Advertisement

ತೃಣಮೂಲ ಕಾಂಗ್ರೆಸ್‌ ಸರಕಾರ ಕಿತ್ತೂಗೆಯಲು ಸಕಾಲ: ನಡ್ಡಾ

03:06 AM Jul 07, 2020 | Hari Prasad |

ಕೋಲ್ಕತಾ: ಟಿಎಂಸಿ ಆಡಳಿತವಿರುವ ಪಶ್ಚಿಮ ಬಂಗಾಲದಲ್ಲಿ ರಾಜಕಾರಣದ ಅಪರಾಧೀಕರಣ ಹಾಗೂ ಭ್ರಷ್ಟಾಚಾರ ಎಲ್ಲೆ ಮೀರಿವೆ.

Advertisement

ಇಂಥ ದುರುಳ ಸರಕಾರವನ್ನು ಕಿತ್ತೂಗೆಯುವ ಕಾಲ ಬಂದಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ವಾಗ್ಧಾಳಿ ನಡೆಸಿದ್ದಾರೆ.

ಜನ ಸಂಘದ ಅಧ್ಯಕ್ಷ ಶ್ಯಾಮ ಪ್ರಸಾದ್‌ ಮುಖರ್ಜಿಯವರ ಜನ್ಮ ದಿನಾಚರಣೆ ನಿಮಿತ್ತ ಕೋಲ್ಕತಾದ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸಮಾರಂಭ­ದಲ್ಲಿ ಅವರು ಮಾತನಾ­ಡಿದರು.

‘ಜವಾಹರಲಾಲ್‌ ನೆಹರೂ ಅವರ ಅನುಕೂಲ ಸಿಂಧು ರಾಜಕಾರಣ­ವನ್ನು ಆರಂಭದಿಂದಲೇ ವಿರೋಧಿಸುತ್ತಾ ಬಂದಿದ್ದ ಶ್ಯಾಮ ಪ್ರಸಾದ್‌ ಮುಖರ್ಜಿ, ಭಾರತದ ಸಮಗ್ರ ಏಕತೆಗಾಗಿ ಹೋರಾ­ಡಿದರು.

ಇಂದು, ಅವರ ಕನಸು ನನಸಾ­ಗಿದೆ. ಜಮ್ಮು ಕಾಶ್ಮೀರದ ವಿಶೇಷ ಸ್ಥಾನ­ಮಾನವನ್ನು ಮೋದಿ ಸರಕಾರ ಹಿಂಪಡೆ­ದಿದೆ. ಇಂಥ ಸಂದರ್ಭದಲ್ಲೇ ನಾವು ಮುಖರ್ಜಿ­ಯವರ ಹುಟ್ಟುಹಬ್ಬವನ್ನು ಆಚರಿ­ಸು­ತ್ತಿರುವುದು ನಿಜಕ್ಕೂ ಅರ್ಥ­ಪೂರ್ಣವಾದ ವಿಚಾರ” ಎಂದರು.

Advertisement

‘ಬಂಗಾಲದಲ್ಲಿ ರಾಜಕೀಯ ಅಪರಾ­ಧೀಕರಣ ಮೇರೆ ಮೀರಿದೆ. ಪಶ್ಚಿಮ ಬಂಗಾಳ­ದೆಲ್ಲೆಡೆ ಕಮೀಷನ್‌ ದಂಧೆ ಚಾಲ್ತಿಯಲ್ಲಿದೆ. ಕಮೀಷನ್‌ ಕೇಳುವ ರಾಜಕಾರಣಿಗಳನ್ನು ಅಧಿಕಾರದಿಂದ ಕೆಳಗಿಳಿಸಬೇಕಿದೆ. ಅಂದರೆ, ಟಿಎಂಸಿಯ ಜನವಿರೋಧಿ ಆಡಳಿತವನ್ನು ಕೊನೆಗಾಣಿ­ಸ­ಬೇಕಿದೆ. ಬಂಗಾಳದ ಗತವೈಭವವನ್ನು ಮರುಸ್ಥಾಪಿಸಬೇಕಿದೆ” ಎಂದು ಅವರು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next