Advertisement
ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ್ಯ ಮೂಲಕ ಮಂಜೂ ರಾದ 161ಘಟಕಗಳ ಪೈಕಿ 154 ನಿರ್ಮಾಣ ವಾಗಿದ್ದು, ಇನ್ನೂ 7 ಘಟಕಗಳು ನಿರ್ಮಾಣ ವಾಗಬೇಕಗಿದೆ. ಕೆ.ಆರ್.ಐ.ಡಿ.ಎಲ್ ಮೂಲಕ ಮಂಜೂರಾದ ಎಲ್ಲಾ 58 ಘಟಕಗಳು ನಿರ್ಮಾಣವಾಗಿದ್ದು, ಸಹಕಾರ ಕ್ಷೇತ್ರದಿಂದ 65 ಘಟಕಗಳ ಸ್ಥಾಪನೆಗೆ ಮಂಜೂ ರಾತಿ ಸಿಕ್ಕಿದೆ. ಕೈಗಾರಿಕಾ ಸಂಸ್ಥೆ, ಟ್ರಸ್ಟ್‌ಗಳು, ಸಂಸದರು, ಶಾಸಕರ ಅನುದಾನದಲ್ಲಿ 259 ಘಟಕಗಳು ಸ್ಥಾಪನೆಯಗಿದ್ದು, 8 ಘಟಕಗಳು ವಿವಿಧ ಕಾರಣಗಳಿಂದ ಸ್ಥಾಪನೆಯಾಗಿಲ್ಲ.
Related Articles
Advertisement
ನಾಗರಿಕರ ಆಕ್ರೋಶ: ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ವ್ಯವಸ್ಥೆ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಮತ್ತು ಗ್ರಾಮ ಪಂಚಯ್ತಿಗಳು ನಿರ್ವಹಿಸಬೇಕಾಗಿದೆ. ಸಾರ್ವಜನಿಕರ ಹಿತವನ್ನು ಕಾಯಬೇಕಾಗಿದೆ. ಯಾರೆ ಘಟಕ ಸ್ಥಾಪನೆ ಮಾಡಲಿ ಅದರ ನಿರ್ವಹಣೆಯ ಹೊಣೆಯನ್ನು ಈ ಸಂಸ್ಥೆಗಳು ಹೊರಬೇಕು. ಆದರೆ ಈ ಎಲ್ಲಾ ಸಂಸ್ಥೆಗಳು ತಮ್ಮ ಹೊಣೆಯಿಂದ ನುಣುಚಿಕೊಳ್ಳುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ. ಘಟಕವೊಂದು ಕೆಟ್ಟರೆ ತಿಂಗಳುಗಟ್ಟಲೆ ದುರಸ್ತಿಯಾಗೋಲ್ಲ ಎಂಬ ದೂರುಗಳು ಎಲ್ಲಾ ಗ್ರಾಮಗಳಲ್ಲೂ ವ್ಯಕ್ತವಾಗಿದೆ.
ಯಾರ ಕೈ ಸೇರುತ್ತಿದೆ ಹಣ?: ಬಹುತೇಕ ಗ್ರಾಮಗಳಲ್ಲಿ ತಲಾ 20 ಲೀಟರ್ ನೀರಿಗೆ 2 ರೂ. ಪಡೆಯಲಾಗುತ್ತಿದೆ. ಏಜೆನ್ಸಿಗಳು ನಿರ್ವ ಹಣೆಯಲ್ಲಿರುವ ಘಟಕಗಳನ್ನು ಹೊರತು ಪಡೆಸಿ ಟ್ರಸ್ಟ್‌ಗಳು, ಕೈಗಾರಿಕೆಗಳು, ಸಂಘ-ಸಂಸ್ಥೆಗಳು ಸ್ಥಾಪಿಸಿರುವ ಘಟಕಗಳಲ್ಲಿ ಸಂಗ್ರಹಣೆಯಾಗುವ ಗ್ರಾಹಕರ ಹಣ ಉಸ್ತುವಾರಿ ಇರುವ ವ್ಯಕ್ತಿಗಳ ಮೂಲಕ ಪಡೆಯಲಾಗುತ್ತಿದೆ.
ನಾಗರಿಕರಿಗಿಲ್ಲ ಸಮಾಧಾನ!: ಅನೇಕ ಗ್ರಾಮಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಘಟಕಗಳು ಆಗಾಗ್ಗೆ ಕೈಕೊಡುತ್ತಿವೆ ಎಂದು ನಾಗರಿಕರು ಆರೋಪಿಸಿದ್ದಾರೆ. ಕೆಲವು ಘಟಕಗಳಲ್ಲಿ ಬೇಕಾದಷ್ಟು ನೀರು ಬರುವುದೇ ಇಲ್ಲ. 20 ಲೀಟರ್ ಬದಲಿಗೆ 10-15 ಲೀಟರ್ ಮಾತ್ರ ಬರುತ್ತಿದೆ. ಈ ದೂರಿಗಳಿಗೆ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳ ಬಳಿ ಉತ್ತರ ಇಲ್ಲ ಎಂದು ಗ್ರಾಮಸ್ಥರ ಆರೋಪವಾಗಿದೆ.
-ಬಿ.ವಿ.ಸೂರ್ಯ ಪ್ರಕಾಶ್