ಕತ್ತಲೆ ತುಂಬಿದ ಮನೆಯೊಳಗೆ ಮಲಗಿರೋ ಕೂಸೇ
ಮತ್ತೆ ಬರತಾನೆ ನೇಸರ ಅಂತ ಗೊತ್ತಿದ್ದರೂ
ಅಳುವುದ್ಯಾಕೆ ಸುಮ್ಮಗೆ?
ರಚ್ಚೆ ಹಿಡಿದು ನೀನು ರಂಪ ಮಾಡಿದ್ದಕ್ಕೆ,
ಬೆಚ್ಚಿ ಎದ್ದು ಕುಳಿತೇ ಬಿಟ್ಟ ನೋಡು
ಮಲಗಿದ್ದ ಮನೆ ದೇವರೀಗ ಹೀಗೆ!
ಯಾರವರು ನನ್ನ ನೆಮ್ಮದಿ ಕಳೆದದ್ದು? ಕೇಳ್ತಿ¨ªಾನೆ ದೇವರು
ಈ ಕೂಸೇ ಹಾಗೆ ಮಾಡಿದ್ದು ನೋಡಯ್ನಾ…
ಯಾರವರು ನಾನು ಬೆಚ್ಚುವಂತೆ ಮಾಡಿದ್ದು? ಕೇಳ್ತಿ¨ªಾನೆ ದೇವರು
ಈ ಕೂಸೇ ಹಾಗೆ ಮಾಡಿದ್ದು ನೋಡಯ್ನಾ…
ಕುಡಿದು ತೂರಾಡುತ್ತಾ ನೆಟ್ಟಗೆ ಕೂರಲೂ ಆಗದೆ,
ಉರುಳಿ ಬಿದ್ದು ಗದ್ದಲ ಮಾಡುವ ಮಂದಿಯ ಹಾಗೆ
ಸದ್ದು ಮಾಡುತ್ತಾ
ಈ ಕೂಸೇ ನಿನ್ನ ನೆಮ್ಮದಿ ಕಳೆದಿದ್ದು,
ಈ ಕೂಸೇ ನಿನ್ನ ಬೆಚ್ಚುವಂತೆ ಮಾಡಿದ್ದು
ಈ ಕೂಸೇ ನಿನ್ನ ನಿ¨ªೆ ಕೆಡಿಸಿದ್ದು!
ಅಗೋ ನೋಡು ಕರೀತಿ¨ªಾನೆ ಮನೆ ದೇವರು,
ಏಯ…, ಯಾರಲ್ಲಿ? ಆ ಕೂಸನ್ನೀಗಲೇ ಇಲ್ಲಿ ಕರೆ ತನ್ನಿ…
Advertisement
ದೇವರು ಮತ್ತು ಮಗು – ಇಬ್ಬರೂ ನಿ¨ªೆ ಕಳೆದುಕೊಂಡು ಎದ್ದು ಕುಳಿತಿ¨ªಾರೆ. ದೇವರ ನಿ¨ªೆ ಕೆಡಿಸಿದ್ದು ಈ ಮಗುವೇ ಎಂದು ಅಮ್ಮನೊ ಅಪ್ಪನೋ ಒಟ್ಟಿನಲ್ಲಿ ಯಾರೋ “ದೊಡ್ಡವರು’ ಹೇಳುತ್ತಿ¨ªಾರೆ. ಈ ಕೂಸು ಅತ್ತು ರಂಪ ಮಾಡಿದ್ದಕ್ಕೇ ನಿ¨ªೆ ಹೋದ ದೇವರು ಹೀಗೆ ಎದ್ದು ಕುಳಿತದ್ದು! ಆದರೆ ಈ ಕೂಸು ನಿ¨ªೆ ಕಳೆದುಕೊಂಡು ಎದ್ದು ರಂಪ ಮಾಡುತ್ತಿರುವುದಕ್ಕೆ ಕಾರಣ ಏನು ಎಂದು ತಿಳಿಯುತ್ತಿಲ್ಲ. ಮುಂಜಾವಿಗೆ ಮತ್ತೆ ಬೆಳಕು ಮೂಡುವುದು ಅಂತ ಗೊತ್ತಿದ್ದರೂ ಕತ್ತಲಿನಲ್ಲಿ ಸುಮ್ಮನೆ ಮಲಗದೆ ಅಳುವುದ್ಯಾಕೆ ಎಂದು ಇವರೇನೊ ಹೇಳುತ್ತಿ¨ªಾರೆ. ಆದರೆ ಇವರಿಗಾದರೂ ಕೂಸಿನ ಅಳುವಿನ ಕಾರಣ ಕತ್ತಲೆಯ¨ªೋ ಮತಾöತರಧ್ದೋ ಎಂದು ಹೇಗೆ ಗೊತ್ತು ಹೇಳಿ? ಎದ್ದು ರಚ್ಚೆ ಹಿಡಿದು ಅಳುತ್ತಿರುವ ಮಗುವನ್ನ ಹೆದರಿಸಿ ಸುಮ್ಮನಾಗಿಸುವ ಉಪಾಯದಲ್ಲಿಯೇ ಇವರು ಆ ದೇವರೂ ಎದ್ದು ಕುಳಿತಿ¨ªಾನೆ ಎಂದೂ ನಿ¨ªೆ ಕೆಡಿಸಿದ್ದಕ್ಕೆ ಕಾರಣವಾದ ನಿನ್ನನ್ನ ಇದೋ ಕರೆದೇಬಿಟ್ಟ ಎಂದೂ ಹೇಳುತ್ತಿ¨ªಾರೆ. ಹಾಗೆ ಕರೆಯುತ್ತಿರುವ ದೇವರಿಗೆ ಸಿಟ್ಟು ಬಂದಿದೆ. ಹೀಗಾಗಿ, ಅವನು ಮಗುವನ್ನು ಶಿಕ್ಷಿಸಬಹುದು. ಹೇಗೆÇÉಾ ಶಿಕ್ಷಿಸಬಹುದು? ಗೊತ್ತಿಲ್ಲ, ಯಾರಿಗೆ ಗೊತ್ತು ಅವನು ಮಗುವನ್ನ ರಮಿಸಿ, ಮುದ್ದಿಸಿ ಮತ್ತೆ ಮಲಗಿಸಲೂಬಹುದು. ನಾವು ನೀವು ಮಾಡಿಕೊಂಡಿರುವ ಕರುಣಾಮಯಿ ದೇವರೇ ಅವನಾದರೆ, ನಿ¨ªೆ ಕೆಡಿಸಿದ ಮಗುವಿಗೆ ಅವನು ಹಾಗೆಲ್ಲ ಶಿಕ್ಷೆ-ಗಿಕ್ಷೆ ಕೊಡಲಾರ. ಅವನು ಕೂಸನ್ನು ಕರೆಯುತ್ತಿರುವುದು, ಅದರ ಕಣ್ಣು ಮೂಗು ಒರೆಸಿ, ಕಥೆ ಹೇಳಿ, ಲಾಲಿ ಹಾಡಿ ಮಲಗಿಸಲಿಕ್ಕೇ ಇರಬಹುದು.
ತುಂಬೈತೆ ಕತ್ತಲು ಹಟ್ಟಿàಯ ಒಳಗೆÇÉಾ
ಬರುತಾನೆ ನೇಸರ ಮರೆಯದೆ ಮತ್ತೆ
ಹಿಂಗ್ಯಾಕೆ ರಚ್ಚೇಯ ಹಿಡಿದೀಯೋ ನೀ ಈಗ
ಸುಮ್ಮಾನೆ ಮಲಗೋ ನನ ಕೂಸೇ…..
Related Articles
ಬೆಚ್ಚಿ ಕುಂತವನÇÉೋ ಮನೆದ್ಯಾವ್ರು!
ಬೆಚ್ಚುತ್ತಾ ಎದ್ದವನು ರೊಚ್ಚಿನಲಿ ಕೇಳವನೆ
ಯಾರವರು ನನ್ನ ನಿದ್ದಿ ಕದ್ದವರು?’
Advertisement
ಈ ಕೂಸೆ ದ್ಯಾವಾರೆ ನಿನ್ನ ನಿ¨ªೆ ಕದ್ದಿದ್ದುಈ ಕೂಸೇ ನಿನ ನೆಮ್ಮದಿ ಕಳೆದದ್ದು
ಈ ಕೂಸೇ ನಿನ್ನನ್ನ ಬೆಚ್ಚಿಸಿ, ಎಬ್ಬಿಸಿ
ಒದರಾಡುವಂಥಿಂಗೆ ಮಾಡಿದ್ದು….. ಕೂರಲಾರದೆ ಉರುಳಿ ಗದ್ದಲ ಎಬ್ಬಿಸುವ
ಕಳ್ಳು ಕುಡಿದವರಂತೆ ಆಡಿದ್ದು,
ಈ ಕೂಸೆ ದ್ಯಾವರೆ ರಚ್ಚೆಯ ಹಿಡಿದದ್ದು
ಅತ್ತು ನಿನ್ನಾ ನಿ¨ªೆ ಕೆಡಿಸಿದ್ದು…. ನೋಡಿಲ್ಲಿ ನನ್ನ ಕೂಸೆ, ಮಲಗಿದ್ದ ದ್ಯಾವರು
ಎದ್ದು ಕುಂತವನೆ ನಿನ್ನಿಂದಲೇ!
ಎದ್ದವನು ಹೇಳವನೆ ಸುಮ್ಮಾನೆ ಕೇಳೀಗ,
ಕರೆತನ್ನಿ ಆ ಕೂಸ ಈವಾಗಲೇ!’…. ಸರಿ, ಹೇಳುವುದನ್ನು ಹೇಗೆ ಬೇಕಾದರೂ ಹೇಳಿಬಿಡಬಹುದು. ಆದರೆ ಹೇಗೆ ಬೇಕಾದರೂ ಹೇಳಿಬಿಡಬಹುದಾದ ಕಾರಣಕ್ಕೇ ದಿಕ್ಕು ತೋರಿಸುವ ಅಥವಾ ದಾರಿ ತಪ್ಪಿಸಿಬಿಡುವ ಇಬ್ಬದಿಯ ಗುಣವೊಂದು ಮಾತಿಗಿದೆ. ಹೀಗಾಗಿಯೆ, ಮಾತಿನÇÉೇ ಸುಳಿದು ಉಳಿದು ಹೊಳೆದು ಕಳೆದು ಬಿಡುವ ಏನೋ ಒಂದನ್ನು ಬೇರೆ ದಾರಿಯಿಲ್ಲದೆ, ಒಂಚೂರು ಅನುಮಾನದÇÉೇ ನೋಡುವ ಹೊಸದೊಂದು ಜೊತೆ ಕಣ್ಣು ಎಲ್ಲವನ್ನೂ ಸುಮ್ಮನೆ ನೋಡುತ್ತಿದೆ, ಕೇಳಿಸಿಕೊಳ್ಳುತ್ತಿದೆ, ಧ್ಯಾನಿಸುತ್ತಿದೆ. ಅರ್ಥದ ಹಂಗು ಕಳೆದುಕೊಂಡು ಅದನ್ನು ಭಾವಿಸಲು ಹವಣಿಸುತ್ತಿದೆ. ಈ ಹವಣಿಕೆ ಪ್ರಯತ್ನಪೂರ್ವಕವಲ್ಲದೆ ಹಾಗೇ ಸುಮ್ಮನೆ ತಾನಾಗಿಯೇ ಆದ “ಕ್ಷಣಕ್ಕೆ ಮಾತು’ ದಕ್ಕಿಬಿಡಲೂಬಹುದು ಎಂದು ಮಾತೊಂದು ಸುಮ್ಮನೆ ಹೇಳುತ್ತಿದೆ. ಇರಬಹುದೇನೋ! – ಮೀರಾ ಪಿ. ಆರ್., ನ್ಯೂಜೆರ್ಸಿ