Advertisement
ಬ್ಯಾಂಕುಗಳಲ್ಲಿ ಖಾತೆಗಳನ್ನು ತೆರೆಯುವಾಗ ನಿಮ್ಮನ್ನು ಬ್ಯಾಂಕಿಗೆ ಪರಿಚಯಿಸಲು ಒಬ್ಬರು ಬೇಕು. ಇದನ್ನು ಬ್ಯಾಂಕಿನ ಪರಿಭಾಷೆಯಲ್ಲಿ ಇಂಟ್ರಡಕ್ಷನ್ ಎನ್ನುತ್ತಾರೆ. ಇದನ್ನು ನಿಮಗೆ ಪರಿಚಯ ಇದ್ದವರು, ಬ್ಯಾಂಕಿಗೆ ಗೊತ್ತಿದ್ದವರು, ಬ್ಯಾಂಕಿನಲ್ಲಿ ಖಾತೆ ಇದ್ದವರು ತಮ್ಮ ಖಾತೆ ನಂಬರ್ ನಮೂದಿಸಿ ಮಾಡಬೇಕಾಗುತ್ತದೆ. ಈ ರೀತಿ ಪರಿಚಯಿಸುವವರು, ಬ್ಯಾಂಕಿನ ಅದೇ ಶಾಖೆಯುಲ್ಲಿ ಅಥವಾ ಬೇರೆ ಯಾವುದಾದರೂ ಶಾಖೆಯಲ್ಲಿ ಖಾತೆಗಳನ್ನು ಹೊಂದಿರಬೇಕಾಗುತ್ತದೆ. ಬ್ಯಾಂಕಿವನರು ಈ ರೀತಿ ಪರಿಚಯಿಸುವವರ ಸಹಿ, ಗುರುತನ್ನು ತಮ್ಮಲ್ಲಿ ಇರುವ ಖಾತೆದಾರನ ದಾಖಲೆಯಿಂದ ಅಥವಾ ಬೇರೆ ಶಾಖೆಗಳ ಮೂಲಕ ದೃಢೀಕರಿಸಿಕೊಳ್ಳುತ್ತಾರೆ.
ಬ್ಯಾಂಕ್ ಖಾತೆಗಳಿಗೆ ಆಧಾರ ನಂಬರ್ ಜೋಡಿಸುತ್ತಿರುವುದರಿಂದ ಕೆಲವು ಬ್ಯಾಂಕುಗಳು ಈ ನಿಟ್ಟಿನಲ್ಲಿ ನಿಯಮಾವಳಿಯನ್ನು ಸಡಿಲಗೊಳಿಸುತ್ತಿವೆಯಂತೆ. ಹೊಸ ಗ್ರಾಹಕನ ಬಗೆಗೆ ಬ್ಯಾಂಕ್ ಮ್ಯಾನೇಜರ್‌ಗೆ ತೃಪ್ತಿಯಾದರೆ, ಗ್ರಾಹಕ know your customer ದಾಖಲೆಗಳನ್ನು ಸಲ್ಲಿಸಿದರೆ, ಇಂಟ್ರಡಕ್ಷನ್‌ಗೆ ಒತ್ತಾಯಿಸಬಾರದು ಎನ್ನುವ ಚಿಂತನೆ ಕ್ರಮೇಣ ಬ್ಯಾಂಕುಗಳಲ್ಲಿ ಕಾಣುತ್ತಿದೆ. ದಶಕಗಳ ಹಿಂದೆ ಒಬ್ಬನನ್ನು ಗುರುತಿಸಲು ಯಾವುದೇ ರೀತಿಯ ದಾಖಲೆಗಳು ಇರುತ್ತಿರಲಿಲ್ಲ. ಅಂತೆಯೇ ಒಬ್ಬರನ್ನು ಗುರುತಿಸಲು ಇನ್ನೊಬ್ಬರು ಬೇಕಾಗಿದ್ದು, ಈ ಪರಿಕಲ್ಪನೆಯೇ ಬ್ಯಾಂಕಿನಲ್ಲಿ ಮುಂದುವರಿದಿತ್ತು. ಆದರೆ, ಇಂದು ಒಬ್ಬರನ್ನು ಗುರುತಿಸಲು ಮತದಾರರ ಗುರುತಿನ ಚೀಟಿ, ಚಾಲನಾ ಅನುಮತಿ ಪತ್ರ ಮತ್ತು ತೀರಾ ಇತ್ತೀಚೆಗಿನ ಆಧಾರ ಕಾರ್ಡ್‌ಗಳು ಇದ್ದು, ಲಾಗಾಯ್ತನಿಂದ ಬಂದ introduction ಪ್ರಕ್ರಿಯೆ ಔಟ್‌ಡೇಟೆಡ್ ಅನಿಸುತ್ತದೆ. ಪರಿಚಯಿಸುವಿಕೆಯ ಪ್ರಕ್ರಿಯೆ ಮುಂದಿನ ದಿಗಳಲ್ಲಿ ಕ್ರಮೇಣ ಇತಿಹಾಸದ ಪುಟ ಸೇರಿದರೆ ಆಶ್ಚರ್ಯವಿಲ್ಲ.
Related Articles
Advertisement
ಪರಿಚಯಿಸುವಿಕೆಯ ಪ್ರಕ್ರಿಯೆ ಮುಗಿದು ಖಾತೆ ತೆರೆದ ಮೇಲೆ, ಬ್ಯಾಂಕಿನವರು ಖಾತೆಯನ್ನು ಪರಿಚಯಿಸಿದವನಿಗೆ ಕೃತಜ್ಞತಾ ಪತ್ರವನ್ನು ಕಳುಹಿಸಿ, ಆತನಿಂದ ಒಪ್ಪಿಗೆ ಪತ್ರ ಪಡೆಯುತ್ತಾರೆ. ಆ ಪತ್ರ ಬಂದ ಮೇಲೆಯೇ ಖಾತೆಯಲ್ಲಿ ಆಪರೇಷನ್ ಮಾಡಲು ಬಿಡಲಾಗುತ್ತದೆ.
ಹೊಸ ಖಾತೆದಾರನಿಗೂ ಇಂಥ ಕಾಗದ ಕಳಿಸುತ್ತಿದ್ದು, ಆತ ಪತ್ರವನ್ನು ಹಿಡಿದು ಬ್ಯಾಂಕಿಗೆ ಬಂದಾಗಲೇ ಚೆಕ್ ಬುಕ್ ನೀಡಲಾಗುವುದು. ಇದು ಬ್ಯಾಂಕುಗಳು ತೆಗೆದು ಕೊಳ್ಳುವ ಮುನ್ನೆಚ್ಚರಿಕೆ ಕ್ರಮ ಮತ್ತು ಸಂಭವನೀಯ ಅನಾಹುತಗಳಿಂದ ರಕ್ಷಿಸಿಕೊಳ್ಳುವ ಮಾರ್ಗ. ಒಂದು ಕಾಲದಲ್ಲಿ ಖಾತೆ ತೆರೆಯವಾಗ ಬ್ಯಾಂಕ್ ಮ್ಯಾನೇಜರ್ ಬ್ಯಾಂಕಿನಲ್ಲಿರುವ ಯಾವುದಾದರೂ ಗ್ರಾಹಕರಿಂದ ಪರಿಚಯದ ಸಹಿ ಮಾಡಿಸಿ ಖಾತೆಗಳನ್ನು ತೆರೆಯತ್ತಿದ್ದರು. ಅದು ಪರಸ್ಪರ ನಂಬಿಕೆ ಉತ್ತುಂಗದಲ್ಲಿ¨ªಾಗ ನಡೆಯುತ್ತಿದ್ದ ಕಾರ್ಯ. ಆದರೆ, ಇಂದು ಕಾಲ ಬದಲಾಗಿದ್ದು, ಯಾವ ಮ್ಯಾನೇಜರ್ ಕೂಡಾ ಈ ಸಾಹಸಕ್ಕೆ ಕೈ ಹಾಕುವುದಿಲ್ಲ. ಯಾವ ಗ್ರಾಹಕರೂ ಈ ಪರಿಚಯಿಸುವಿಕೆಗೆ ಸಹಿ ಮಾಡಲು ಮುಂದೆ ಬರುವುದಿಲ್ಲ. ತಮಗೇಕೆ ಈ ಉಸಾಬರಿ ಎನ್ನುವ ಪ್ರತಿಕ್ರಿಯೆ ತೀರಾ ಸಾಮಾನ್ಯವಾಗಿ ಕಾಣುತ್ತದೆ.
ಉದ್ದೇಶ, ಹೊಣೆಗಾರಿಕೆ ಏನು?ತನ್ನ ಬ್ಯಾಂಕಿನಲ್ಲಿ ಖಾತೆ ತೆರೆಯುವ ವ್ಯಕ್ತಿ ನಕಲಿಯಲ್ಲ. ಅ ವ್ಯಕ್ತಿ ಇ¨ªಾನೆ ಎಂದು ದೃಢೀಕರಿಸಲು ಬ್ಯಾಂಕುಗಳು ಈ ಪರಿಚಯಿಸುವಿಕೆಯನ್ನು ಒತ್ತಾಯಿಸುತ್ತಾರೆ. ಇಲ್ಲದ ವ್ಯಕ್ತಿಯ ಹೆಸರಿನಲ್ಲಿ ಖಾತೆ ತೆರೆದು ಬ್ಯಾಂಕುಗಳಿಗೆ ಮೋಸ ಮಾಡುವುದನ್ನು ತಡೆಗಟ್ಟಲು, ಬ್ಯಾಂಕುಗಳಲ್ಲಿ ಬೇನಾಮಿ ವ್ಯವಹಾರವನ್ನು ನಿಯಂತ್ರಿಸಲು ಬ್ಯಾಂಕುಗಳು ಈ ಮಾರ್ಗವನ್ನು ಬಳಸುತ್ತಾರೆ. ಖಾತೆ ಪರಿಚಯಿಸುವವನ ಹೊಣೆಗಾರಿಕೆ ಖಾತೆದಾರನನ್ನು ಗುರುತಿಸುವದಕ್ಕೆ ಮತ್ತು ಆತನ ವಾಸ ಸ್ಥಳವನ್ನು ತೋರಿಸುವುದಕ್ಕೆ ಮಾತ್ರ ಸೀಮಿತ. ಖಾತೆದಾರನ ಇನ್ನು ಯಾವುದೇ ವಿಷಯದಲ್ಲಿ ಆತನು ಭಾಗೀದಾರನಲ್ಲ. ಖಾತೆದಾರ ಮೋಸ ಮಾಡಿ ಓಡಿ ಹೋದರೆ, ಅವನನ್ನು ಹುಡುಕುವ ಕೆಲಸ ಇವರಿಗೆ ಇರುವುದಿಲ್ಲ. ಅವನನ್ನು ಹಿಡಿದು ತಂದಾಗ, ಅವಶ್ಯಕತೆ ಬಿದ್ದರೆ ಅವನನ್ನು ಗುರುತಿಸುವದಷ್ಟೇ ಅವನ ಹೊಣೆಗಾರಿಕೆ.
ಖಾತೆದಾರ ಮೋಸ ಮಾಡಿದರೆ ?
ಬ್ಯಾಂಕುಗಳಲ್ಲಿ ಹೊಸ ಖಾತೆಗಳನ್ನು ಪರಿಚಯಿಸಲು ಯಾರೂ ಮುಂದೆ ಬರುವುದಿಲ್ಲ. ಇದಕ್ಕೆ ಕಾರಣ ಖಾತೆದಾರನು ಮಾಡಬಹುದಾದ ಮೋಸಕ್ಕೆ ಪರಿಚಯಿಸಿದವರನ್ನು ಹೊಣೆ ಮಾಡುವ ಭಯ. ಆದರೆ, ಸುಪ್ರೀಮ… ಕೋರ್ಟ್ ಈ ನಿಟ್ಟಿನಲ್ಲಿ ಐತಿಹಾಸಿಕ ತೀರ್ಪು ನೀಡಿದ್ದು, ಖಾತೆದಾರನು ಮಾಡಿದ ಮೋಸಕ್ಕೆ ಖಾತೆಯನ್ನು introduce ಮಾಡಿದವನು ಹೊಣೆಯುಲ್ಲ ಹೇಳಿದೆ. ಅವನನ್ನು ಹೊಣೆ ಮಾಡಲು ಪರಿಚಯಿಸಿದವನು ಖಾತೆದಾರನೊಂದಿಗೆ ಶಾಮೀಲು ಆಗಿದ್ದನ್ನು ಸಾಕ್ಷಿ$ ಸಮೇತ ತೋರಿಸಬೇಕಾಗುತ್ತದೆ. ಇದು ಸುಲಭವಲ್ಲ. – ರಮಾನಂದ ಶರ್ಮಾ