Advertisement

ರಾಜಕೀಯ ಪಕ್ಷಗಳಲ್ಲಿ ಹೆಚ್ಚಿನ ಪ್ರಜಾಸತ್ತೆ ಅಗತ್ಯ: ಮೋದಿ

03:18 PM Oct 28, 2017 | Team Udayavani |

ಹೊಸದಿಲ್ಲಿ: ರಾಜಕೀಯ ಪಕ್ಷಗಳಲ್ಲಿ ಇನ್ನೂ ಹೆಚ್ಚಿನ ಆಂತರಿಕ ಪ್ರಜಾಸತ್ತೆ ಇರಬೇಕಾದ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಬಿಜೆಪಿ ಅಧಿಕಾರಕ್ಕೆ ಬಂದ ಕಳೆದ ಮೂರು ವರ್ಷಗಳಿಂದ ಭಾರತೀಯ ಜನತಾ ಪಕ್ಷದ ದಿಲ್ಲಿಯಲ್ಲಿನ ಪ್ರಧಾನ ಕಾರ್ಯಾಲಯದಲ್ಲಿ, ಏರ್ಪಡುವ  ದೀಪಾವಳಿ ಸಮಾರಂಭದಲ್ಲಿ ಮಾಧ್ಯಮದೊಂದಿಗಿನ ಸ್ನೇಹ-ಸೌಹಾರ್ದ-ಸಂವಾದದಲ್ಲಿ ಮಾತನಾಡುತ್ತಿದ್ದ ಅವರು, ಮಾಧ್ಯಮಗಳು ಅತ್ಯಂತ ಪ್ರಭಾವಶಾಲಿಯಾಗಿದ್ದು ಜನರ ಮೇಲೆ, ಸರಕಾರದ ಮೇಲೆ ಭಾರೀ ಪ್ರಭಾವವನ್ನು ಬೀರುವ ಸಾಮರ್ಥ್ಯ ಹೊಂದಿವೆ ಎಂದರು. 

ಸರಕಾರದ ಸ್ವಚ್ಚ ಭಾರತ ಆಂದೋಲನಕ್ಕೆ ಮಾಧ್ಯಮಗಳು ನೀಡಿರುವ ಅಭೂತಮಪೂರ್ವ ಬೆಂಬಲ, ಪ್ರೋತ್ಸಾಹವನ್ನು ಪ್ರಶಂಸಿಸಿದ ಮೋದಿ, ಈಚಿನ ದಿನಗಳಲ್ಲಿ ಪತ್ರಿಕೆಗಳಲ್ಲಿ ಸರಕಾರದ ವಿರುದ್ಧ ಪುಂಖಾನುಪುಂಖವಾಗಿ ಟೀಕೆಗಳೇ ಕಾಣುತ್ತಿವೆ; ಹಾಗಿದ್ದರೂ ಸರಕಾದ ಉತ್ತಮ ಕೆಲಸಗಳನ್ನು ಮಾಧ್ಯಮಗಳು ಬೆಂಬಲಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಮೋದಿ ಹೇಳಿದರು.

ಮಾಧ್ಯಮ ಮತ್ತು ರಾಜಕಾರಣಿಗಳ ನಡುವಿನ ಸಂಬಂಧದ ಕುರಿತು ಮಾತನಾಡಿದ ಪ್ರಧಾನಿ ಮೋದಿ, “ಈಚಿನ ದಿನಗಳಲ್ಲಿ ನಾವು – ನೀವು ಜತೆಗೂಡಿ ಹರಟುತ್ತಿಲ್ಲ, ನಿಮಗೆ ಪುರಸೊತ್ತೇ ಸಿಗುತ್ತಿಲ್ಲ ಎಂದು ನೀವು ದೂರುತ್ತೀರಿ; ಅದೊಂದು ಕಾಲವಿತ್ತು, ನಾನು ಮಾತನಾಡಲು ಬಯಸಿದಾಗ ನೀವು ಕಾಣ ಸಿಗುತ್ತಿರಲಿಲ್ಲ; ಈಗ ಕಾಲ ಬದಲಾಗಿದೆ. ನಮ್ಮ – ನಿಮ್ಮ ನಡುವಿನ ಮಾತುಕತೆಗೆ ಸಮಯವೇ ಇಲ್ಲವಾಗಿದೆ’ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next