ಕಾಚಾರ. ಏಕೆಂದರೆ, ಬೇವಿನೆಣ್ಣೆ ಲೇಪಿಸಿದ ಯೂರಿಯಾವನ್ನು ಇತರ ಕೈಗಾರಿಕಾ ಉದ್ದೇಶಗಳಿಗೆ (ಸೌಂದರ್ಯ ಪ್ರಸಾದನಗಳ ಮತ್ತು ಔಷಧಿಗಳ ಉತ್ಪಾದನೆ) ಹಾಗೂ ಹಾಲಿಗೆ ಕಲಬೆರಕೆ ಮಾಡಲಿಕ್ಕಾಗಿ ಬಳಸಲು ಸಾಧ್ಯವಿಲ್ಲ. ಇದರಿಂದಾಗಿ ಯೂರಿಯಾದ ಬೇಡಿಕೆ ಕಡಿಮೆಯಾಗುತ್ತದೆ. ಆದರೆ, ರಾಸಾಯನಿಕ ಗೊಬ್ಬರ ಮಂತ್ರಾಲಯದ ಬಳಿಯಿರುವ ಮಾಹಿತಿ ಪರಿಶೀಲಿಸಿದಾಗ, ಕೇಂದ್ರ ಸರಕಾರವು ತನ್ನ ಉದ್ದೇಶ ಸಾಧನೆಯಿಂದ ಹಿಂದುಳಿದಿದೆ ಎಂಬುದು ಸ್ಪಷ್ಟವಾಗುತ್ತದೆ. 2015 ರಿಂದೀಚೆಗೆ, ಯೂರಿಯಾ ಬಳಕೆ ಹೆಚ್ಚಾಗಿದೆ: ವರ್ಷಕ್ಕೆ 29.95 ದಶಲಕ್ಷ$ ಟನ್ನುಗಳಿಂದ 31.55 ದಶಲಕ್ಷ ಟನ್ನುಗಳಿಗೆ ಏರಿದೆ. ಯೂರಿಯಾದ ಆಂತರಿಕ ಉತ್ಪಾದನೆ ಸ್ಥಿರವಾಗಿದ್ದು, ಆಮದು ಶೇ.38 ಜಾಸ್ತಿಯಾಗಿದೆ. ಬೃಹತ್ ಪರಿಮಾಣದ ಈ ಯೂರಿಯಾಕ್ಕೆ ಲೇಪಿಸಲು ಅಗತ್ಯವಾದ ಬೇವಿನೆಣ್ಣೆ ನಮ್ಮಲ್ಲಿಲ್ಲ. ಬೇವಿನ ಎಣ್ಣೆಗೆ ಕೊರತೆ ಇದೆ
ಬೇವಿನೆಣ್ಣೆ ಲೇಪಿಸಿದ ಯೂರಿಯಾ ಉತ್ಪಾದಿಸಲಿಕ್ಕಾಗಿ, ಒಂದು ಟನ್ ಯೂರಿಯಾಕ್ಕೆ 600 ಗ್ರಾಮ… ಬೇವಿನೆಣ್ಣೆ ಸಿಂಪಡಿಸ ಬೇಕೆಂಬ ಮಾನಕವನ್ನು (ಸ್ಟಾಂಡರ್ಡ…) ರಾಸಾಯನಿಕ ಗೊಬ್ಬರಗಳ ಮಂತ್ರಾಲಯ ಘೋಷಿಸಿದೆ. ಇದರ ಪ್ರಕಾರ, ನಮ್ಮ ದೇಶದಲ್ಲಿ ಪ್ರತಿ ವರ್ಷ ಉಪಯೋಗಿಸುವ 32 ದಶಲಕ್ಷ$ ಟನ್ ಯೂರಿಯಾಕ್ಕೆ ಲೇಪಿಸಲಿಕ್ಕಾಗಿ ಕನಿಷ್ಠ 20,000 ಟನ್ ಬೇವಿನೆಣ್ಣೆ ಅಗತ್ಯ ಎನ್ನುತ್ತಾರೆ ತಮಿಳುನಾಡಿನ ಬೇವಿನೆಣ್ಣೆ ಮತ್ತು ಹಿಂಡಿ ಅಸೋಸಿಯೇಷನಿನ ರಾಜ್ಯಾಧ್ಯಕ್ಷ ರವೀಂದ್ರನಾಥನ್. ಆದರೆ ನಮ್ಮ ದೇಶದಲ್ಲಿ ಸಂಗ್ರಹಿಸುವ 30,000 ಟನ್ ಬೇವಿನೆಣ್ಣೆ ಬೀಜದ ಶೇಕಡಾ 10ರಷ್ಟು ಮಾತ್ರ ಸಂಸ್ಕರಿಸಲಾಗುತ್ತದೆ. ಇದರಿಂದ ಸಿಗುವ ಬೇವಿನೆಣ್ಣೆ ಕೇವಲ 3,000 ಟನ್ ಎಂದು ವಿವರಿಸುತ್ತಾರೆ ರವೀಂದ್ರನಾಥನ್. ಇದು 32 ದಶಲಕ್ಷ ಟನ್ ಯೂರಿಯಾದ ಶೇ.15ರಷ್ಟಕ್ಕೆ ಲೇಪಿಸಲು ಮಾತ್ರ ಸಾಕಾಗುತ್ತದೆ. ಅಂದರೆ, ನಮ್ಮ ದೇಶದಲ್ಲಿ ಬೇವಿನೆಣ್ಣೆಯ ಕೊರತೆ ಶೇ.85. ಬೇವಿನೆಣ್ಣೆಯ ಬೇಡಿಕೆ ಮತ್ತು ಪೂರೈಕೆಯ ಅಂತರದಿಂದಾಗಿ ಕಲಬೆರಕೆ ಬೇವಿನೆಣ್ಣೆಯ ದಂಧೆ ಬೆಳೆಯುತ್ತಿದೆ. ಇದನ್ನು ಗಮನಿಸಿದ ರಾಸಾಯನಿಕ ಗೊಬ್ಬರಗಳ ಮಂತ್ರಾಲಯವು ಬೇವಿನೆಣ್ಣೆಯ ಕಲಬೆರಕೆ ತಡೆಯಲಿಕ್ಕಾಗಿ 2017ರಲ್ಲಿ ಸೂಕ್ತ ಆದೇಶ ನೀಡಿದೆ. ಆದರೆ ಸರಕಾರದ ಆದೇಶ ಕಟ್ಟುನಿಟ್ಟಾಗಿ ಜಾರಿಯಾಗಿಲ್ಲ. ಭಾರತವು 25 ದಶಲಕ್ಷ ಬೇವಿನ ಮರಗಳ ದೇಶ. ಶೇ.80ರಷ್ಟು ಮರಗಳು ಸಹಜವಾಗಿ ಒಣ ಪ್ರದೇಶಗಳಲ್ಲಿ ಬೆಳೆದವುಗಳು. ನಮ್ಮ ದೇಶದಲ್ಲಿ ಬೇವಿನ ಬೀಜಗಳ ಸಂಗ್ರಹ ಮತ್ತು ಸಂಸ್ಕರಣಾ ವ್ಯವಸ್ಥೆ ಸರಿಯಾಗಿಲ್ಲ. ಹಾಗಾಗಿ, ಬೇವಿನ ಮರಗಳ ಬೀಜದ ಶೇ.10 ಮಾತ್ರ ಬೇವಿನೆಣ್ಣೆ ಉತ್ಪಾದನೆಗೆ ಲಭ್ಯ. (ಉಳಿದ ಶೇ.90ರಷ್ಟು ಸಾವಯವ ಗೊಬ್ಬರವಾಗಿ ಬಳಕೆಯಾಗುವ ಬೇವಿನಹಿಂಡಿ ಉತ್ಪಾದನೆಗೆ ಹೋಗುತ್ತಿದೆ.) ಲಾಭ ನಷ್ಟದ ಲೆಕ್ಕಾಚಾರ
ಯೂರಿಯಾ ಉತ್ಪಾದಕರಿಗೆ ಬೇವಿನೆಣ್ಣೆ ಮಾರಾಟ ಮಾಡುವುದು ಲಾಭದಾಯಕವಲ್ಲ ಎಂಬುದು ಬೇವಿನೆಣ್ಣೆ ಉತ್ಪಾದಕರ ಅಭಿಪ್ರಾಯ. ಕಹಿಬೇವಿನ ಬೀಜಗಳಿಂದ ಬೇವಿನೆಣ್ಣೆ ತೆಗೆಯುವುದಕ್ಕೆ ದೊಡ್ಡ ಪ್ರಮಾಣದ ಬಂಡವಾಳ ಹೂಡಿಕೆ ಅಗತ್ಯ. ಒಂದು ಲೀಟರ್ ಬೇವಿನೆಣ್ಣೆ ಉತ್ಪಾದಿಸಲು ನಾವು ಮಾಡುವ ವೆಚ್ಚ 150 ರೂಪಾಯಿ – ಬೇವಿನ ಬೀಜ ಸಂಗ್ರಹಣೆ ಮತ್ತು ಸಂಸ್ಕರಣೆಗಾಗಿ. ಆದರೆ, ಯೂರಿಯಾ ಉತ್ಪಾದಕರು ಪಾವತಿಸುವುದು ಲೀಟರಿಗೆ 80ರಿಂದ 90 ರೂಪಾಯಿ ಎನ್ನುತ್ತಾರೆ ರವೀಂದ್ರನಾಥನ್. ಹಾಗಾಗಿ, ಅನೇಕ ಬೇವಿನೆಣ್ಣೆ ಉತ್ಪಾದಕರು ಅದನ್ನು ಸೌಂದರ್ಯ ಪ್ರಸಾದನಗಳು, ಸಾಬೂನು ಮತ್ತು ಔಷಧಿ ತಯಾರಕರಿಗೆ ಮಾರುತ್ತಾರೆ ಅಥವಾ ರಫ್ತು ಮಾಡುತ್ತಾರೆ. ಅಂತೂ ನಮ್ಮ ದೇಶದಲ್ಲಿ ಉತ್ಪಾದನೆಯಾಗುವ ಶೇ.85ಷ್ಟು ಯೂರಿಯಾಕ್ಕೆ ಬೇವಿನೆಣ್ಣೆ ಲೇಪಿಸಲಾಗುತ್ತಿಲ್ಲ ಅಥವಾ ಕಲಬೆರಕೆ ಬೇವಿನೆಣ್ಣೆ ಲೇಪಿಸಲಾಗುತ್ತಿದೆ. ಇಂಥ ಯೂರಿಯಾದಿಂದ ಬೆಳೆಗಳ ಉತ್ಪಾದಕತೆ ಹೆಚ್ಚುವುದಿಲ್ಲ ಹಾಗೂ ಯೂರಿಯಾ ಬಳಕೆ ಕಡಿಮೆ ಆಗೋದಿಲ್ಲ. ಆದರೂ ನಮ್ಮ ಸರಕಾರ ಎಚ್ಚೆತ್ತಿಲ್ಲ. ಬೇವಿನ ಉತ್ಪನ್ನಗಳ ಪೂರೈಕೆ ದೇಶವಾಗಿ ಚೀನಾ ದಾಪುಗಾಲಿಟ್ಟಿದೆ. ವಿಶ್ವಸಂಸ್ಥೆ ಕಹಿಬೇವನ್ನು 21ನೆಯ ಶತಮಾನದ ಮರವೆಂದು ಘೋಷಿಸಿದ್ದು, ಚೀನಾ ಇದರ 20 ದಶಲಕ್ಷ ಸಸಿಗಳನ್ನು ನೆಟ್ಟು ಬೆಳೆಸಿದೆ. ಆದ್ದರಿಂದ, ಜಾಗತಿಕ ಮಾರುಕಟ್ಟೆಯಲ್ಲಿ ಬೇವಿನ ಉತ್ಪನ್ನಗಳ ಶೇ.40ರಷ್ಟು ಪೂರೈಸಲು ಚೀನಾಕ್ಕೆ ಸಾಧ್ಯವಾಗಿದೆ. ಇನ್ನಾದರೂ ನಮ್ಮ ಸರಕಾರ ಬೇವಿನ ಮರಗಳನ್ನು ಬೆಳೆಸಲು ಆದ್ಯತೆ ನೀಡಿ, ಮಹಾತ್ವಾಕಾಂಕ್ಷಿ$ ಯೋಜನೆಯಾದ ಬೇವಿನೆಣ್ಣೆ ಲೇಪಿತ ಯೂರಿಯಾದ ಘನ ಉದ್ದೇಶಗಳ ಸಾಧನೆಗೆ ಒತ್ತು ನೀಡುತ್ತದೆಂದು ಹಾರೈಸೋಣ. ಅಡ್ಡೂರು ಕೃಷ್ಣ ರಾವ್