Advertisement

ಧರ್ಮದ ದಾರಿಯಲ್ಲಿ ಸಾಗುವುದು ಅವಶ್ಯ: ಮಹೇಶ

02:04 PM May 09, 2019 | Team Udayavani |

ಬಂಕಾಪುರ: ಮನುಷ್ಯನ ಹುಟ್ಟು ಆಕಸ್ಮಿಕವಾದರೂ ಸಾವು ಶಾಶ್ವತ. ಅದರ ಮಧ್ಯದಲ್ಲಿರುವ ಮನುಷ್ಯನ ಜೀವನ ಸಾರ್ಥಕಪಡೆಸಿಕೊಳ್ಳಬೇಕಾದರೆ, ಧರ್ಮದ ದಾರಿಯಲ್ಲಿ ನಡೆಯುವ ಅವಶ್ಯಕತೆಯಿದೆ ಎಂದು ಹುಬ್ಬಳ್ಳಿಯ ಮಹೇಶ ಪೂರ್ಣಾಕರ್‌ ಹೇಳಿದರು.

Advertisement

ಪಟ್ಟಣದ ಪೇಟೆ ಯಲ್ಲಮ್ಮದೇವಿ ಸಭಾ ಭವನದ ನೂತನ ಮೇಲ್ಮಹಡಿ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಮನುಷ್ಯ ಸೋಮಾರಿಯಾಗದೆ ಸತ್ಯ, ಶುದ್ಧ ಕಾಯಕ ಮಾಡಿದಾಗ ಭಕ್ತಿ ಭಂಡಾರಿ ಬಸವಣ್ಣನವರ ನಾಣ್ಣುಡಿಯಂತೆ ಕೈಲಾಸವನ್ನು ಕಾಣಬಹುದಾಗಿದೆ. ಹಣವಿದ್ದಾಗ ದಾನ, ಧರ್ಮ ಮಾಡಿ ಬಡವರ, ದೀನ ದಲಿತರ ಬಾಳಿಗೆ ಬೆಳಕಾಗಬೇಕು. ನೇಣವಿದ್ದಾಗ ಸೇವೆ ಮಾಡಿ ಮುಕ್ತಿ ಹೋಂದಬೇಕು ಎಂದು ಹೇಳಿದರು.

ಶ್ರೀ ಯಲ್ಲಮ್ಮದೇವೆ ಸೇವಾ ಸಮಿತಿ ಅಧ್ಯಕ್ಷ ಬಸಪ್ಪ ಸೊಪ್ಪಿನ ಮಾತನಾಡಿ, ಶ್ರೀಪೇಟೆ ಯಲ್ಲಮ್ಮದೇವಿ ಹಾಗೂ ಕೋಟೆ ಯಲ್ಲಮ್ಮದೇವಿ ಭಕ್ತಿಯಿಂದ ಬೇಡಿ ಬಂದವರ ಕಷ್ಟ, ಕಾರ್ಪಣ್ಯಗಳನ್ನು ದೂರಮಾಡುವ ಶಕ್ತಿಯನ್ನು ಪಡೆದವಳಾಗಿದ್ದಾಳೆ. ಆ ತಾಯಿಯ ಮಹಿಮೆಯನ್ನರತ ಭಕ್ತರು ಪ್ರತಿ ಹುಣ್ಣಿಮೆ, ಅಮವಾಸ್ಯೆ ಎಂದು ಜಾತ್ರೋತ್ಸವದ ರೀತಿಯಲ್ಲಿ ಹರಿದುಬರುವ ಮೂಲಕ ತಮ್ಮ ಕಷ್ಟ, ಕಾರ್ಪಣ್ಯಗಳನ್ನು ದೂರಮಾಡಿಕೊಳ್ಳುತ್ತಿದ್ದಾರೆ. ಎಂಜನಿಯರ್‌ ಮಹೇಶ್‌ ಪೂರ್ಣಾಕರ ಅವರ ಭಕ್ತಿಯ ಸೇವೆ ಶ್ರೀ ಯಲ್ಲಮ್ಮ ದೇವಸ್ಥಾನಕ್ಕೆ ಅಪಾರವಾಗಿದ್ದು, ಅಂತಹ ಭಕ್ತ ಮಹನಿಯರ ಹಾಗೂ ಸೇವಾ ಸಮಿತಿಯವರ ನಿಸ್ವಾರ್ಥ ಸೇವೆಯ ಪ್ರತಿಫಲವಾಗಿ ಶ್ರೀ ಯಲ್ಲಮ್ಮದೇವಿ ದೇವಸ್ಥಾನ ನಿರಂತರ ಅಭಿವೃದ್ಧಿ ಹೊಂದುತ್ತಲಿದೆ ಎಂದು ಹೇಳಿದರು.

ದೇವಸ್ಥಾನ ಸಮಿತಿ ಉಪಾಧ್ಯಕ್ಷ ಸಿದ್ದಪ್ಪ ಹಳವಳ್ಳಿ, ನರಸಿಂಗ್‌ ಪುಕಾಳೆ, ಮೌನೇಶ ಕುರಗೋಡಿ, ನೀಲಕಂಠಪ್ಪ ನರೇಗಲ್, ನಿಂಗಪ್ಪ ಕೋರಿ, ಶಂಕ್ರಪ್ಪ ಕೋಸೂರ, ಬಸವಂತಪ್ಪ ಕೊಟಬಾಗಿ, ರಮೇಶ ಮಾಳಗಿಮನಿ, ರಾಜು ಈಳಗೇರ, ಪಿ.ಡಿ.ಕೋರಿ, ಶಂಕ್ರಪ್ಪ ಹಳವಳ್ಳಿ, ಶಂಬುಲಿಂಗಪ್ಪ ಪೂಜಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next