Advertisement

ಆಧಾರ್‌ಗಾಗಿ ರಕ್ತವನ್ನೂ ಕೊಡಬೇಕೆ?

07:00 AM Apr 05, 2018 | Team Udayavani |

ಹೊಸದಿಲ್ಲಿ: ಸಾರ್ವಜನಿಕರಿಗೆ ಆಧಾರ್‌ ಕಾರ್ಡ್‌ ನೀಡುವ ಹೊಣೆಗಾರಿಕೆ ಹೊಂದಿರುವ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಮುಂದೊಂದು ದಿನ ತನ್ನ ಗುರುತಿನ ಚೀಟಿಗೆ ಮತ್ತಷ್ಟು ಮಹತ್ವ ನೀಡಲು ಜನರಿಂದ  ರಕ್ತದ ಮಾದರಿ ನೀಡಬೇಕು ಎಂದು ಕೋರಬಹುದೇನೋ ಎಂದು ಸುಪ್ರೀಂ ಕೋರ್ಟ್‌ ಆತಂಕ ವ್ಯಕ್ತಪಡಿಸಿದೆ. ಈ ಮೂಲಕ, 2016ರಲ್ಲಿ ರೂಪಿಸಲಾಗಿರುವ ಆಧಾರ್‌ ಕಾನೂನಿನ್ವಯ ಪ್ರಾಧಿಕಾರಕ್ಕೆ ನೀಡಲಾಗಿ ರುವ ಹೆಚ್ಚಿನ ಅಧಿಕಾರಗಳನ್ನು ಕೋರ್ಟ್‌ ಪ್ರಶ್ನಿಸಿದೆ. 

Advertisement

ಆಧಾರ್‌ ಕಾನೂನಿನ ಸಾಧಕ ಬಾಧಕಗಳ ಬಗ್ಗೆ ಬುಧವಾರ, ಐವರು ನ್ಯಾಯಮೂರ್ತಿಗಳುಳ್ಳ ನ್ಯಾಯಪೀಠದಲ್ಲಿದ್ದ ನ್ಯಾ. ಚಂದ್ರಚೂಡ್‌, ಆಧಾರ್‌ ಕಾರ್ಡ್‌ಗಾಗಿ ಸದ್ಯದ ಮಟ್ಟಿಗೆ ನಾಗರಿಕರಿಂದ ಬೆರಳಚ್ಚು ಹಾಗೂ ಕಣ್ಣಿನ ಮಸೂರವನ್ನು ಸ್ಕ್ಯಾನ್‌ ಮಾಡಲಾಗುತ್ತಿದೆ. ಮುಂದೆ ಸಾರ್ವಜನಿಕರ ರಕ್ತದ ಮಾದರಿ ಪಡೆದು ಅದರ ಡಿಎನ್‌ಎ ಮಾಹಿತಿಯನ್ನು ಸಂಗ್ರಹಿಸುವಂಥ ಕಾಲ ಬರಬಹುದು. ಇಂಥ ಕ್ರಮ ಖಾಸಗಿ ಹಕ್ಕಿಗೆ ಚ್ಯುತಿ ತಂದಂತೆ ಆಗುವುದಿಲ್ಲವೆ’ ಎಂದು ಪ್ರಶ್ನಿಸಿದರು. 

ಅದಕ್ಕೆ ಉತ್ತರಿಸಿದ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌, “ಸರಕಾರದ ಪ್ರತಿ ನಡೆಯನ್ನು ನ್ಯಾಯಾಲಯಗಳು ಪ್ರಶ್ನಿಸುತ್ತಾ ಸಾಗಿದರೆ ಉತ್ತಮ ಉದ್ದೇಶ ಸಾಧನೆಗೆ ಅಡ್ಡಿಯಾಗಬಹುದು’ ಎಂದರು. ರಾಷ್ಟ್ರೀಯ ಹಿತಾಸಕ್ತಿಯಲ್ಲಿರುವ ಯೋಜನೆಗೆ ತಡೆಯೊಡ್ಡುವುದು ಸರಿಯಲ್ಲ. ಆಧಾರ್‌ಗಾಗಿ ಬಯೋಮೆಟ್ರಿಕ್‌ ಮಾಹಿತಿ ದಾಖಲಿಸುವುದು ಖಾಸಗಿತಕ್ಕೆ ಧಕ್ಕೆ ಅಲ್ಲ ಎಂದರು ಅಟಾರ್ನಿ ಜನರಲ್‌.

Advertisement

Udayavani is now on Telegram. Click here to join our channel and stay updated with the latest news.

Next