ರಬಕವಿ ಬನಹಟ್ಟಿ: ಹಿಂದೂ ಧರ್ಮ ಮತ್ತು ಧರ್ಮದ ಆಚರಣೆಗಳನ್ನು ಉಳಿಸಿ ಬೆಳೆಸುವುದರ ಜೊತೆಗೆ ಧರ್ಮವನ್ನು ರಕ್ಷಣೆ ಮಾಡುವ ಕರ್ತವ್ಯ ನಮ್ಮೆಲ್ಲರದಾಗಿದೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಮಂಗಳವಾರ ಇಲ್ಲಿನ ಕಾಡಸಿದ್ಧೇಶ್ವರ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಧರ್ಮದ ರಕ್ಷಣೆಗಾಗಿ ನಾವೆಲ್ಲರೂ ಸ್ವಾಭಿಮಾನವನ್ನು ಬೆಳೆಸಿಕೊಳ್ಳಬೇಕಾಗಿದೆ. ಪುರಾತನ ಕಾಲದಿಂದ ಬಂದಿರುವ ನಮ್ಮ ಸನಾತನ ಧರ್ಮ ವಿಶ್ವ ಶ್ರೇಷ್ಠವಾಗಿದೆ. ಭಾರತೀಯರು ಹಿಂದೂ ಧರ್ಮವನ್ನು ವಿದೇಶಗಳಲ್ಲಿ ಪ್ರಚಾರ ಮಾಡಬೇಕಾದ ಕಾರ್ಯ ನಡೆಯಬೇಕಾಗಿದೆ. ವಿಶ್ವದ ಬಹುತೇಕ ರಾಷ್ಟ್ರಗಳು ನಮ್ಮ ಧರ್ಮದ ಬಗ್ಗೆ ಅಭಿಮಾನ ಹೊಂದಿದ್ದಾರೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಮಂಗಳವಾರ ಪೇಟೆ ದೈವ ಮಂಡಳಿಯ ಅಧ್ಯಕ್ಷ ಶ್ರೀಶೈಲ ಧಬಾಡಿ ಮಾತನಾಡಿ, ಹತ್ತು ವರ್ಷಗಳಲ್ಲಿ ಅಂದಾಜು ರೂ. 2 ಕೋಟಿ ವೆಚ್ಚದಲ್ಲಿ ಕಾಡಸಿದ್ಧೇಶ್ವರ ದೇವಸ್ಥಾನದ ಅಭಿವೃದ್ಧಿಗಾಗಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿಯೂ ಕೂಡಾ ದೇವಸ್ಥಾನದ ಅಭಿವೃದ್ಧಿಯನ್ನು ಕೈಗೊಳ್ಳಲಾಗುವುದು ಎಂದರು.
ಮುಧೋಳದ ನಿರಾಣಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಸಂಗಮೇಶ ನಿರಾಣಿ ಮಾತನಾಡಿ, ರಬಕವಿ ಬನಹಟ್ಟಿಯಲ್ಲಿ ಮಹಾರಾಷ್ಟ್ರ ಮತ್ತು ಗುಜರಾತನಲ್ಲಿ ಸ್ಥಾಪನೆಯಾದಂತೆ ಅತ್ಯಾಧುನಿಕ ಕೈಗಾರಿಕೆ ಕೇಂದ್ರಗಳು ಸ್ಥಾಪನೆಯಾಗಬೇಕಾಗಿದೆ. ಈ ಭಾಗದ ರೈತರು ಅಭಿವೃದ್ಧಿಯಾಗಿದ್ದಾರೆ. ಆದರೆ ನೇಕಾರರು ಮಾತ್ರ ಹಲವಾರು ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ. ನೇಕಾರ ಅಭಿವೃದ್ಧಿಗಾಗಿ ಜವಳಿ ಪಾರ್ಕ್ ನಿರ್ಮಾಣದ ಅಗತ್ಯವಿದೆ ಎಂದರು.
ಡಾ.ಪದ್ಮಜೀತ ನಾಡಗೌಡಪಾಟೀಲ, ರಾಜಶೇಖರ ಮಾಲಾಪುರ, ಶಂಕರ ಸೋರಗಾವಿ, ಶಂಕರ ಜುಂಜಪ್ಪನವರ, ಭೀಮಶಿ ಮಗದುಮ್, ಸಿದ್ದನಗೌಡ ಪಾಟೀಲ, ಮಲ್ಲಿಕಾರ್ಜುನ ತುಂಗಳ, ಈಶ್ವರ ಬಿದರಿ, ಗಂಗಪ್ಪ ಮುಗತಿ, ದಾನಪ್ಪ ಹುಲಜತ್ತಿ, ಸಿದ್ರಾಮ ಸವದತ್ತಿ, ಸಿದ್ಧರಾಜ ಪೂಜಾರಿ, ಪಂಡಿತ ಪಟ್ಟಣ, ಮಹಾಂತೇಶ ಯಾದವಾಡ, ಸೋಮನಾಥ ಗೊಂಬಿ, ಪ್ರಶಾಂತ ಕೊಳಕಿ, ವೀರೂಪಾಕ್ಷಪ್ಪ ಕೊಕಟನೂರ, ಬಸವರಾಜ ಜಾಡಗೌಡ, ಶಂಕರ ಬಾಡಗಿ, ಶಂಕರ ಜಾಲಿಗಿಡದ, ಜಿ.ಎಸ್.ಗೊಂಬಿ, ಧರೆಪ್ಪ ಉಳ್ಳಾಗಡ್ಡಿ, ಶಿವಾನಂದ ಬುದ್ನಿ, ರಕ್ಷಿತಾ ಈಟಿ, ಜಿ.ಎಸ್. ನ್ಯಾಮಗೌಡ ಸೇರಿದಂತೆ ಅನೇಕರು ಇದ್ದರು.