Advertisement

ನೀಲಾವರ ಗೋಶಾಲೆಗೆ ಗೋಗ್ರಾಸ ಹಸ್ತಾಂತರ

03:50 PM Mar 28, 2017 | Team Udayavani |

ಕಾಪು: ಬಿಜೆಪಿ ಗ್ರಾಮ ಸಮಿತಿ ಬೆಳ್ಳೆ – ಕಟ್ಟಿಂಗೇರಿ ಇವರ ವತಿಯಿಂದ ಬೆಳ್ಳೆ ಮೇಲ್ಮನೆ ವಸಂತ ಶೆಟ್ಟಿ ಮತ್ತು ಕುಟುಂಬದವರ ಕಂಬಳ ಗದ್ದೆಯಲ್ಲಿ ಭತ್ತ ನಾಟಿ ಮಾಡಿ ಉಳಿಸಲಾದ ಗೋ ಗ್ರಾಸವನ್ನು ನೀಲಾವರ ಗೋಶಾಲೆಗೆ ಹಸ್ತಾಂತರಿಸಲಾಯಿತು.

Advertisement

ಗೋಗ್ರಾಸವನ್ನು ಸ್ವೀಕರಿಸಿದ ಉಡುಪಿ ಶ್ರೀ ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಬಳಿಕ ಆಶೀರ್ವಚನ ನೀಡಿ, ಗೋ ಸೇವೆಯ ಮೂಲಕ ಸಕ್ರಿಯವಾಗಿ ಸಮಾಜಮುಖೀಯಾಗಿ ಕೆಲಸ ಮಾಡುತ್ತಿರುವ ಬಿಜೆಪಿ ಗ್ರಾಮ ಸಮಿತಿ ಮತ್ತು ಸಹಕರಿಸಿದವರೆಲ್ಲರಿಗೂ ಶ್ರೀ ಕೃಷ್ಣ ಮುಖ್ಯಪ್ರಾಣರ ಅನುಗ್ರಹ ಮತ್ತು ಗೋಮಾತೆಯ ಆಶೀರ್ವಾದವಿರಲಿ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಶ್‌ ಶೆಟ್ಟಿ ಗುರ್ಮೆ ಮಾತನಾಡಿ, ಅತ್ಯಂತ ಕಷ್ಟದಾಯಕ
ವಾದ ಕಾರ್ಯವನ್ನು ಇಷ್ಟದಿಂದ ಮಾಡುವ ಪೇಜಾವರ ಕಿರಿಯ ಶ್ರೀಗಳು ನಮಗೆಲ್ಲರಿಗೂ ಮಾದರಿ, ಆದರಣೀಯರಾಗಿದ್ದಾರೆ. ಇವರೊಂದಿಗೆ ಬಿಜೆಪಿ ಮತ್ತು ಪರಿವಾರದ ಕಾರ್ಯಕರ್ತರೂ ಕೈ ಜೋಡಿಸುತ್ತಿರುವುದು ಶ್ಲಾಘನೀಯ ಎಂದರು.

ಕಾಪು ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರಲೀಧರ ಪೈ, ಬೆಳ್ಳೆ ಗ್ರಾಮ ಸಮಿತಿಯ ಅಧ್ಯಕ್ಷ ರಾಜೇಂದ್ರ ಶೆಟ್ಟಿ, ಕಾರ್ಯ
ದರ್ಶಿ ಸುಧಾಕರ ಪೂಜಾರಿ, ಗ್ರಾ. ಪಂ. ಸದಸ್ಯರಾದ ಗುರುರಾಜ ಭಟ್‌, ದಿವಾಕರ ಸುವರ್ಣ, ಮಮತಾ ಎಸ್‌. ವಾಗ್ಲೆ, ನಿತಿನ್‌, ಮಾಜಿ
ಸದಸ್ಯರಾದ ಪರಶುರಾಮ ಭಟ್‌, ಐವನ್‌ ದಲ್ಮೇಡಾ, ಪರಿವರಾ ಕಾರ್ಯಕರ್ತರಾದ ಕೃಷ್ಣ ಆಚಾರ್ಯ, ಸಚಿನ್‌ ಮೂಡುಬೆಳ್ಳೆ, ರಾಜೇಶ್‌ ಆಚಾರ್ಯ, ತಿಲಕ್‌ರಾಜ್‌, ನವೀನ್‌ ಶೆಟ್ಟಿ, ರಾಮಚಂದ್ರ ಭಟ್‌, ಸ್ತ್ರೀಶಕ್ತಿ ಒಕ್ಕೂಟದ ಜಿಲ್ಲಾಧ್ಯಕ್ಷೆ ಧನಲಕ್ಷ್ಮೀ ಪೂಜಾರಿ, ವಿಘ್ನೇಶ್‌, ವೀರೇಂದ್ರ ಪಾಟ್ಕರ್‌, ಮಹೇಶ್‌ ಮಟ್ಟಾರ್‌, ಜಯ ಶೇರಿಗಾರ್‌, ಹರೀಶ್‌ ದೇವಾಡಿಗ, ಸುಂದರ ಮೂಲ್ಯ, ದಿನೇಶ್‌ ಕಾಮತ್‌, ಸ್ಥಳೀಯರಾದ ವಿನೋದ್‌ ಕೆಸ್ತಲಿನೋ, ಪೋಂಕ್ರಣ್ಣ, ಜೀವನ್‌ ಮೊದಲಾದವರು ಉಪಸ್ಥಿತರಿದ್ದರು.

ಉಡುಪಿ ತಾ. ಪಂ. ಮಾಜಿ ಅಧ್ಯಕ್ಷ ದೇವದಾಸ್‌ ಹೆಬ್ಟಾರ್‌ ಪ್ರಸ್ತಾವನೆಗೈದು, ಸ್ವಾಗತಿಸಿದರು. ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ ಶಶಿಧರ್‌ ವಾಗ್ಲೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next