Advertisement

ಅದ್ಧೂರಿ ಮದುವೆಗೆಬೇಕಿದೆ ಕಡಿವಾಣ

01:14 PM Apr 14, 2017 | |

ದಾವಣಗೆರೆ: ಪ್ರಸ್ತುತ ವಾತಾವರಣದಲ್ಲಿ ಸರಳ ಸಾಮೂಹಿಕ ವಿವಾಹ ಮಹೋತ್ಸವ ಉತ್ತೇಜಿಸುವ ಮೂಲಕ ಅದ್ಧೂರಿ ಮದುವೆಗೆ ಕಡಿವಾಣ ಹಾಕಬೇಕಿದೆ ಎಂದು ಚಿಕ್ಕಬಳ್ಳಾಪುರ ನಂದಿಬೆಟ್ಟದ ಜ್ಞಾನಾನಂದ ಅಶ್ರಮದ ಶ್ರೀ ಶಿವಾತ್ಮಾನಂದ ಸ್ವಾಮೀಜಿ ತಿಳಿಸಿದ್ದಾರೆ.

Advertisement

ವಿಶ್ವಕರ್ಮ ಸಮಾಜ ಸಂಘದಿಂದ ಗುರುವಾರ ಶ್ರೀ ಕಾಳಿಕಾಂಬ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ ಉಪನಯನ ಮತ್ತು ವಿವಾಹ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಅದ್ಧೂರಿ, ಆಡಂಬರದ ಮದುವೆಗೆ ಬದಲಿಗೆ ಕಡಿಮೆ ವೆಚ್ಚದ ಸರಳ ಸಾಮೂಹಿಕ ವಿವಾಹ ಮಹೋತ್ಸವಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು. 

ಶಿಲ್ಪ, ಚಿನ್ನ-ಬೆಳ್ಳಿ, ಕಬ್ಬಿಣ, ಮರ ಮುಂತಾದ ಪಂಚಕಸುಬುಗಳನ್ನು ವಿಶ್ವಕ್ಕೆ ಪರಿಚಯಿಸಿದ ವಿಶ್ವಕರ್ಮ ಸಮಾಜ ಬಾಂಧವರು ಸರ್ವ ಧರ್ಮದ ಸಮನ್ವಯ ಬದುಕು ಸಾಗಿಸುತ್ತಿದ್ದಾರೆ. ತಮ್ಮ ಕುಲ ಕಸುಬುಗಳ ಮೂಲಕ ಸಮಾಜದ ಸೇವೆ ಮಾಡುತ್ತಿದೆ. ಸಮಾಜ ಬಾಂಧವರು ಮಕ್ಕಳನ್ನು ವಿದ್ಯಾವಂತರನ್ನಾಗಿಸುವ ಮೂಲಕ ಸಮಾಜವನ್ನು ಬಲಿಷ್ಠಗೊಳಿಸಬೇಕು ಎಂದು ತಿಳಿಸಿದರು. 

ಅರೆಮಾದನಹಳ್ಳಿಯ ಸುಜ್ಞಾನ ಪ್ರಭುಪೀಠದ ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ ಮಾತನಾಡಿ, ವಿಶ್ವಕರ್ಮ ಸಮಾಜದಲ್ಲಿ 36ಕ್ಕೂ ಹೆಚ್ಚು ಪೀಠಗಳಿವೆ. ಅತಿ ಹೆಚ್ಚು ಪೀಠಗಳ ಹೊಂದಿರುವ ಸಮಾಜಗಳ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿರುವ ಸಮಾಜ ಇತರೆ ಸಮಾಜಗಳಂತೆ ಪ್ರಬಲ, ಪ್ರಭಾವಿಯಾಗಿ ಬೆಳೆದಿಲ್ಲ.

ಸಮಾಜ ಬಾಂಧವರು ತಮ್ಮ ಜೊತೆಗೆ ಪೀಠ ಬೆಳೆಸುವಂತಾಗಬೇಕು. ಒಳಪಂಗಡ ಮರೆತು ವಿಶ್ವಕರ್ಮ ಸಮಾಜ ಬಾಂಧವರೆಲ್ಲ ಒಂದಾಗಿ ಏಕತೆಯ ಸಾಧಿಸಬೇಕು ಎಂದು ತಿಳಿಸಿದರು. ಈಚೆಗೆ ಶಿಕ್ಷಣವಂತರ ಸಂಖ್ಯೆ ಹೆಚ್ಚಾಗುತ್ತಿರುವಂತೆ ಮಾಧ್ಯಮಗಳ ಸಂಸ್ಕಾರಕ್ಕೆ ಹೆಚ್ಚು ಒಳಗಾಗುತ್ತಿದ್ದಾರೆ.

Advertisement

ಮಾಧ್ಯಮಗಳಲ್ಲಿ ಪ್ರಸಾರ, ಪ್ರಕಟವಾಗುವ ಸಂಸ್ಕಾರಕ್ಕೆ ಸಂಬಂಧಿಸಿದ ವಿಚಾರಗಳು ಧಾರ್ಮಿಕ ಸಂಸ್ಕಾರಕ್ಕಿಂತಲೂ ಹೆಚ್ಚಿನ ಪ್ರಭಾವ ಬೀರುವುದು ಕಾಣಬಹುದು. ನಾವು ಎಷ್ಟೇ ಜ್ಞಾನವಂತರೇ ಆಗಿದ್ದರೂ ಧಾರ್ಮಿಕ ಸಂಸ್ಕಾರ ಇಲ್ಲದೇ ಹೋದಲ್ಲಿ ಅದು ಸಮಾಜಕ್ಕೆ ಮಾರಕ ಆಗಲಿದೆ ಎಂದು ಎಚ್ಚರಿಸಿದರು. 

ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಗಂಡ-ಹೆಂಡತಿ ಸಂಸಾರ ರಥದ ಎರಡು ಗಾಲಿಗಳು. ಒಬ್ಬರನ್ನೊಬ್ಬರು ಚೆನ್ನಾಗಿ ಅರಿತುಕೊಂಡು, ಹೊಂದಾಣಿಕೆಯಿಂದ ಸುಖ ಜೀವನ ನಡೆಸಬೇಕು. ಮಕ್ಕಳನ್ನು ಉತ್ತಮ ವಿದ್ಯಾವಂತರನ್ನಾಗಿ ಮಾಡುವ ಮೂಲಕ ಸಮಾಜಕ್ಕೆ ಅಮೂಲ್ಯ ಕಾಣಿಕೆ ನೀಡಬೇಕು ಎಂದು ತಿಳಿಸಿದರು.  

ವಿಶ್ವಕರ್ಮ ಸಮಾಜ ಸಂಘದ ಅಧ್ಯಕ್ಷ ಬಸಾಪುರದ ಬಿ. ನಾಗೇಂದ್ರಚಾರ್‌ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಜವಳಿ ವರ್ತಕ ಬಿ.ಸಿ. ಉಮಾಪತಿ, ವಿಶ್ವಕರ್ಮ ಸಮಾಜದ ಅಧ್ಯಕ್ಷ ಕೆ.ಪಿ. ಮರಿಯಾಚಾರ್‌, ಕೆ.ಎನ್‌. ಪುಟ್ಟಸ್ವಾಮಿ, ಎಚ್‌. ಎನ್‌. ಜಯಾಚಾರ್‌ ಇತರರು ಇದ್ದರು. 15 ಜೋಡಿ ಮದುವೆ ನೆರವೇರಿತು. 57 ವಟುಗಳಿಗೆ ಸಾಮೂಹಿಕ ಉಪನಯನ ನೆರವೇರಿಸಲಾಯಿತು.  

Advertisement

Udayavani is now on Telegram. Click here to join our channel and stay updated with the latest news.

Next