ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಅನಿಲ ದರಗಳಲ್ಲಿ ಆಗಾಗ್ಗೆ ಏರಿಕೆ ಕಂಡುಬರುತ್ತದೆ. ಆದರೆ ಖುಷಿ ಪಡುವ ಸಂಗತಿ ಎಂದರೆ ರೈಲ್ವೆ ಟಿಕೆಟ್ ದರಗಳನ್ನು ಏರಿಕೆ ಮಾಡಿಲ್ಲ. ಈ ಹಿಂದೆ ಕಲಬುರಗಿಯಲ್ಲಿ ರೈಲ್ವೆ ಡಿವಿಜನ್ ಸ್ಥಾಪನೆಗೆ ಕೂಗು ಕೇಳಿಬಂದಿತ್ತು. ಆದರೆ ಈ ಬಗ್ಗೆ ನಿರ್ಮಲ ಸೀತಾರಾಮನ್ ಅವರು ಪ್ರಸ್ತಾಪ ಮಾಡಿಲ್ಲ. ಹೀಗಾಗಿ ಇದು ರಾಜ್ಯದ ಜನರ ಪಾಲಿಗೆ ನಿರಾಶೆ ತಂದಿದೆ. ಜತೆಗೆ ಹೊಸ ರೈಲ್ವೆ ವಲಯಗಳ ಬಗ್ಗೆ ಸ್ಪಷ್ಟವಾದ ಚಿತ್ರಣ ನೀಡಿಲ್ಲ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್‌ನಲ್ಲಿ ರಾಜ್ಯ ರೈಲ್ವೆ ಪಾಲಿಗೆ “ಬೆವು-ಬೆಲ್ಲ’ದ ಸಮ್ಮಿಲನವಾಗಿದೆ. ಬೆಂಗಳೂರು ಸಬ್ ಅರ್ಬನ್ ಮತ್ತು ಬೆಂಗಳೂರು ಚೆನ್ನೈ ರೈಲು ಯೋಜನೆ ಪ್ರಸ್ತಾಪಿಸಲಾಗಿದ್ದು ಹರ್ಷಕ್ಕೆ ಕಾರಣವಾಗಿದೆ. ಸಬ್ ಅರ್ಬನ್ ರೈಲು ಯೋಜನೆಗಾಗಿ 18600 ಕೋಟಿ ರೂ .ಮೀಸಲಿರಿಸಲಾಗಿದೆ. 2023ರ ವೇಳೆಗೆ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಯೋಜನೆ ಪೂರ್ಣಗೊಳಿಸುವ ಭರವಸೆ ನೀಡಲಾಗಿದೆ.
ರೈಲ್ವೆ ಟ್ರ್ಯಾಕ್ ಬದಿಯಿರುವ ಸ್ಥಳಗಳಲ್ಲಿ ಸೋಲಾರ್ ಫಲಕಗಳ ಅಳವಡಿಕೆಗೆ ಯೋಜನೆ ರೂಪಿಸಲಾಗಿದೆ. 150 ಖಾಸಗಿ ರೈಲು ಸಂಚಾರಗಳ ಪ್ರಸ್ತಾಪ ಮಾಡಲಾಗಿದೆ. 4 ರೈಲ್ವೆ ನಿಲ್ದಾಣಗಳ ಪುನರ್ ನಿರ್ಮಾಣಕ್ಕೆ ಸಂಕಲ್ಪ ಮಾಡಲಾಗಿದೆ. ಜತೆಗೆ ಪ್ರವಾಸಿ ರೈಲುಗಳಿಗೂ ಮಣೆ ಹಾಕಲಾಗಿದೆ. ರೈಲ್ವೆ ಟ್ರ್ಯಾಕ್‌ಗಳ ವಿದ್ಯುದೀಕರಣ ಮಾಡುವುದರಿಂದ ಚಿಕ್ಕಬಾಣಾವರ-ಹುಬ್ಬಳ್ಳಿ, ಚಿಕ್ಕಬಾಣಾವರ-ಹಾಸನ, ಮೈಸೂರು-ಹಾಸನ ಸೇರಿದಂತೆ ಹಲವು ರೈಲ್ವೆ ಟ್ರ್ಯಾಕ್‌ಗಳು ವಿದ್ಯುದೀಕರಣಗೊಳ್ಳಲಿವೆ.
ಈ ಕಾರ್ಯ ಹಂತ-ಹಂತವಾಗಿ ಪೂರ್ಣಗೊಳ್ಳಲಿದೆ. ಸೌರ ಫಲಕಗಳ ಅಳವಡಿಕೆಯಿಂದ ಸಾಕಷ್ಟು ಅನುಕೂಲವಾಗಲಿದೆ. ಹಣದ ಉಳಿತಾಯವಾಗಲಿದೆ. ಟ್ರ್ಯಾಕ್‌ಗಳ ವಿದ್ಯುದೀಕರಣ ಜನರು ಖುಷಿ ಪಡುವ ಸಂಗತಿಯಾಗಿದೆ. ಇದರಿಂದಾಗಿ ಡೀಸೆಲ್ ಉಳಿತಾಯವಾಗಲಿದೆ. ಉಗಿಬಂಡಿಯಿಂದ ಹೊರ ಹೊಮ್ಮುವ ಅನಿಲವನ್ನು ತಡೆಗಟ್ಟಬಹುದಾಗಿದೆ. ಪರಿಸರಕ್ಕೂ ಇದರಿಂದ ಸಾಕಷ್ಟು ವರದಾನವಾಗಲಿದೆ.
ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಅನಿಲ ದರಗಳಲ್ಲಿ ಆಗಾಗ್ಗೆ ಏರಿಕೆ ಕಂಡುಬರುತ್ತದೆ. ಆದರೆ ಖುಷಿ ಪಡುವ ಸಂಗತಿ ಎಂದರೆ ರೈಲ್ವೆ ಟಿಕೆಟ್ ದರಗಳನ್ನು ಏರಿಕೆ ಮಾಡಿಲ್ಲ. ಈ ಹಿಂದೆ ಕಲಬುರಗಿಯಲ್ಲಿ ರೈಲ್ವೆ ಡಿವಿಜನ್ ಸ್ಥಾಪನೆಗೆ ಕೂಗು ಕೇಳಿಬಂದಿತ್ತು. ಆದರೆ ಈ ಬಗ್ಗೆ ನಿರ್ಮಲ ಸೀತಾರಾಮನ್ ಅವರು ಪ್ರಸ್ತಾಪ ಮಾಡಿಲ್ಲ. ಹೀಗಾಗಿ ಇದು ರಾಜ್ಯದ ಜನರ ಪಾಲಿಗೆ ನಿರಾಶೆ ತಂದಿದೆ. ಜತೆಗೆ ಹೊಸ ರೈಲ್ವೆ ವಲಯಗಳ ಬಗ್ಗೆ ಸ್ಪಷ್ಟವಾದ ಚಿತ್ರಣ ನೀಡಿಲ್ಲ. ಒಟ್ಟಾರೆ ರೈಲ್ವೆಗೆ “ಸಿಹಿ-ಕಹಿ’ಎರಡೂ ದಕ್ಕಿದೆ.
* ಕೃಷ್ಣಪ್ರಸಾದ್, ರೈಲ್ವೆ ತಜ್ಞರು