Advertisement

ಸರಿಯಾಗಿ ಬಸ್‌ ಬಿಡಲು ಆಗ್ರಹ

02:59 PM Jun 29, 2019 | Team Udayavani |

ಶಿರಸಿ: ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಶಿರಸಿ ಹುಸರಿ ಮಾರ್ಗವಾಗಿ ಗೋಣರು, ಕಂಡ್ರಾಜಿಗೆ ಬಸ್‌ ಬಿಡುವಂತೆ ಆಗ್ರಹಿಸಿ ವಾಕರಸಾ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿಗೆ ಈ ಭಾಗದ ಪ್ರಯಾಣಿಕರು ಮನವಿ ಸಲ್ಲಿಸಿದರು.

Advertisement

ಈ ಮಾರ್ಗದಲ್ಲಿ ಬಚಗಾಂವ, ಬಸಳೇಕೊಪ್ಪ, ಕಾಳೆಹೊಂಡ, ಬಿಕ್ಕನಳ್ಳಿ, ಹುಸರಿ, ನುರಕಲಕೊಪ್ಪ, ಬ್ಯಾಗದ್ದೆ, ಬದ್ರಾಪುರ, ಕಾನಕೊಪ್ಪ, ಮಾಡನಕೇರಿ, ಗೌಡಕೊಪ್ಪ, ಗೋಣೂರು, ಕಾಯಗುಡ್ಡಿ, ಕಂಡ್ರಾಜಿ ಭಾಗದ ಗ್ರಾಮಸ್ಥರು ಪ್ರಯಾಣಿಸುತ್ತಿದ್ದು, ಅವರಿಗೆ ಸಮರ್ಪಕ ಬಸ್‌ ಸಂಚಾರದಿಂದ ಅನೇಕ ಅನುಕೂಲ ಆಗಲಿವೆ ಎಂದರು.

ಶಿರಸಿ-ಹುಸರಿ ಮಾರ್ಗದಲ್ಲಿ ಪ್ರತಿದಿನ ವಿವಿಧ ಸಮಯದಲ್ಲಿ 3 ಬಸ್‌ಗಳು ಸಂಚರಿಸುತ್ತಿದ್ದರೂ, ಶಾಲಾ-ಕಾಲೇಜು ವಿದ್ಯಾರ್ಥಿಗಳ ಸಮಯಕ್ಕೆ ಅನುಕೂಲವಾಗುವಂತೆ ಇಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರತಿದಿನ ಬೆಳಗ್ಗೆ 7ಕ್ಕೆ ಶಿರಸಿಯಿಂದ ಹುಸರಿ-ಗೊಣೂರು ಮಾರ್ಗವಾಗಿ ಹೆಚ್ಚುವರಿ ಬಸ್‌ ಓಡಿಸುವಂತೆ ಒತ್ತಾಯಿಸಿದರು. ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ ಸಿಬ್ಬಂದಿ ಪ್ರವೀಣ ಶೇಟ್, ಡಿಟಿಒ ಸುರೇಶ ನಾಯ್ಕ, ಹುಸರಿ-ಗೊಣೂರು ಮಾರ್ಗದ ಸಾರ್ವಜನಿಕರಾದ ರವಿ ಹೆಗಡೆ, ರವಿ ಗುನಗಾ, ದಾಮೋದರ ಗೌಡ, ಈಶ್ವರ ಗೌಡ, ಮಹೇಶ ನಾಯ್ಕ, ಶ್ರೀಕಾಂತ ಗಂಗೇಮತ, ಸುಭಾಸ ಗುನಗಾ, ಶ್ರೀಪತಿ ಭಟ್ಟ, ವಿವೇಕಾನಂದ ಶಿರಾಲಿ, ಸತೀಶ ಹೆಗಡೆ, ಉಮಾ ಹೆಗಡೆ ಹಾಗೂ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next