Advertisement
ಹೆಮ್ಮಾಡಿ ಕಟ್ಟುವಿನ ಸರಕಾರಿ ಕಿ.ಪ್ರಾ. ಶಾಲೆಯ ಒಂದು ಕೊಠಡಿಯ ಮಾಡಿನ ಪಕ್ಕಾಸಿ ಮುರಿದಿದ್ದು, ಕುಸಿದು ಬೀಳುವ ಅಪಾಯದಲ್ಲಿದೆ. ಇದರಿಂದ ಮುನ್ನೆಚ್ಚರಿಕೆ ನೆಲೆಯಲ್ಲಿ ಪಕ್ಕದ ಕೊಠಡಿಯಲ್ಲಿ ಮಕ್ಕಳನ್ನು ಕುಳ್ಳಿರಿಸಲಾಗಿದ್ದು, ಅಲ್ಲಿ ಪಾಠ – ಪ್ರವಚನ ನಡೆಸಲಾಗುತ್ತಿದೆ. ಆದರೆ ಅಲ್ಲಿಯೂ ಸ್ಥಳಾವಕಾಶದ ಕೊರತೆ ದೊಡ್ಡ ಸಮಸ್ಯೆಯಾಗಿದೆ.
Related Articles
Advertisement
ಈಗಾಗಲೇ ಎಸ್‌ಡಿಎಂಸಿ, ಹಳೆ ವಿದ್ಯಾರ್ಥಿ ಸಂಘದವರು, ಶಾಲೆಯ ಕಡೆಯಿಂದ ದುರಸ್ತಿಗೆ ಶಿಕ್ಷಣ ಇಲಾಖೆ ಹಾಗೂ ಹೆಮ್ಮಾಡಿ ಗ್ರಾ.ಪಂ.ಗೆ ಮನವಿ ಕೊಡಲಾಗಿದೆ. ಪಂಚಾಯತ್ ಕಡೆಯಿಂದ, ಶಿಕ್ಷಣ ಇಲಾಖೆಯಿಂದ ಈಗಾಗಲೇ ಶಾಲೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ದುರಸ್ತಿ ಮಾಡಿಕೊಡುವ ಭರವಸೆ ನೀಡಿದ್ದಾರೆ. ಆದರೆ ಇನ್ನೂ ಯಾವುದೇ ಬೆಳವಣಿಗೆ ಆಗಿಲ್ಲ. ಈಗಿನ್ನು ಮಕ್ಕಳಿಗೆ ದಸರಾ ರಜೆ ಆರಂಭವಾಗಲಿದ್ದು, ಮತ್ತೆ ರಜೆ ಮುಗಿಸಿ, ದುರಸ್ತಿಯಾದರೆ ಮಕ್ಕಳಿಗೆ ಪ್ರಯೋಜನವಾಗಲಿದ್ದು, ಆ ನಿಟ್ಟಿನಲ್ಲಿ ಆದಷ್ಟು ಬೇಗ ದುರಸ್ತಿ ಮಾಡಿ ಎಂದು ಪೋಷಕರು, ಊರವರು ಒತ್ತಾಯಿಸಿದ್ದಾರೆ.
ಮನವಿ ಕೊಟ್ಟಿದ್ದೇವೆ: ನಾವು ಹೆಮ್ಮಾಡಿ ಪಂ.ಗೆ, ಕ್ಷೇತ್ರ ಶಿಕ್ಷಣ ಅಧಿಕಾರಿಗಳಿಗೂ ಮನವಿ ನೀಡಲಾಗಿದೆ. ಆದಷ್ಟು ಬೇಗ ದುರಸ್ತಿಯಾಗಬೇಕಿದೆ. ಇಲ್ಲದಿದ್ದರೆ ಮಕ್ಕಳಿಗೆ ತೊಂದರೆಯಾಗ ಲಿದೆ. ಇದರೊಂದಿಗೆ ಹೆಚ್ಚುವರಿಯಾಗಿ ಒಂದು ಕೊಠಡಿಯಾದರೆ ಶಾಲೆಗೆ ಪ್ರಯೋಜನವಾಗಲಿದೆ. –ಸುನಿಲ್ ಎನ್. ಪೂಜಾರಿ ಕಟ್ಟು,ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು
ಶೀಘ್ರ ದುರಸ್ತಿ: ಕಟ್ಟು ಶಾಲೆಯ ಮಾಡು ಕುಸಿಯುವ ಬಗ್ಗೆ ಗಮನಕ್ಕೆ ಬಂದಿದ್ದು, ಈಗಾಗಲೇ ಅಲ್ಲಿಗೆ ಭೇಟಿ ನೀಡಿದ್ದೇವೆ. ಆದಷ್ಟು ಬೇಗ ಪಂ.ನಿಂದ ದುರಸ್ತಿ ಮಾಡುವ ಕ್ರಮಕೈಗೊಳ್ಳಲಾಗುವುದು. –ಸುಧಾಕರ ದೇವಾಡಿಗ, ಹೆಮ್ಮಾಡಿ ಗ್ರಾ.ಪಂ. ಅಧ್ಯಕ್ಷರು