Advertisement

ಅತಿವೃಷ್ಟಿ ಸಂತ್ರಸ್ತರಿಗೆ ಬೇಕಿದೆ ಸಹಾಯ

05:39 PM Feb 26, 2022 | Shwetha M |

ದೇವರಹಿಪ್ಪರಗಿ: ಅತಿವೃಷ್ಟಿಯಿಂದ ಮನೆ ಹಾನಿಗೊಳಗಾಗಿ ಪರಿಹಾರ ಕಾಣದೇ ಎಂಟಕ್ಕೂ ಹೆಚ್ಚು ಕುಟುಂಬಗಳು ಸರ್ಕಾರದ ಸಹಾಯಕ್ಕಾಗಿ ಆಗ್ರಹಿಸಿವೆ.

Advertisement

ತಾಲೂಕಿನ ಕಡ್ಲೇವಾಡ ಪಿಸಿಎಚ್‌ ಗ್ರಾಮದಲ್ಲಿ 2020ರ ಅಕ್ಟೋಬರ್‌ನಲ್ಲಿ ಅತಿವೃಷ್ಟಿಯಿಂದ 12ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಸಂಭವಿಸಿತ್ತು. ಈ ಸಂದರ್ಭದಲ್ಲಿ ತಾಲೂಕಾಡಳಿತದಿಂದ ಸಮೀಕ್ಷೆ ನಡೆದು ವರದಿ ನೀಡಲಾಗಿತ್ತು. ನಂತರ ಮನೆಗಳ ಹಾನಿಗೆ ಸಂಬಂಧಿಸಿಂತೆ ಸರ್ಕಾರದಿಂದ ಕೇವಲ ಅಲ್ಪ ಹಾನಿ ಸಂಭವಿಸಿದ ನಾಲ್ಕು ಮನೆಗಳಿಗೆ 25 ಸಾವಿರ ರೂ.ಪರಿಹಾರ ಒದಗಿ ಬಂದಿತ್ತು. ಇನ್ನೂಳಿದಂತೆ ಅತಿ ಹೆಚ್ಚು ಹಾನಿಗೊಳಗಾದ 8 ಮನೆಗಳಿಗೆ ಸಂಬಂಧಿಸಿದ ಯಾವುದೇ ಪರಿಹಾರ ಮಾತ್ರ 2 ವರ್ಷಗಳಾದರೂ ಬಿಡುಗಡೆಯಾಗಿಲ್ಲ. ಇದರಿಂದ ಅಲ್ಲಿರುವ ಎಂಟು ಬಡ ಕುಟುಂಬಗಳು ಅನಿವಾರ್ಯವಾಗಿ ಇಂಥ ಮನೆಯಲ್ಲಿಯೇ ಕಾಲ ಕಳೆಯುವಂತಾಗಿದೆ.

ಈ ಬಗ್ಗೆ ಗ್ರಾಮದ ಭೀಮಣ್ಣ ಮಾದರ ತನ್ನ ಅಸಹಾಯಕತೆ ವ್ಯಕ್ತಪಡಿಸುತ್ತ, ನಾನು ಬಡವ. ಜೊತೆಗೆ ಅನಾರೋಗ್ಯಕ್ಕೆ ಒಳಗಾಗಿ ದುಡಿಯಲು ಬರದಂತಾಗಿದೆ. ಈಗ ನನ್ನ ಹೆಂಡತಿಯ ದುಡಿಮೆಯೇ ಆಧಾರ. ನನಗೆ ಇರುವುದೇ ಒಂದೂವರೆ ಎಕರೆ ಜಮೀನು. ನಾಲ್ಕು ಮಕ್ಕಳಿಗೆ ಶಾಲೆ ಕಲಿಸಿ ಜೀವನ ಸಾಗಿಸುವುದೇ ಕಷ್ಟಕರ. ಇಂಥ ಸಮಯದಲ್ಲಿ ಮನೆ ಕಟ್ಟಿಕೊಳ್ಳುವುದು ನನ್ನಿಂದ ಆಗದು. ಆದ್ದರಿಂದ ಸರ್ಕಾರ ನೆರವು ನೀಡಿದಲ್ಲಿ ನನ್ನ ಬಿದ್ದ ಮನೆ ಸರಿಯಾಗುತ್ತದೆ. ಇಲ್ಲವಾದರೆ ಮುಂದಿನ ಮಳೆಗಾಲದ ಸಮಯ ನನ್ನ ಕುಟುಂಬ ಬೀದಿಗೆ ಬರುತ್ತದೆ ಎಂದು ಅಳಲು ತೋಡಿಕೊಳ್ಳುತ್ತಾರೆ.

ಜಿಲ್ಲಾ ಹಾಗೂ ತಾಲೂಕಾಡಳಿತ ಕೂಡಲೇ ಗ್ರಾಮದ ಇನ್ನೂಳಿದ ಎಂಟು ಮನೆಗಳಿಗೆ ಕೂಡಲೇ ಪರಿಹಾರ ಒದಗಿಸಿ ಬಡ ಕುಟುಂಬಗಳ ನೆರವಿಗೆ ಮುಂದಾಗಬೇಕು. ಬಸವಂತ್ರಾಯ ಬಿರಾದಾರ, ಗ್ರಾಮಸ್ಥ ಈ ವಿಷಯದ ಬಗ್ಗೆ ನನಗೆ ಮಾಹಿತಿ ಬಂದಿಲ್ಲ. ಕೂಡಲೆ ಗ್ರಾಮ ಲೆಕ್ಕಾಧಿಕಾರಿಗಳಿಗೆ ಕಳುಹಿಸಿ ಮಾಹಿತಿ ಕಲೆ ಹಾಕುತ್ತೆನೆ. ಆ ಕುಟುಂಬಗಳಿಗೆ ಸೂಕ್ತ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. -ಸಿ.ಎ. ಗುಡದಿನ್ನಿ, ತಹಶೀಲ್ದಾರ್‌, ದೇವರಹಿಪ್ಪರಗಿ

Advertisement

Udayavani is now on Telegram. Click here to join our channel and stay updated with the latest news.

Next