Advertisement

ಸಮಗ್ರ ಮೀನುಗಾರಿಕೆ ನೀತಿ ಅಗತ್ಯ: ಡಾಣ ಜಿ. ಶಂಕರ್‌

01:03 AM Dec 09, 2019 | Team Udayavani |

ಮಂಗಳೂರು: ಮುಂದಿನ ಪೀಳಿಗೆಗೆ ಮೀನುಗಾರಿಕೆಯನ್ನು ಉಳಿಸುವುದಕ್ಕಾಗಿ ಸಮಗ್ರ ಮೀನುಗಾರಿಕೆ ನೀತಿ ಅಗತ್ಯವಿದೆ ಎಂದು ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ. ಜಿ. ಶಂಕರ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಫೆಡರೇಶನ್‌ ನಿ. ಮಂಗಳೂರು ಮತ್ತು ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಅಂಬಲಪಾಡಿ, ಮಾಹೆ ಮಣಿಪಾಲ ಇವರ ಸಹಯೋಗದೊಂದಿಗೆ ನಗರದ ಮುಳಿಹಿತ್ಲು ಪ್ರಧಾನ ಕಚೇರಿಯಲ್ಲಿ ಶನಿವಾರ ನಡೆದ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್‌, ವಿದ್ಯಾರ್ಥಿವೇತನ ಮತ್ತು ಬೋಟ್‌ ಮಾಲಕರಿಗೆ ಪ್ರೋತ್ಸಾಹ ಉಡುಗೊರೆ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷ ಯಶ್‌ಪಾಲ್‌ ಎ. ಸುವರ್ಣ ಮಾತನಾಡಿ, ಫೆಡರೇಶನ್‌ ಹಂತಹಂತವಾಗಿ ಬೆಳೆದಿದ್ದು, 10 ವರ್ಷದಲ್ಲಿ 40 ಕೋಟಿ ರೂ. ಲಾಭ ಗಳಿಸಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 1 ಕೋಟಿ ರೂ. ಮೊತ್ತದ ವಿದ್ಯಾರ್ಥಿ ವೇತನ, ಪ್ರೋತ್ಸಾಹಕ ಉಡುಗೊರೆ, ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್‌ಗಳನ್ನು ವಿತರಿಸುತ್ತಿರುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಐಒಸಿ ಮಂಗಳೂರು ಇದರ ಚೀಫ್ ಡಿವಿಜನಲ್‌ ರಿಟೇಲ್‌ ಸೇಲ್ಸ್‌ ಮ್ಯಾನೇಜರ್‌ ಅನೂಪ್‌ ಕುಶ್ವಾ, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌, ಮಣಿಪಾಲ್‌ ಗ್ರೂಪ್‌ನ ವಿಮಾ ವಿಭಾಗದ ಜನರಲ್‌ ಮ್ಯಾನೇಜರ್‌ ಯು.ಎಸ್‌. ಶ್ರೀಪತಿ, ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ವಿನಯ್‌ ಕರ್ಕೇರ, ಪುರುಷೋತ್ತಮ್‌, ಹರೀಶ್‌ ಕುಮಾರ್‌, ಕಾರ್ಪೊರೇಟರ್‌ಗಳಾದ ರೇವತಿ ಶ್ಯಾಂ ಸುಂದರ್‌, ಭಾನುಮತಿ ಉಪಸ್ಥಿತರಿದ್ದರು.

1 ಕೋ.ರೂ. ಮೊತ್ತದ ಸೌಲಭ್ಯ ವಿತರಣೆ
ದ.ಕ. ಜಿಲ್ಲಾ ವ್ಯಾಪ್ತಿಯ 16 ಮೀನುಗಾರಿಕೆ ಸದಸ್ಯ ಸಹಕಾರಿ ಸಂಘಗಳ 1,617 ಕುಟುಂಬಗಳ 4,911 ಸದಸ್ಯರಿಗೆ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್‌, 93 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಮಂಗಳೂರು ಬಂದರು ಶಾಖೆಯ 124 ಬೋಟ್‌ ಮಾಲಕರಿಗೆ ಪ್ರೋತ್ಸಾಹಕ ಉಡುಗೊರೆ, 28 ಬೋಟ್‌ ಮಾಲಕರಿಗೆ ಮೊಬಿಲ್‌ ಆಯಿಲ್‌ ವಿತರಣೆ ಮಾಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next