Advertisement
ಮಾರುಕಟ್ಟೆಯಲ್ಲಿ ಗ್ರಾಹಕನೇ ಸಾರ್ವಭೌಮ. ಆತ ತನಗೆ ಬೇಕಾದ ಸರಕು ಹಾಗೂ ಸೇವೆಗಳನ್ನು ನೇರವಾಗಿ ಮಾರುಕಟ್ಟೆಯಲ್ಲಿ ಖರೀದಿಸಿದಾಗ, ಕೆಲವೊಂದು ಮೂಲ ಹಕ್ಕುಗಳನ್ನು ಆ ಸರಕಿನ ಮೇಲೆ ಹೊಂದಿರುತ್ತಾನೆ. ಇಂದು ಮಾರುಕಟ್ಟೆಯೂ ಹಲವಾರು ಆಯಾಮಗಳಲ್ಲಿ ತೆರೆದುಕೊಂಡಿದೆ. ನೇರವಾಗಿ ಮಾರುಕಟ್ಟೆ ಗೆ ಹೋಗಿ ವಸ್ತುಗಳನ್ನು ಖರೀದಿಸಬೇಕೆಂದಿಲ್ಲ, ಡಿಜಿಟಲ್ ಯುಗ ಇದಾಗಿರುವುದರಿಂದಾಗಿ ಕೇವಲ ಬೆರಳು ತುದಿಯ ಸ್ಪರ್ಶದಿಂದಲೇ ಸರಕುಗಳು ಮನೆಗೆ ಬಂದು ಬಿಡುತ್ತವೆ. ಇತ್ತೀಚೆಗಷ್ಟೇ ಬಾಲಿವುಡ್ ನಟಿಯೊಬ್ಬರಿಗೆ ಆನ್‌ಲೈನ್ ವ್ಯಾಪಾರದಿಂದಾಗಿ ಸರಕು ಬದಲಿ ಕಲ್ಲು ಬಂದಿದ್ದು, ದೊಡ್ಡ ಸುದ್ದಿಯಾಗಿತ್ತು. ಹಾಗಾಗಿ ಕೇವಲ ಆನ್‌ಲೈನ್ ಮಾತ್ರವಲ್ಲ ಪ್ರತಿ ಮಾರುಕಟ್ಟೆಯ ವಸ್ತುಗಳ ಗುಣಮಟ್ಟ ಹಾಗೂ ವಿಶ್ವಾಸಾರ್ಹತೆ ಬಗ್ಗೆ ಗ್ರಾಹಕರಿಗೆ ಜಾಗೃತಿ ಮೂಡಿಸಬೇಕಾಗುತ್ತದೆ. ಗ್ರಾಹಕರು ತಾವು ಖರೀದಿಸಿದ ವಸ್ತುವಿನ ಮೂಲ ಹಕ್ಕುಗಳನ್ನು ಪ್ರಚುರ ಪಡಿಸುವ ಜಾಗೃತಿಗಾಗಿ ಮಾರ್ಚ್ 15 ರಂದು ವಿಶ್ವ ಗ್ರಾಹಕರ ಹಕ್ಕುಗಳ ದಿನ ಎಂದು ಆಚರಿಸಲಾಗುತ್ತದೆ.
ಅಮೆರಿಕ ಅಧ್ಯಕ್ಷ ಜೆ.ಎಫ್. ಕೆನಡಿ ಅವರು ಸಂಸತ್ ಕಾಂಗ್ರೆಸ್‌ನಲ್ಲಿ 1962ರಲ್ಲಿ ಗ್ರಾಹಕರು ಹಕ್ಕುಗಳಿಗೆ ಮೊದಲ ಬಾರಿಗೆ ಧ್ವನಿಯಾದರು. ಮಾರುಕಟ್ಟೆಯಲ್ಲಿ ಗ್ರಾಹಕರು ತಮ್ಮ ಸರಕುಗಳ ಮೇಲೆ ಕೆಲವೊಂದು ಮೂಲ ಹಕ್ಕುಗಳನ್ನು ಹೊಂದಿರುತ್ತಾನೆ ಎಂದು ಪ್ರತಿಪಾದಿಸಿದ ಅವರು ನಾಲ್ಕು ವಿಧೇಯಕಗಳನ್ನು ಮಂಡಿಸಿದರು. ಗ್ರಾಹಕರ ದಿನಾಚರಣೆಗೆ ಕರೆನೀಡಿದರು. ಇದಕ್ಕನುಗುಣವಾಗಿ 1983ರಿಂದ ವಿಶ್ವ ಗ್ರಾಹಕರ ಹಕ್ಕುಗಳ ದಿನ ಆಚರಣೆ ಮುನ್ನೆಲೆಗೆ ಬಂದಿತು. ವಿಶ್ವ ಗ್ರಾಹಕರ ದಿನವನ್ನು ‘ವಿಶ್ವಾಸಾರ್ಹ ಸ್ಮಾರ್ಟ್ ಉತ್ಪನ್ನಗಳು’ ಎಂಬ ಥೀಮ್ ಸಂದೇ ಶ ದೊಂದಿಗೆ 2019ರ ವಿಶ್ವ ಗ್ರಾಹಕರ ದಿನವನ್ನು ಆಚರಿಸಲಾಗುತ್ತದೆ.
Related Articles
Advertisement
ಗ್ರಾಹಕ ಮತ್ತು ಮಾರುಕಟ್ಟೆಗ್ರಾಹಕನೊಬ್ಬ ಮಾರುಕಟ್ಟೆ ಯಲ್ಲಿ ಒಂದು ಸರಕುಕೊಳ್ಳುವಾಗ ಎಕ್ಸ್ಪೈಪರ್ ದಿನಾಂಕ, ಎಸ್‌ಒ, ಹಾಲ್‌ಮಾಮಾರ್ಕ್ ನಂತ ಸಂಕೇತ ಹಾಗೂ ಉತ್ಪನ್ನದ ಗುಣಮಟ್ಟವನ್ನು ಪರೀಕ್ಷಿಸುವುದು ವೈಯಕ್ತಿಕ ಜವಾಬ್ದಾರಿ. ಆದರೆ ಇವುಗಳನ್ನು ಮೀರಿ, ಕೆಲವೊಮ್ಮೆ ವಂಚನೆ, ಮೋಸ ಆಗಬೇಕಾಗುತ್ತದೆ. ಇದಕ್ಕಾಗಿಯೇ ಗ್ರಾಹಕನೂ ತಮ್ಮ ಸರಕಿನ ಮೇಲೆ ಮೂಲಭೂತ ಹಕ್ಕುಗಳ ಹೊಂದಿರುವುದು ಅವಶ್ಯವಾಗಿ ತಿಳಿದಿರಬೇಕಾಗುತ್ತದೆ. ಗ್ರಾಹಕರ ಹಕ್ಕುಗಳ ದಿನಾಚರಣೆಯ ಈ ದಿನದಂದು ಗ್ರಾಹಕರ ಬಗ್ಗೆ ಕೆಲವೊಂದು ಪರಿಣಾಮಕಾರಿಯಾದ ಚಿಂತನೆ ಅಗತ್ಯವಾಗಿದೆ. ವಿಶ್ವದ ಮಾರುಕಟ್ಟೆಯೂ ವಿಸ್ತತಗೊಂಡಿದ್ದು, ಆನ್‌ಲೈನ್ ಬಾಹುಳ್ಯವಾಗಿದೆ. ಸುಮಾರು ಆಂದಾಜಿನಂತೆ 23 ಬಿಲಿಯನ್ ವಸ್ತುಗಳ ಇಂದು ಆನ್‌ಲೈನ್ ಮುಖೇನ ದೊರೆಯುತ್ತಿರುವುದರಿಂದಾಗಿ ಗ್ರಾಹಕರು ಹೆಚ್ಚಿನದಾಗಿ ಆನ್‌ಲೈನ್ ಮಾರುಕಟ್ಟೆಯನ್ನೇ ಅನುಸರಿಸುತ್ತಿದ್ದಾರೆ. ಹೀಗಾಗಿ ಆನ್‌ಲೈನ್ ವಸ್ತುಗಳ ವಿಶ್ವಾಸಾರ್ಹತೆ, ಬಾಳಿಕೆ, ಗುಣಮಟ್ಟ ಹಾಗೂ ಪಾರದರ್ಶಕತೆ ಮುಖ್ಯವಾಗಿ ಬೇಕಾಗುತ್ತದೆ. ಗ್ರಾಹಕನ ಹಣಕ್ಕೆ ತಕ್ಕನಾಗಿ ವಸ್ತು ತಾನು ಇದ್ದಲ್ಲಿ ಬಂದಿರುತ್ತದೆ, ಆದರೆ ಗುಣಮಟ್ಟ ಪರೀಕ್ಷಿಸಿರುವುದಿಲ್ಲ. ಯಶಸ್ವಿ ಮಾರುಕಟ್ಟೆಯೂ ಮಧ್ಯೆ ಆನ್‌ಲೈನ್ ಮಾರುಕಟ್ಟೆಯ ಮೇಲೆ ಗ್ರಾಹಕ ಆಗಾಗ ದೂರುವುದರಿಂದಾಗಿ ಆನ್ ಲೈನ್ ಮಾರುಕಟ್ಟೆಯೂ ಕೂಡ ಪಾರದರ್ಶಕತೆ ಕಂಡುಕೊಳ್ಳಬೇಕಿದೆ. ಭಾರತ ಮತ್ತು ಗ್ರಾಹಕರ ದಿನಾಚರಣೆ
ಭಾರತದಲ್ಲಿ ವಿಶ್ವ ಗ್ರಾಹಕರ ದಿನವನ್ನು ಆಚರಿಸಿದರೂ ಡಿ. 24ರಂದು ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಆಚರಿಸಲಾಗುತ್ತದೆ. 1986ರ ಡಿಸೆಂಬರ್ 24ರಂದು ಗ್ರಾಹಕರ ಸಂರಕ್ಷಣೆ ಕಾಯ್ದೆ ಅಂಗೀಕಾರಗೊಂಡ ಕಾರಣದಿಂದಾಗಿ ಡಿ. 24ರಂದು ರಾಷ್ಟ್ರೀಯ ಗ್ರಾಹಕ ದಿನವನ್ನಾಗಿ ಆಚರಿಸಲಾಗುತ್ತದೆ. ಗ್ರಾಹಕ ಹಕ್ಕುಗಳು
ಗ್ರಾಹಕರ ಸಂರಕ್ಷಣೆ ಕಾಯ್ದೆ-1986ರ ಪ್ರಕಾರವಾಗಿ ಗ್ರಾಹಕನೂ ಕೆಲವೊಂದು ಮೂಲಭೂತ ಹಕ್ಕುಗಳನ್ನು ಹೊಂದಿರುತ್ತಾನೆ. ಸುರಕ್ಷತೆ ಹಕ್ಕು, ಮಾಹಿತಿ ಹಕ್ಕು, ಆಯ್ಕೆಯ ಹಕ್ಕು, ಆಲಿಸುವ ಹಕ್ಕು, ಕುಂದುಕೊರತೆ ನಿವಾರಿಸುವ ಹಕ್ಕು, ಗ್ರಾಹಕರ ಶಿಕ್ಷಣದ ಹಕ್ಕು. ಆರು ಗ್ರಾಹಕರ ಹಕ್ಕುಗಳ ಅನ್ವಯ ಗ್ರಾಹಕನೊಬ್ಬನು ಮಾರುಕಟ್ಟೆಯಲ್ಲಿ ತನ್ನ ಸರಕಿನ ಮೇಲೆ ಮೋಸ, ವಂಚನೆ ಕಂಡುಬಂದರೆ ಗ್ರಾಹಕ ಸಂರಕ್ಷಣೆ ಕಾಯ್ದೆ ಪ್ರಕಾರವಾಗಿ ಗ್ರಾಹಕ ನ್ಯಾಯಲಯಗಳಿಗೆ ದೂರು ಸಲ್ಲಿಸಿ, ಪರಿಹಾರವನ್ನು ಪಡೆಯಬಹುದು. ಶಿವ ಸ್ಥಾವರಮಠ