Advertisement

ಕವಿತೆ ಓದುವ ಸಹೃದಯರು ಅಗತ್ಯ

03:33 PM Dec 29, 2019 | Suhan S |

ಕುಷ್ಟಗಿ: ಕಾವ್ಯಲೋಕದಲ್ಲಿ ಕವಿ ಹೃದಯ ಎರಡನೇ ಕಣ್ಣು ಇದ್ದಂತೆ. ಕವಿಗೆ ಕವಿತೆ ಎಷ್ಟು ಮುಖ್ಯವೋ ಕವಿತೆ ಆಲಿಸುವ ಸಹೃದಯರು ಅಷ್ಟೇ ಮುಖ್ಯ ಎಂದು ಸಾಹಿತಿ, ಕೊಪ್ಪಳ ಹಣಕಾಸು ಇಲಾಖೆಯ ಹಿರಿಯ ಉಪ ನಿರ್ದೇಶಕರು ಅಮೀನ್‌ ಅತ್ತಾರ ಹೇಳಿದರು.

Advertisement

ಇಲ್ಲಿನ ಬಾಲಕಿಯರ ಪಪೂ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕ ಡಾ| ಶರಣಪ್ಪ ನಿಡಶೇಸಿ ಅವರ “ಜೇಂಗೂಡು ಮುಕ್ತಕ’ ಕವನ ಸಂಕಲನ ಕುರಿತು ಮಾತನಾಡಿದರು. ಕವಿತೆ ಬರೆಯದೇ ಇದ್ದರೂ ಆಸಕ್ತಿಯಿಂದ ಕವಿತೆಗಳನ್ನು ಓದಿ ಅರ್ಥೈಸಿಕೊಂಡು ಸಂವಾದಿ  ಸುವ ಸಹೃದಯರಿರಬೇಕು. ಸಾಮಾಜಿಕ ಜಾಲತಾಣದಲ್ಲಿ ಲೈಕ್‌, ಕಮೆಂಟ್‌ಗಳಿಂದ ಸಹೃದಯತೆ ಹುಟ್ಟಿಕೊಳ್ಳುವುದಿಲ್ಲ. ಇತೀಚಿಗೆ ಮೊಬೈಲ್‌ ಗೀಳು ಹೆಚ್ಚಾಗಿದ್ದು, ಪಾಲಕರು ಮಕ್ಕಳಿಗೆ ಪುಸ್ತಕಗಳನ್ನು ನೀಡದೇ ಮೊಬೈಲ್‌ ನೀಡುತ್ತಿದ್ದು, ಪಬ್ಜಿ, ಬ್ಲೂವೇಲ್‌ ಗೇಮ್‌ ಆಕರ್ಷಿತರಾಗಿ ಪುಸ್ತಕ ಓದುವುದನ್ನೇ ಮರೆಯುತ್ತಿದ್ದಾರೆಂದು ಕಳವಳ ವ್ಯಕ್ತಪಡಿಸಿದರು.

ಪುಸ್ತಕಗಳಿಂದ ಓದುವ ಸಂತೃಪ್ತಿ, ಮೊಬೈಲ್‌ನಿಂದ ಸಿಗದು ಎಂದ ಅವರು, ಮಕ್ಕಳಿಗೆ ಮೊಬೈಲ್‌ ಶತ್ರುವಾಗಿದೆ. ಸಾಹಿತ್ಯ ಹಾಗೂ ವಿಜ್ಞಾನ ಬಗ್ಗೆ ಓದುವ ಗೀಳು ಹಚ್ಚಿಕೊಂಡಾಗ ಮಾತ್ರ ಬದುಕು ಬದಲಾವಣೆಯಾಗಲು ಸಾಧ್ಯವಿದೆ. ಪಿಯುಸಿ, ಪದವಿವರೆಗೂ ಮೊಬೈಲ್‌ ಸಹವಾಸವೇ ಬೇಡ ಎಂದರು.

ಡಾ| ಶರಣಪ್ಪ ನಿಡಶೇಸಿ ಅವರ ಈ ಮುಕ್ತಕ ಕವನ ಸಂಕಲನದಲ್ಲಿ ಗಂಭೀರವಾದರೂ ಹಾಸ್ಯ ಪ್ರಜ್ಞೆ, ವಿಡಂಬನೆಯೂ ಇದೆ. ಕಟುಕುತ್ತವೆ, ಸಂದೇಶಗಳು ಇವೆ. ಕವಿಯಾದವನು ತನ್ನ ಅನುಭವ ಸೇರಿಸಿ ಸಾರ್ವತ್ರಿಕಗೊಳಿಸಿದರೆ ಅದು ಲೋಕಾನುಭವ ಆಗುತ್ತದೆ. ಅದು ಉಪದೇಶವಾಗಿದ್ದರೆ ಭಾಷಣಕ್ಕೆ ಸೀಮಿತವಾಗುತ್ತದೆ ಎಂದರು. ಈ ಕವಿತೆಯಲ್ಲಿ ಶರಣಪ್ಪ ನಿಡಶೇಸಿ ಶಬ್ಧಗಳೊಂದಿಗೆ ಆಟವಾಡಿದ್ದರೂ ಬೇರೆ ಅನರ್ಥಕ್ಕೆ ಅವಕಾಶವಿಲ್ಲ, ಸಮಾಜಕ್ಕೆ ಉತ್ತಮ ಸಂದೇಶವಿರುವ ಹಿನ್ನೆಲೆಯಲ್ಲಿ ಈ ಪುಸ್ತಕ ಮಹತ್ವದ್ದು ಎನಿಸಿದೆ ಎಂದರು.

ಜೇಂಗೂಡು ಮುಕ್ತಕ ಕವನ ಸಂಕಲನ ಉದ್ಘಾಟಿಸಿದ ಸಿಪಿಐ ಜಿ. ಚಂದ್ರಶೇಖರ ಮಾತನಾಡಿ, ಓದುವ ಹವ್ಯಾಸದಿಂದ ಜ್ಞಾನ ವೃದ್ಧಿಸಿಕೊಂಡು ಪುಸ್ತಕ ಬರೆಯಲು ಸಾಧ್ಯವಿದ್ದು, ವಿಚಾರದ ದೃಷ್ಟಿಕೋನ, ಆಲೋಚನೆಯ ವಿಧಾನ ಬದಲಾಗಲಿದೆ ಎಂದ ಅವರು ಕ್ರಿಯಾಶೀಲತೆಯೂ ಹೆಚ್ಚಲಿದೆ ಎಂದರು.  ಅಧ್ಯಯನದಿಂದ ಜೀವನ ಸರಿದಾರಿಗೆ ತರಲು ಸಾಧ್ಯವಿದ್ದು ಜೀವನ ವಿಕಾಸಕ್ಕೂ ಪ್ರೇರಣೆಯಾಗಿದೆ ಎಂದರು.

Advertisement

ಸಾಹಿತಿ ಪ್ರಮೋದ ತುರ್ವಿಹಾಳ ಮಾತನಾಡಿದರು. ಲೇಖಕ ಕಿಶನ್‌ರಾವ್‌ ಕುಲಕರ್ಣಿ ಮಾತನಾಡಿದರು. ವೇದಿಕೆಯಲ್ಲಿ ಉಪ ಪ್ರಾಚಾರ್ಯ ಶರಣಯ್ಯ ಹಿರೇಮಠ ಮತ್ತೀತರಿದ್ದರು. ವೀರೇಶಪ್ಪ ಸ್ವಾಗತಿಸಿದರು. ನಟರಾಜ ಸೋನಾರ ಸನ್ಮಾನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next