Advertisement
ತಾಲೂಕಿನ ಮರಳಿಗ ಗ್ರಾಮದಲ್ಲಿ ಮಂಡ್ಯ ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿ, ನಮ್ಮ ಮುಖದಲ್ಲಿ ನೋವು ಕಾಣಿ¤ಲ್ಲ ಅಂತ ಸಿಎಂ ಹೇಳಿದ್ದಾರೆ.
Related Articles
Advertisement
ಸ್ತ್ರೀಶಕ್ತಿ ಏನು ಎನ್ನುವುದನ್ನು ನೀವು ಅವರಿಗೆ ತೋರಿಸಬೇಕು. ಮಂಡ್ಯ ಸ್ವಾಭಿಮಾನವನ್ನು ನೀವೇ ಕಾಪಾಡಬೇಕು. ಈ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಹೇಳಿದರು. ಇಲ್ಲಿಯವರನ್ನು ಮದುವೆ ಆಗಿ ಮಂಡ್ಯದ ಅಳಿಯನಾಗಬೇಕಿಲ್ಲ.
ನಾನು ಮಂಡ್ಯದ ಮಗ ಎಂದು ನಿಖೀಲ್ ವಿರುದ್ಧ ಪರೋಕ್ಷ ವಾಗ್ಧಾಳಿ ನಡೆಸಿದ ಅಭಿಷೇಕ್, ಮೈತ್ರಿ ಅಭ್ಯರ್ಥಿಗೆ ವೋಟ್ ಹಾಕಿದರೆ ಅಂಬರೀಶ್ ಆತ್ಮಕ್ಕೆ ಶಾಂತಿ ಸಿಗಲಿದೆ ಅಂತ ಸಚಿವರೊಬ್ಬರು ಹೇಳುತ್ತಾರೆ. ಇದು ಏನು ಲೆಕ್ಕಾಚಾರ ಅಂತ ಗೊತ್ತಾಗುತ್ತಿಲ್ಲ ಎಂದು ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧವೂ ವಾಗ್ಧಾಳಿ ನಡೆಸಿದರು.
ನನ್ನ ನೋವು ಜನತೆಗೆ ಗೊತ್ತಿದೆ: ಸುಮಮದ್ದೂರು: ನನ್ನ ನೋವು ನನಗೆ ಗೊತ್ತಿದೆ. ಜನರಿಗೆ ಗೊತ್ತಿದೆ. ಅದನ್ನು ಎಲ್ಲರೆದುರು ಪ್ರದರ್ಶನ ಮಾಡಬೇಕಿಲ್ಲ ಎಂದು ಮಂಡ್ಯ ಲೋಕಸಭೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿದರು. ತಾಲೂಕಿನ ಮರಳಿಗ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಭಾಷಣದಲ್ಲಿ ಮಾತನಾಡಿ, ನನ್ನ ಮುಖದಲ್ಲಿ ನೋವಿನ ಛಾಯೆ ಕಾಣಿಸುತ್ತಿಲ್ಲ ಅಂತ ಹೇಳುತ್ತಿದ್ದಾರೆ. ಅಂಬರೀಶ್ ಕಳೆದುಕೊಂಡ ನೋವು ಏನೆಂಬುದು ನನ್ನ ಮನಸ್ಸಿಗೆ, ಹೃದಯಕ್ಕೆ ಗೊತ್ತಿದೆ. ಅಂಬರೀಶ್ ಅವರನ್ನು ಪ್ರೀತಿಸುತ್ತಿದ್ದ ಜನರಿಗೆ ಗೊತ್ತಿದೆ. ಅದನ್ನು ಬಹಿರಂಗವಾಗಿ ಎಲ್ಲರೆದುರು ಪ್ರದರ್ಶನ ಮಾಡಬೇಕಿಲ್ಲ. ನನ್ನ ನೋವನ್ನು ಪ್ರದರ್ಶಿಸಿ ನಾನು ಯಾರನ್ನೂ ಮೆಚ್ಚಿಸಬೇಕಾಗಿಯೂ ಇಲ್ಲ ಎಂದು ಸಿಎಂ ಟೀಕೆಗೆ ತಿರುಗೇಟು ಕೊಟ್ಟರು.