Advertisement

ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕವಿತೆ ಅಗತ್ಯ

11:43 AM Dec 31, 2017 | |

ಬಸವಕಲ್ಯಾಣ: ಸಮಾಜದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕವಿತೆಗಳು ಅಗತ್ಯವಾಗಿದೆ ಎಂದು ಬೆಂಗಳೂರಿನ ಸಾಹಿತಿ ಅಕ್ಕ ಮಹಾದೇವಿ ಹಾರೂಗೇರಿ ಹೇಳಿದರು.

Advertisement

ತಾಲೂಕಿನ ಹುಲಸೂರಿನಲ್ಲಿ ಶ್ರೀ ಜಗದ್ಗುರು ಬಸವಕುಮಾರ ಶಿವಯೋಗಿಗಳ 42ನೇ ಪುಣ್ಯ ಸ್ಮರಣೋತ್ಸವ, ಬೀದರ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರ ಬದುಕು-ಬರಹ ಹಾಗೂ ಕವಿ ಗೋಷ್ಠಿಯಲ್ಲಿ ಆಶಯ ಭಾಷಣ ಮಾಡಿದ ಅವರು, ಇಂದಿನ ಕವಿಗಳು ಅಧ್ಯಯನಶೀಲತೆ ಬೆಳೆಸಿಕೊಳ್ಳಬೇಕು. ಹಳೆ ತಲೆಮಾರಿನ ಸಾಹಿತ್ಯ
ಓದಬೇಕು. ಹೊಸತನ ಬಿಂಬಿಸಬೇಕು ಎಂದು ಸಲಹೆ ನೀಡಿದರು.

ಸಮ್ಮೇಳನಾಧ್ಯಕ್ಷರ ಬದುಕು, ಬರಹ ವಿಶೇಷ ಉಪನ್ಯಾಸ ನೀಡಿದ ಕುರಿತು ಹೊಸಪೇಟೆ ಸಾಹಿತಿ ಡಾ| ರಾಜಶೇಖರ ಜಮದಂಡಿ, ಕೇವಲ ಬರವಣಿಗೆ ಬರೆದು ಪ್ರಕಟಿಸಿದರೆ ಸಾಲದು. ಅದನ್ನು ಕಾರ್ಯರೂಪಕ್ಕೆ ತರಬೇಕು. ಸಮಾಜ ನಮಗೆ ಏನು ಕೋಡುತ್ತದೆ ಎನ್ನುವದಕ್ಕಿಂತಲೂ ಮುನ್ನ ಸಮಾಜಕ್ಕಾಗಿ ನಾವು ಏನು ಕೊಡುಗೇ ಕೊಟ್ಟಿದ್ದೇವೆ. ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ವಿಶ್ವನಾಥ ಮುಕ್ತಾ ಮಾತನಾಡಿದರು. ಸಾಹಿತಿ ಎಸ್‌.ಎಂ. ಜನವಾಡಕರ್‌, ಹಂಸ ಕವಿ, ಪಂಡಿತ ಬಸವರಾಜ, ಸೋಮನಾಥ ನೂಚ್ಚಾ, ಮಾಣೀಕರಾವ ಪಾಟೀಲ, ಗೋಪಾಲಕೃಷ್ಣ ವಂಡಸೆ, ಶಿವಕುಮಾರ ಕಟ್ಟೆ, ಪಾಂಡುರಂಗ ಬೆಲ್ದಾರ ಇದ್ದರು. 

ಕವಿಗಳಾದ ಕಿಚ್ಚಾ ಮಹೇಶ, ಕ್ಷಮಾ ಉಪಾಧ್ಯಾಯ, ಗೌತಮ ಬಕ್ಕಪ್ಪ, ಜಗದೇವಿ ಭೋಸ್ಲೆ, ಬಿ.ಎನ್‌. ಸೋಲಾಪುರೆ, ಬಸವರಾಜೇಶ್ವರಿ ದೇಗಲೂರೆ, ಬಸವರಾಜ ದಯಾಸಾಗರ, ರಮೇಶ ಬಿರಾದಾರ, ರುಕ್ಮೋದ್ದಿನ್‌ ಇಸ್ಲಾಂಪುರ, ಹಣಮಂತರಾವ ವಿಸಾಜಿ, ಭಾನುದಾಸ ಪಾಟೀಲ, ವೀರಶಟ್ಟಿ ಪಾಟೀಲ, ವೀರಣ್ಣ ಮಂಠಾಳಕರ್‌, ಪ್ರದೀಪ ಗಡವಂತೆ, ಸಚಿನ ನೀಲಂಗೆ, ಶೀಲಾ ಜೂಜಾ, ಶ್ರೀದೇವಿ ಹೂಗಾರ, ವಿದ್ಯಾವತಿ ಹಿರೇಮಠ ಸೇರಿದಂತೆ ನಾನಾ ಕಡೆಗಳಿಂದ ಆಗಮಿಸಿದ್ದ ಕವಿಗಳು ಕವನ ವಾಚನ ಮಾಡಿದರು.

Advertisement

ರೈತರ ಸಮಸ್ಯೆಗಳು, ಕಲುಷಿತಗೊಳುತಿರುವ ರಾಜಕೀಯ ವ್ಯವಸ್ಥೆ, ಸಮಾಜದಲ್ಲಿ ಸ್ತ್ರೀ ಸಮಾನತೆ, ಸ್ತ್ರೀಯರ ಸ್ಥಾನ-ಮಾನ, ಭಾಷೆ, ಸಂಸ್ಕೃತಿ, ನೆಲ, ಜಲ, ಕನ್ನಡದ ಭಾಷಾ ವೈಶಿಷ್ಟತೆ ಮತ್ತು ಶ್ರೀಮಂತಿಕೆ, ಸಮಾಜಕ್ಕೆ ಕಾಡುತ್ತಿರುವ ಜ್ವಲಂತ ಸಮಸ್ಯೆಗಳು ಕವಿ ಗೋಷ್ಠಿಯಲ್ಲಿ ಅನಾವರಣಗೊಂಡವು.

ಕಸಾಪ ತಾಲೂಕು ಅಧ್ಯಕ್ಷೆ ಶಿವಲಿಲಾ ಮಠಪತಿ ಸ್ವಾಗತಿಸಿದರು. ದೇವಿಂದ್ರ ಬರಗಾಲೆ ನಿರೂಪಿಸಿದರು. ಎಂ.ಜಿ. ದೇಶಪಾಂಡೆ ಅವರು ರಚಿಸಿದ ಕವನಕ್ಕೆ ಯೋಗೇಶ ಮಠದ ಅವರು ಚಿತ್ರ ಬಿಡಿಸಿದರು. ಶಿವಕುಮಾರ ಪಾಂಚಾಳ ಗಾಯನ ಮಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next