Advertisement
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕಂಟ್ರೋಲ್ ರೂಂನಲ್ಲಿ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಕರೆಯೊಂದನ್ನು ಸ್ವೀಕರಿಸುವ ಮೂಲಕ ದಸರಾ ಸಹಾಯವಾಣಿಗೆ ಚಾಲನೆ ನೀಡಿ, ದಸರಾ ಸಹಾಯವಾಣಿ ಸಂಖ್ಯೆ 0821-2444777 ಸಂಪರ್ಕಿಸಿ ದಸರಾ ಮಹೋತ್ಸವದ ಕಾರ್ಯಕ್ರಮ ಗಳು, ಪ್ರವಾಸೋದ್ಯಮ ಸಂಬಂಧಿಸಿದಂತೆ ಮಾಹಿತಿ ಪಡೆಯಬಹುದು. ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದ ಮೇರೆಗೆ ಕಾರ್ಯಾರಂಭ ಮಾಡಿರುವ ಸಹಾಯವಾಣಿ ದಸರಾ ಮುಗಿಯುವವರೆಗೂ ಚಾಲ್ತಿಯಲ್ಲಿರಲಿದೆ ಎಂದು ಹೇಳಿದರು.
Related Articles
Advertisement
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು, ಪ್ರವಾಸಿ ಗರಿಗೆ ಮಾಹಿತಿ ಕೊರತೆಯಾಗಬಾರದೆಂಬ ಹಿನ್ನೆಲೆ ಯಲ್ಲಿ ದಸರಾ ಸಹಾಯವಾಣಿ ಪ್ರಾರಂಭಿಸಲಾಗಿದೆ. ತರಬೇತಿ ಪಡೆದ 100 ವಿದ್ಯಾರ್ಥಿಗಳು ಕಾರ್ಯ ನಿರ್ವಹಿಸಲಿದ್ದು, ದಸರಾ ಮಹೋತ್ಸವ ಪೂರ್ಣ ಮಾಹಿತಿಯನ್ನು ನೀಡಲಿದ್ದಾರೆ.
ದಸರಾ ಪಾರಂಪರಿಕ ಹಬ್ಬ ತುಂಬ ಚೆನ್ನಾಗಿ ಆಗಬೇಕೆಂಬ ಹಿನ್ನೆಲೆಯಲ್ಲಿ ಹಲವು ಸಭೆ ನಡೆಸಿದ್ದೇನೆ. ಈ ಉತ್ಸವದ ಯಶಸ್ಸಿಗೆ ಎಲ್ಲರ ಸಹಕಾರ ಕೋರ ಲಿದ್ದೇನೆ. ಅ.8ರ ನಂತರ ಮೈಸೂರು ಅಭಿವೃದ್ಧಿ ಕುರಿ ತಂತೆ ಚರ್ಚಿಸಲಾಗುವುದು. ಅಲ್ಲಿಯವರೆಗೆ ಯಶಸ್ವಿ ದಸರಾ ಆಚರಣೆಗೆ ಆದ್ಯತೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್‌ಸಿಂಹ, ಜಿಲ್ಲಾಧಿ ಕಾರಿ ಅಭಿರಾಮ್ ಜಿ.ಶಂಕರ್, ಪ್ರವಾ ಸೋದ್ಯಮ ಇಲಾಖೆ ಉಪ ನಿರ್ದೇಶಕ ಜನಾರ್ಧನ್, ಅಪರ ಜಿಲ್ಲಾಧಿ ಕಾರಿ ಪೂರ್ಣಿಮಾ ಮತ್ತಿತರರು ಉಪಸ್ಥಿತರಿದ್ದರು.