Advertisement

ನೀರಿಂಗಿಸಲು ಸೂಕ್ತ ವ್ಯವಸ್ಥೆ ಅಗತ್ಯ

10:29 PM Mar 29, 2019 | Team Udayavani |

ಉಡುಪಿ: ದುಡ್ಡಿನ ಶೋಕಿಗೆ ಬಿದ್ದು ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿದ್ದೇವೆ. ಆದರೆ ಅಲ್ಲಿಗೆ ಬರುವ ನೀರಿನ ಮೂಲ ತಿಳಿಯುವ ಗೋಜಿಗೆ ಹೋಗುವುದಿಲ್ಲ. ಭೂಮಿಯಿಂದ ನೀರು ತೆಗೆಯುವ ಹಲವಾರು ತಂತ್ರಜ್ಞಾನಗಳಿದ್ದರೂ ನೀರಿಂಗಿಸುವಂತೆ ಮಾಡಲು ನಾವು ಯಾವುದೇ ವ್ಯವಸ್ಥೆ ಮಾಡದಿರುವುದೇ ನೀರಿನ ಅಭಾವಕ್ಕೆ ಮೂಲ ಕಾರಣ ಎಂದು ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ನುಡಿದರು.

Advertisement

ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಆಶ್ರಯದಲ್ಲಿ ಕಾಲೇಜಿನಲ್ಲಿ ಗುರುವಾರ ನಡೆದ ಜಲಸಂರಕ್ಷಣೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.

ಜಲಕ್ಷಾಮ ತಡೆಯಿರಿ
ಸಂಪನ್ಮೂಲ ವ್ಯಕ್ತಿ ಜೋಸೆಫ್ ಜಿ.ಎಂ. ರೆಬೆಲ್ಲೊ ಮಾತನಾಡಿ, “ಸಮುದ್ರಕ್ಕೆ ಹರಿಯುವ ನೀರನ್ನು ಹಿಡಿದಿಟ್ಟು ಇಂಗಿಸಿ ದರೆ ಜಲಕ್ಷಾಮ ವನ್ನು ತಡೆಗಟ್ಟಬಹುದು. ನಳ್ಳಿ, ಕೊಳವೆಬಾವಿಯಲ್ಲಿ ನೀರು ಸಿಗುತ್ತದೆ ಎಂದರೆ ಆ ಊರಿನಲ್ಲಿ ಜಲಕ್ಷಾಮ ಇದೆ ಎಂದರ್ಥ’ ಎಂದರು.

ಶುದ್ಧ ನೀರಿನ ಅಭಾವ
ಇಂದು ಭೂಮಿಯಲ್ಲಿ ಶುದ್ಧ ನೀರಿಲ್ಲ. ನದಿಯಿಂದ ಬರುವ ನೀರು ಕಲುಷಿತವಾಗುತ್ತಿದೆ. ಅದನ್ನು ಶುದ್ಧೀಕರಿಸಿ ನಾವು ಕುಡಿಯುತ್ತಿದ್ದೇವೆ. ಆಧುನಿಕತೆಯ ಭರದಲ್ಲಿ ಕೆರೆಗಳಲ್ಲೂ ಶುದ್ಧ ನೀರು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ| ಬಿ.ಜಗದೀಶ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಗೌರವ ಕೋಶಾಧಿಕಾರಿ ಪ್ರದೀಪ್‌ ಕುಮಾರ್‌ ಉಪಸ್ಥಿತರಿದ್ದರು. ಉಪನ್ಯಾಸಕ ಡಾ| ಶ್ರೀಕಾಂತ ರಾವ್‌ ಸಿದ್ಧಾಪುರ ಸ್ವಾಗತಿಸಿದರು. ಶಿವಕುಮಾರ್‌ ಅಳಗೋಡು ವಂದಿಸಿ, ಮಂಜುನಾಥ ಕರಬ ನಿರೂಪಿಸಿದರು.
ಕಾರ್ಯಕ್ರಮದ ಬಳಿಕ ವಿದ್ಯಾರ್ಥಿ ಗಳಿಂದ ಹನಿಧ್ವನಿ ಕಿರು ಪ್ರಹಸನ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next