Advertisement

ಮನೆಯ ಅಂದಕ್ಕೆ ಕೆಲವು ಸಲಹೆಗಳು ಬೇಕೇ ಬೇಕು..

12:46 PM Mar 27, 2017 | Harsha Rao |

ಇಂತಿಂಥ ದಿಕ್ಕಿನಲ್ಲಿ ಇಂತಿಂಥದ್ದನ್ನೇ ರಚಿಸಿಕೊಂಡು ಹೋಗುವುದು ಸರಿಯೇ. ಆದರೆ ಕೆಲವರು ಅಲ್ಲಿಗೆ ವಾಸ್ತು ಶುದ್ಧಿಗೆ ಅವಶ್ಯಕವಾದ ವಿಚಾರಗಳನ್ನು ಮಾಡಿ ಮುಗಿಸಿದರಾಯ್ತು. ಎಂದು ನಿರಾಳವಾಗುತ್ತಾರೆ. ಆದರೆ ಸಂಯೋಜಿಸಲ್ಪಟ್ಟ ವ್ಯವಸ್ಥೆಗಳು ಕೆಲ ಶಿಸ್ತುಬದ್ಧವಾದ ಆವರಣಗಳೊಂದಿಗೆ ಅಂದಗೊಂಡಿರುವುದೂ ಮುಖ್ಯ.

Advertisement

ಮನೆಯನ್ನು ಕಟ್ಟುವಾಗ ದಿಕ್ಕುಗಳ ಕುರಿತಾದ ಎಚ್ಚರ ಕಾಳಜಿಗಳನ್ನು ಚೆನ್ನಾಗಿ ಹೊಂದಿ ಇಂತಿಂಥ ದಿಕ್ಕಿನಲ್ಲಿ ಇಂತಿಂಥದ್ದನ್ನೇ ರಚಿಸಿಕೊಂಡು ಹೋಗುವುದು ಸರಿಯೇ. ಆದರೆ ಕೆಲವರು ಅಲ್ಲಿಗೆ ವಾಸ್ತು ಶುದ್ಧಿಗೆ ಅವಶ್ಯಕವಾದ ವಿಚಾರಗಳನ್ನು ಮಾಡಿ ಮುಗಿಸಿದರಾಯ್ತು. ಎಂದು ನಿರಾಳವಾಗುತ್ತಾರೆ. ಆದರೆ ಸಂಯೋಜಿಸಲ್ಪಟ್ಟ ವ್ಯವಸ್ಥೆಗಳು ಕೆಲ ಶಿಸ್ತುಬದ್ಧವಾದ ಆವರಣಗಳೊಂದಿಗೆ ಅಂದಗೊಂಡಿರುವುದೂ ಮುಖ್ಯ. ಉದಾಹರಣೆಗೆ ಮನೆಯ ಆಗ್ನೇಯದಲ್ಲಿ ಪೂರ್ವದಿಕ್ಕನ್ನು ಬಳಸಿಕೊಂಡು ಉತ್ತಮ ಅಡುಗೆ ಮನೆಯನ್ನು ರೂಪಿಸಿರುತ್ತಾರೆ. ಆದರೆ ಅಡುಗೆ ಮನೆಯನ್ನು ಶೂಚಿಯಾಗಿಟ್ಟು ಕೊಳ್ಳುವ ಕ್ರಮದಲ್ಲಿ ವಿಫ‌ಲರಾಗುತ್ತಾರೆ. ದುರ್ಗಾಸೂಕ್ತದಲ್ಲಿ ಒಂದು ಮಾತು ಬರುತ್ತದೆ. ತಾಮಗ್ನಿ ವರ್ಣಾಂ ತಪಸಾಜ್ವಂತೀ ದುರ್ಗೆಯ ಬಣ್ಣ ಬೆಂಕಿಯ ಬಣ್ಣ. ಬೆಂಕಿಯೋ ಬೆಳಕೋ ಬೇರೆ ಯಾರೂ ಅಲ್ಲ ಅದು ಸಾûಾತ್‌ ದುರ್ಗೆ. ಇಂಥ ದುರ್ಗೆ ಮನೆಯ ಅಡುಗೆ ಮನೆಯಲ್ಲಿ ನಮ್ಮ ಅನ್ನದ ರುಚಿಗಾಗಿ ಬೇಯುವಿಕೆಗೆ ಒದಗಿ ಬರುತ್ತಾಳೆ. ಅಡುಗೆ ಮನೆ ದುರ್ಗೆಯ ಸ್ಥಾನ. ಇಂಥ ದುರ್ಗೆ ಶ್ರೀ ವಲ್ಲಭನಾದ ಮಲಬೋಧ ಸ್ವತ್ಛತೆಯನ್ನು ಬೋಧಿಸುವ ಘನವಂತಿಕೆಯ ವಿಷ್ಣುವಿನ ಸಹೋದರಿ. ಕಾಣಿಸುವ ವಿಶ್ವದ ಒಳಗೂ ಹೊರಗೂ ವ್ಯಾಪಿಸಿದ ಅನಂತಮೂರ್ತಿಯ ಸಹೋದರಿ.ಇಂಥವಳು ಇರುವ ಜಾಗೆಯಾದ ಅಡುಗೆ ಮನೆಯನ್ನು ವಾಸ್ತು ಶಿಸ್ತಲ್ಲಿ ಕಟ್ಟಿಸಿರಬೇಕು. ಆದರೆ ಅದನ್ನು ಶುಚಿಯಾಗಿ ಇಟ್ಟುಕೊಳ್ಳುವ ಜನ ಕಡಿಮೆ. ಕೆಟ್ಟ ಕೊಳೆತ ತರಕಾರಿ ತ್ಯಾಜ್ಯಗಳ ವಾಸನೆ ತುಂಬಿರುತ್ತದೆ. ನೀರು ಚೆಲ್ಲಿರುತ್ತದೆ. ಹಳೆಯ ಜಿಡ್ಡುಗಳು ತುಂಬಿರುತ್ತದೆ. ಇಲ್ಲಿ ದುರ್ಗೆಯು ಶುಚಿಯಾಗಿ ನಿಲ್ಲಲಾರಳು. 

ಮನೆಯ ಉತ್ತರ ದಿಕ್ಕಿನಲ್ಲಿ ಯಾವುದೇ ಬಗೆಯ ಸಸ್ಯಗಳನ್ನು ಬೆಳೆಸಲು ಮನೆಯೊಳಗೂ ಸೌಂದರ್ಯವರ್ಧನೆಯ ನೆಪದಲ್ಲಿ ಮನೆಯೊಳಗೂ ಬೆಳೆಸಲು ಹೋಗಬೇಡಿ. ನಿಮ್ಮ ಸಂವರ್ಧನೆಯ ಬಗೆಗಿನ ಚೈತನ್ಯ ಉತ್ತರ ದಿಕ್ಕಿನಿಂದ ಸಿಗಬೇಕು. ಇಂಥದೊಂದು ಚೈತನ್ಯವನ್ನು ಸಸ್ಯಗಳು ಕಬಳಿಸಬಾರದು. ಹೊರಗೆ ಪ್ರಧಾನವಾದ ಪ್ರವೇಶದ್ವಾರಕ್ಕೆ ಕಾಲು ಹಾಕಿ ಮಲಗಬಾರದು. ಒಳ್ಳೆಯ ಫ‌ಲಗಳು ಮನೆಯನ್ನು ಪ್ರವೇಶಿಸುವುದನ್ನು ತಡೆದುಬಿಡುತ್ತದೆ. ಮನೆಯಲ್ಲಿ ಒಡೆದ ಕನ್ನಡಿಗಳಾಗಲೀ ಒಡೆದ ನುಗ್ಗಿ ಜಗ್ಗಿ ಮುದುಡಿದ ಪಾತ್ರಗಳಾಗಲೀ ಇರಬಾರದು. ಕಸದ ರಾಶಿ ಬಳಕೆಯಾಗದ ವಸ್ತುಗಳು ಎಂದೋ ಬೇಕು ಎಂಬುದಕ್ಕೆ ಇಡಲಾದ ಅಡ್ಡಾದಿಡ್ಡಿ ಸರಕುಗಳು ಪ್ರಮುಖವಲ್ಲದ ಜಾಗಗಳಲ್ಲಿ ಶಿಸ್ತಾಗಿ ಕಟ್ಟಿ ಇಡಬೇಕು. ಕಸದ ಬಳಕೆಯಾಗದ ಗಂಟು ಮನೆಯಿಂದ ಹೊರಕ್ಕೆ ಸಾಗಿಸಬೇಕು. ಇಲ್ಲದಿದ್ದರೆ ಮನೆಯ ಸಕಾರಾತ್ಮಕ ಪಂಚಭೂತಾತ್ಮಕ ಸಿದ್ಧಿ ವಲಯಕ್ಕೆ ತೊಂದರೆ ಸಾಧ್ಯ.

ಮನೆಯ ಉತ್ತರ ದಿಕ್ಕು ಕಿಕ್ಕಿರಿದು ತುಂಬಿರಬಾರದು. ಪೂರ್ವಕ್ಕೆ ಬೆಳಕಿರಬೇಕು. ಈಶಾನ್ಯವು ಮನೆಯ ಇತರ ಭಾಗಗಳಿಗಿಂತ ಬೆಳೆದು ವಿಸ್ತಾರ ಒದಗಿರಬೇಕು. ಚಪ್ಪಲಿಯ ಗೂಡು ನೀಟಾಗಿರಬೇಕು. ಚೆಪ್ಪಲಿ, ಶು, ಸಾಕ್ಸ್‌ಗಳ ಸಂತೆಯಂತಿರಬಾರದು. ಉತ್ತರದಿಕ್ಕು ಸರಳವಾದ ಸೌಂದರ್ಯದಿಂದ ವಂಚಿತಗೊಂಡರೆ ಮಾಡುವ ಕೆಲಸಕ್ಕೆ ತೊಂದರೆ. ಇಲ್ಲಾ ಕೆಲಸವೇ ಸಿಗದಿರುವ ದುರ್ಭರತೆ ಎದುರಾಗುತ್ತದೆ. ಪ್ರತಿ ಕೋಣೆಯಲ್ಲೂ ಕೋಣೆಯ ಉತ್ತರ ದಿಕ್ಕು ಪ್ರಕಾಶಮಯವಾಗಿ ಇರಲೇ ಬೇಕು. ಮನೆಯ ಯಜಮಾನ ಮಲಗುವ ಕೋಣೆ ಮನೆಯ ನೈರುತ್ಯದಲ್ಲಿ ಸಂಯೋಜನೆಯಾಗಿದ್ದರೆ ಒಳಿತು. ಮಲಗುವ ಕೋಣೆಯ ಜಲದ ವಿಚಾರದಲ್ಲಿ ಎಚ್ಚರ ಹೊಂದಿರಬೇಕು. ನೀರು ಇರಬಾರದು. ಆಲಪಾತದ ಚಿತ್ರಗಳೂ ಇರಬಾರದು. ಊಟದ ಮುಖ್ಯ ಟೇಬಲ್‌ ಮೇಲೆ ಬಣ್ಣಬಣ್ಣದ ಚಿತ್ತಾರಕ್ಕಿಂತ ಒಂದೇ ಬಣ್ಣದಿಂದ ದುಂಡು ಆಕೃತಿ ಪಡೆದಿದ್ದರೆ ಉತ್ತಮ. ಪಚನಕ್ರಿಯೆಗೆ ಪರಿಪೂರ್ಣವಾದ ಸಂಪನ್ನ ಚಕ್ರ ಲಭ್ಯವಾಗುತ್ತದೆ. ಸಂಡಾಸಿನ ಕೋಣೆಯಲ್ಲಿ ಕಲ್ಲುಪ್ಪನ್ನು ಒಂದು ಪುಟ್ಟ ತಟ್ಟೆಯಲ್ಲಿ ಹಾಕಿ ಇಡಿ. ಇದರಿಂದ ನಕಾರಾತ್ಮಕ ಶಕ್ತಿಗಳು ಮನೆಯೊಳಗೆ ಕಡಿಮೆಯಾಗುತ್ತದೆ. 

– ಅನಂತಶಾಸ್ತ್ರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next