ಅಸ್ಸಾಂ ಬಿದಿರಿಗೆ ವಿಶ್ವಮಾನ್ಯತೆ ಇದೆ. ಈ ಬಿದಿರು ಸುದೀರ್ಘ ಬಾಳಿಕೆ ಬರುತ್ತದೆ ಅನ್ನುವುದು ಒಂದು ಕಾರಣ. ಅಸ್ಸಾಂ ಬಿದಿರಿನಲ್ಲಿ ಮಾಡಿರುವ ಪೀಠೊಪಕರಣಗಳು, ಕುಸುರಿ ಕೆತ್ತನೆಗಳಲ್ಲಿ ಅದ್ಭುತ ಫಿನಿಶಿಂಗ್ ಇರುತ್ತೆ, ಪ್ರಾದೇಶಿಕ ಸೊಗಡು ಇರುತ್ತೆ, ಎಲ್ಲಕ್ಕಿಂತ ಮುಖ್ಯವಾಗಿ ಅಸ್ಸಾಂ ಬಿದಿರಿನ ಕಲಾಪರಂಪರೆಗೆ ಸಾವಿರಾರು ವರ್ಷದ ಇತಿಹಾಸ ಇದೆ. ನಮ್ಮ ಬೆಂಗಳೂರಲ್ಲೂ ಅಸ್ಸಾಂ ಬಿದಿರಿನ ತರಹೇವಾರಿ ಪೀಠೊಪಕರಣಗಳು ಲಭ್ಯವಿವೆ. ಜೆಪಿ ನಗರದಲ್ಲಿರೋ ಅಸ್ಸಾಂ ಬ್ಯಾಂಬೂ ಫರ್ನಿಚರ್ ಎಂಬ ಶಾಪ್‌ನಲ್ಲಿ ಅಸ್ಸಾಮಿ ಬಿದಿರಿನ ಸೋಫಾ, ಆರಾಮ ಚೇರ್, ಬೆಡ್, ದಿವಾನ್, ಬಾರ್ ಕೌಂಟರ್, ಹಟ್‌ಗಳಿಂದ ಹಿಡಿದು ಕರಕುಶಲ ವಸ್ತುಗಳು ಸಿಗುತ್ತವೆ.
ಬ್ಯಾಂಬೂ ಸೋಫಾ : ಬಿದಿರಿನ ಸೋಫಾಗಳು ಮಾಮೂಲಾಗಿ ಎಲ್ಲ ಕಡೆ ಸಿಗುತ್ತವೆ. ಆದರೆ ಈ ಸೋಫಾಗಳ ವಿನ್ಯಾಸ ಮಾಮೂಲಿಗಿಂತ ಭಿನ್ನ. ಬಿದಿರಿನ ಆಕಾರವನ್ನು, ದೇಸಿಯತೆಯನ್ನು ಉಳಿಸಿಕೊಂಡೇ ನಿರ್ಮಿಸಿರುವ ಸೋಫಾಗಳು. ದಪ್ಪ ಹಾಗೂ ತೆಳುವಿನ ಬಿದಿರನ್ನು ಬಳಸಿ ಇವುಗಳನ್ನು ನಿರ್ಮಿಸಲಾಗಿದೆ. ತಳಭಾಗಕ್ಕೆ ಬಿದಿರಿನ ಹೆಣಿಗೆ ಇದೆ. ಪರಿಸರ ಸ್ನೇಹಿ, ದೇಸಿತನವನ್ನು ಉಳಿಸಿಕೊಂಡಂತಿರುವ ಈ ಸೋಫಾಗಳು ವಿಭಿನ್ನತೆಯಿಂದ ಗಮನಸೆಳೆಯುತ್ತವೆ.
ಬಿದಿರಿನ ಮಂಚ: ಸಿಟಿಯಲ್ಲಿರುವವರಿಗೆ ಮರದ ಮೇಲೆ ಬೊಡ್ಡೆಯ ಮೇಲೆ ಮಲಗಿದ ಅನುಭವವಿರಲಿಕ್ಕಿಲ್ಲ. ಬಿದಿರಿನ ಮಂಚ ನಿಮಗೆ ಮರದ ಬೆಚ್ಚನೆಯ ಅನುಭೂತಿ ಕೊಡುತ್ತೆ. ನಿದ್ದೆಯೂ ಚೆನ್ನಾಗಿ ಬರುತ್ತೆ. ಆಧುನಿಕ ಮತ್ತು ಸಾಂಪ್ರದಾಯಿಕ ಮಾದರಿಯ ಬಿದಿರಿನ ಮಂಚಗಳು ನಿಮಗಿಷ್ಟವಾಗಬಹುದು.
ಬಿದಿರಿನ ಗುಡಿಸಲು : ಮನೆಯಿರುವ ಜಾಗ ವಿಶಾಲವಾಗಿದ್ದರೆ ಗಾರ್ಡನ್ ಏರಿಯಾದಲ್ಲಿ ಬಿದಿರಿನ ಗುಡಿಸಲು ಹಾಕಿಕೊಳ್ಳಬಹುದು. ಸಂಜೆ ಪುಸ್ತಕ ಓದ್ತಾ ಅಥವಾ ಲ್ಯಾಪ್‌ಟಾಪ್‌ನಲ್ಲಿ ವರ್ಕ್‌ಮಾಡುತ್ತ ಇಲ್ಲಿ ಕೂರಬಹುದು. ರಿಲ್ಯಾಕ್ಸ್ ಆಗಲು ಹೇಳಿ ಮಾಡಿಸಿದ ಹಾಗಿದೆ ಈ ಗುಡಿಸಲು. ಗಾರ್ಡನ್ ಇಲ್ಲದವರು ಟೆರೆಸ್ ಮೇಲೂ ಇಂಥ ಗುಡಿಸಲು ಹಾಕ್ಕೊಳ್ಳಬಹುದು.
ಇದಲ್ಲದೇ ಬ್ಯಾಂಬೂ ಬಾರ್ ಕೌಂಟರ್ ಗಳನ್ನೂ ಇವರು ನಿರ್ಮಿಸಿಕೊಡುತ್ತಾರೆ. ಡ್ರೆಸ್ಸಿಂಗ್ ಟೇಬಲ್, ಬ್ಯಾಂಬೂ ಕಬೋರ್ಡ್‌ಗಳೂ ಇವೆ.
ಎಲ್ಲಕ್ಕಿಂತ ಹೆಚ್ಚಾಗಿ ಇವರು ಅಸ್ಸಾಮಿ ಬಿದಿರಿನ ಮನೆಯನ್ನೂ ನಿರ್ಮಿಸಿಕೊಡುತ್ತಾರೆ.
ಎಲ್ಲಿ?: ಅಸ್ಸಾಂ ಬ್ಯಾಂಬೂ ಫರ್ನಿಚರ್, ಆರ್ ವಿ ಡೆಂಟಲ್ ಕಾಲೇಜ್ ಎದುರು, ಐಟಿಐ ಲೇಔಟ್, ಜೆಪಿ ನಗರ
ಸಂಪರ್ಕ: 9740002754
ವಿವರಗಳಿಗೆ: //www.assambamboofurniture.com/home-page.html