Advertisement
1. ಚರ್ಮದ ಮಾಯಿಶ್ಚರೈಸರ್ಕೊಬ್ಬರಿ ಎಣ್ಣೆಯಲ್ಲಿ ವಿಟಮಿನ್ ಇ ಅಧಿಕವಾಗಿರುವುದರಿಂದ ಚರ್ಮದ ಆರೋಗ್ಯಕ್ಕೆ ಒಳ್ಳೆಯದು. ಒಣ ಚರ್ಮದವರು ನಿಯಮಿತವಾಗಿ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡರೆ, ತ್ವಚೆ ಮೃದುವಾಗುತ್ತದೆ.
ಭರತನಾಟ್ಯ ಪ್ರದರ್ಶನಕ್ಕೆ ಹಚ್ಚಿದ ಗಾಢ ಮೇಕಪ್ ಇರಲಿ, ಕಣ್ಣಿಗೆ ಹಚ್ಚಿದ ಮಸ್ಕಾರ ಇರಲಿ; ಒಂದೆರಡು ಹನಿ ಕೊಬ್ಬರಿ ಎಣ್ಣೆ ಹಾಕಿ ಮೆಲ್ಲಗೆ ಉಜ್ಜಿದರೆ ಸಾಕು. ಚರ್ಮಕ್ಕೆ ಚೂರೂ ಹಾನಿಯಾಗದಂತೆ ಮೇಕಪ್ ಅನ್ನು ಅಳಿಸಿ ಹಾಕುತ್ತದೆ. ದುಬಾರಿ ಮೇಕಪ್ ರಿಮೂವರ್‌ಗಳನ್ನು ಖರೀದಿಸುವುದೇ ಬೇಡ. 3. ಕೂದಲಿನ ಮಾಸ್ಕ್
ನಿಮ್ಮ ಸೊಂಪಾದ ಕಪ್ಪು ಕೂದಲಿನ ರಹಸ್ಯ ಏನೆಂದು ಅಮ್ಮ, ಅಜ್ಜಿ, ಅತ್ತೆಯನ್ನು ಕೇಳಿ ನೋಡಿ. ಅವರೆಲ್ಲ ಹೇಳುವ ಮಂತ್ರ ಕೊಬ್ಬರಿ ಎಣ್ಣೆ ಎಂದೇ! ವಾರಕ್ಕೆರಡು ಬಾರಿ ಕೂದಲಿನ ಬುಡಕ್ಕೆ ಕೊಬ್ಬರಿ ಎಣ್ಣೆ ಹಚ್ಚಿ, ಮಸಾಜ್ ಮಾಡಿ, 20-30 ನಿಮಿಷ ಬಿಟ್ಟು ಸ್ನಾನ ಮಾಡಿ.
Related Articles
ಚರ್ಮ ಸುಕ್ಕುಗಟ್ಟಿ, ಮುಖ ವಯಸ್ಸಾದಂತೆ ಕಾಣುವುದನ್ನು ತಡೆಯಲು ಕೊಬ್ಬರಿ ಎಣ್ಣೆ ಸಹಕಾರಿ. ಚರ್ಮದ ರಂಧ್ರದೊಳಕ್ಕೆ ಸೇರುವ ಎಣ್ಣೆ, ತ್ವಚೆಯನ್ನು ತೇವಗೊಳಿಸುವುದಷ್ಟೇ ಅಲ್ಲದೆ ಚರ್ಮಕ್ಕೆ ಹೊಳಪನ್ನು ನೀಡುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ಸ್ಕಿನ್‌ಕೇರ್ ಕ್ರೀಂಗಳಲ್ಲಿ ಕೊಬ್ಬರಿಎಣ್ಣೆಯ ಅಂಶವಿರುತ್ತದೆ.
Advertisement
5. ಮೊಡವೆ ತಡೆಯಲುಹದಿಹರೆಯದವರನ್ನು ಕಾಡುವ ಮೊಡವೆ ಸಮಸ್ಯೆಗೂ ಕೊಬ್ಬರಿ ಎಣ್ಣೆ ಶಮನಕಾರಿ. ಆ್ಯಂಟಿ ಬ್ಯಾಕ್ಟೀರಿಯಾ ಗುಣ ಹೊಂದಿರುವ ಕೊಬ್ಬರಿ ಎಣ್ಣೆಯನ್ನು ಹಚ್ಚುವುದರಿಂದ ಮೊಡವೆ, ಮೊಡವೆ ಕಲೆ ಕಡಿಮೆಯಾಗುತ್ತದೆ. ಕಜ್ಜಿ, ತುರಿಕೆಯಂಥ ಚರ್ಮದ ಸಮಸ್ಯೆಗಳೂ ಕಾಡುವುದಿಲ್ಲ.