ತುಮಕೂರು: ಸುಸ್ಥಿರ ಸಮಾಜವೆಂದರೆ ಒಂದು ಬದ್ಧತೆ ಇರಬೇಕು. ನಾಗರಿಕನೆಂದರೆ ನಗರ ವಾಸಿಗಳಲ್ಲ. ಯಾರು ಸುಸಂಸ್ಕೃತರು ಕೀಳು ಭಾವನೆ ಹೊಂದಿರುವುದಿಲ್ಲವೋ ಅವರು ನಾಗರಿಕರು ಎಂದು ಸುಸ್ಥಿರ ಅಭಿವೃದ್ಧಿ ಎಂದು ಡಾ. ಎಮ್. ರಮೇಶ್ ತಿಳಿಸಿದರು.
ನಗರದ ವಿದ್ಯೋದಯ ಪ್ರಥಮ ದರ್ಜೆ ಕಾನೂನು ಕಾಲೇಜಿನಲ್ಲಿ ಸಿಜ್ಞಾ ಯುವ ಸಂವಾದ ಕೇಂದ್ರ ನಡೆಸಿದ ಯುವಜನರೊಟ್ಟಿಗೆ ಸಂವಾದದಲ್ಲಿ ಸುಸ್ಥಿರ ಸಮಾಜ ನಿರ್ಮಾಣದಲ್ಲಿ ಕಾನೂನು ಮತ್ತು ಸರ್ಕಾರ ನೀತಿಗಳ ಪಾತ್ರದ ಬಗ್ಗೆ ಮಾತನಾಡಿದರು. ಸುಸ್ಥಿರ ಸಮಾಜಕ್ಕೆ ಬದ್ಧತೆ ಅಷ್ಟೇ ಸಾಲದು ರಕ್ಷಣೆ ಮತ್ತು ಸಾಮಾಜಿಕ ಕಳಕಳಿ ಇರಬೇಕು. ಬೋಧನೆ ಮತ್ತು ತಿಳಿವಳಿಕೆಯಿಂದ ಜೀವನ ನಡೆಯುವುದಿಲ್ಲ. ಸಂಪನ್ಮೂಲ ಇರಬೇಕು ಅವುಗಳ ಬಳಕೆ ಸಮಾನ ರೀತಿಯಲ್ಲಿ ಹಂಚಿಕೆ ಆಗಬೇಕು ಎಂದರು.
ಸುಸ್ಥಿರ ಅಭಿವೃದ್ಧಿ ಎಂದರೆ ರಥದ ಎರಡು ಚಕ್ರ ಇದ್ದಂತೆ ಅವು ಸಮಾನ ರೀತಿಯಲ್ಲಿ ಚಲಿಸುತ್ತವೆ. ಒಂದು ಚಕ್ರ ಆರ್ಥಿಕ ಅಭಿವೃದ್ಧಿ, ಮತ್ತೂಂದು ಚಕ್ರ ಪರಿಸರ ಅಭಿವೃದ್ಧಿ. ಇವು ಎರಡು ಸಮಾನ ರೀತಿಯಲ್ಲಿ ಇದ್ದರೆ ಅದು ಸುಸ್ಥಿರ ಅಭಿವೃದ್ಧಿ. ಪರಿಸರ ಸಂರಕ್ಷಣೆ ಎನ್ನುವುದು ಸರ್ಕಾರದ ಕರ್ತವ್ಯ ಮಾತ್ರವಲ್ಲ ಭಾರತ ಪ್ರಜಾಪ್ರಭುತ್ವವು ಸಂವಿಧಾನದಲ್ಲಿ ಮೂಲಭೂತ ಕರ್ತವ್ಯಗಳು ಮತ್ತು ರಾಜ್ಯ ನಿರ್ದೇಶಕ ತತ್ವಗಳಲ್ಲಿ ದೇಶದ ರಕ್ಷಣೆ ಮತ್ತು ಪರಿಸರ ಸಂರಕ್ಷಣೆ ಕುರಿತು ವಿವರಣೆ ಇದೆ. ಇದನ್ನು ಅರಿತು ಕೊಂಡು ಪ್ರತಿಯೊಬ್ಬರು ಕೂಡ ಪರಿಸರ ಸಂರಕ್ಷಣೆ ಮಾಡುವ ಜವಾಬ್ದಾರಿ ಹೊರಬೇಕು ಎಂದು ಹೇಳಿದರು.
ಪರಿಸರ ಮಾಲಿನ್ಯಕ್ಕೆ ದೇಶದ ದೊಡ್ಡ ಕಂಪನಿಗಳೇ ಪ್ರಮುಖ ಕಾರಣವಾಗಿದೆ ಇದನ್ನು ಪ್ರಶ್ನಿಸುವವರು ಯಾರು ಇಲ್ಲ ಕಾರಣ ಎಲ್ಲ ಸರ್ಕಾರಗಳೇ ಅವರಿಗೆ ಬೆಂಗಾವಲಿಗೆ ನಿಲ್ಲುತ್ತವೆ ಎಂದು ಯುವಜನರೊಂದಿಗೆ ಸಂವಾದ ನಡೆಸಿದ ಸಿಜ್ಞಾ ಯುವ ಸಂವಾದ ಕೆಂದ್ರದ ಜ್ಞಾನಸಿಂಧುಸ್ವಾಮಿ ತಿಳಿಸಿದರು.
ಇಂದು ಬಹುತೇಕ ಕಾನೂನುಗಳು ಯೋಜನೆಗಳು ಬಂಡ ವಾಳ ಶಾಹಿಗಳಿಂದ ಪ್ರೇರಿತವಾಗಿ ರೂಪುಗೊಳ್ಳುತ್ತಿವೆ ಪ್ರಪಂಚದ ಶೇ.2 ರಷ್ಟು ಜನ ಆರ್ಥಿಕತೆಯನ್ನು ನಿಯಂತ್ರಿಸುತ್ತಿ ದ್ದಾರೆ. ಆರ್ಥಿಕ ಪ್ರಭುತ್ವ ಸಾಧಿಸುತ್ತಿದ್ದಾರೆ ನಮ್ಮನ್ನಾಳುವ ಜನರು ಇವರನ್ನು ಬೆಂಬಲಿಸುತ್ತಾ ಬರುತ್ತಿದ್ದಾರೆ ಆದರೆ, ದೇಶದಲ್ಲಿ ರೈತರಗೋಳು ಆತ್ಮಹತ್ಯೆ ದಿನನಿತ್ಯ ನಡೆಯುತ್ತಿವೆ ಇತ್ತೀಚೆಗೆ ಗುಜರಾತಿನಲ್ಲಿ ಪೆಪ್ಸಿಕೊ, ಲೇಸ್ ಕಂಪನಿ ಮಾಲೀಕರು ಆಲೂಗೆಡ್ಡೆ ಬೆಳೆದ ರೈತರ ಮೇಲೆ ನಡೆಯುತ್ತಿರುವ ದಬ್ಟಾಳಿಕೆಯೇ ಸೂಕ್ತ ನಿದರ್ಶನವಾಗಿದೆ. ಸರ್ಕಾರಗಳು ರೂಪಿ ಸುವ ಎಲ್ಲ ಯೊಜನೆಗಳು ನೀತಿಗಳು ಖಾಸಗಿ ಕಂಪನಿಗಳ ಪರ ವಾಗಿ ಜಾರಿಯಾಗುತ್ತವೆ. ಆದ್ದರಿಂದಲೇ ದೇಶದಲ್ಲಿ ತಾರತಮ್ಯ ಸೃಷ್ಟಿಯಾಗಿದೆ. ನಮ್ಮ ದೇಶದ ಅನ್ನದಾತನ ಜೀವನ ಕೇಳುವವ ರಿಲ್ಲ ಈ ವಿಚಾರವಾಗಿ ದೇಶದ ಯುವಜನರು ಜಾಗೃತರಾಗ ಬೇಕು ಎಂದು ವಿದ್ಯಾರ್ಥಿಗಳಿಗೆ ಎಚ್ಚರಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ವೆಂಕಟಾಚಲಪತಿ ಸ್ವಾಮಿ ಮಾತನಾಡಿ, ಪರಿಸರ ಸಂರಕ್ಷಣೆಯ ಜವಾಬ್ದಾರಿ ಎಲ್ಲರದಾಗಬೇಕು, ಜೀವನದಲ್ಲಿ ಒತ್ತಡದಿಂದ ಮುಕ್ತವಾಗಿ ಸುಸ್ಥಿರ ಸರಳ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.ರಾಷ್ಟ್ರೀಯ ಸೇವಾಯೋಜನಾಧಿಕಾರಿಗಳಾದ ಮಂಜುಳ ಸಹಾಯಕ ಸಂಯೋಜಕರಾದ ಮಂಜುನಾಥ್, ಉಪನ್ಯಾಸಕರು ಸಿಜ್ಞಾ ಯುವಸಂವಾದ ಕೇಂದ್ರದ ಸಂಚಾಲಕರಾದ ಕಾವ್ಯಶ್ರೀ ಬೆಟ್ಟದ ಬಯಲು, ಹಾಡುಗಾರರಾದ ಚಂದ್ರಕಾಂತಸ್ವಾಮಿ, ಮಾಳಿಂಗ ರಾಯ, ಜೆ.ಪವನ್ ಕುಮಾರ್ ಇತರರು ಇದ್ದರು.