ಮಣಿಪಾಲ: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ಕೂಗು ಜೋರಾಗಿ ಕೇಳಿಬರುತ್ತಿರುವುದರಿಂದ ಪ್ರಕರಣದ ಸಮಗ್ರ ತನಿಖೆಯಾಗಬೇಕಾದ ತುರ್ತು ಅವಶ್ಯಕತೆಯಿದೆಯೇ ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.
ಕೃಷ್ಣ ಜೋಶಿ: ಒಂದು ವಾರದ ನಂತರ ಎಲ್ಲರೂ ಈ ವಿಷಯ ಮರೆತು ಬೇರೆ ವಿಷ್ಯದ ಬಗ್ಗೆ ಚರ್ಚಿಸುತ್ತಾರೆ ಜನ. ನಮ್ಮ ದೇಶದ ತನಿಖೆಗಳ ಗುಣ ಮಟ್ಟ ಹಾಗಿದೆ
ದಯಾನಂದ ಕೊಯಿಲಾ: ಥೂ. ಸ್ಯಾಂಡಲ್ ವುಡ್ ಏನು ಮಹಾ. ನಮ್ಮೂರ ಗೂಡಂಗಡಿ ವರೆಗೂ ಈ ಧಂದೆ ಹಬ್ಬಿರುವಾಗ ಈ ನಮ್ಮ ಪೋಲೀಸ್ ಇಲಾಖೆ ಗೃಹ ಖಾತೆ ಅಧಿಕಾರಿಗಳಿಗೆ ಇದ್ರಿಂದ ಎಷ್ಟು ಲಾಭ ಬೇಡ?
ಮನು ಎಸ್: ಹೌದು. ಇದರಿಂದ ಯಾರು ತಪ್ಪು ಯಾರು ಸರಿ ಎಂಬ ಉತ್ತರ ಸಿಗಬಹುದು. ಆದರೆ ತನಿಖೆ ನ್ಯಾಯಯುತವಾಗಿ ನಡೆಯುವ ಅವಶ್ಯಕತೆ ಸಹ ಇದೆ.
ಯೋಗೇಶ್ :ಶಿಕ್ಷೆ ಕೊಡಿಸು/ಕೊಡುವಂತಿದ್ದರೆ ಮಾತ್ರ ತನಿಖೆ ಮಾಡಿಸಿ. ಸುಮ್ಮನೆ ನಾಟಕವಾಡಿ ಯಾರದ್ದೂ ತಪ್ಪಿಲ್ಲ ಎಂದು ತಿಪ್ಪೇ ಸಾರಿಸುವಂತಿದ್ದರೆ ಬೇಡ. ಸರ್ಕಾರದ ಹಣ, ನಮ್ಮ ಸಮಯ ಎರಡೂ ದಂಡ. ಯಾರ್ಯಾರ ಬಂಡವಾಳ, ಯೋಗ್ಯತೆ ಏನು ಎಂದು ತನಿಖೆ ಇಲ್ಲದೇ ಎಲ್ಲರಿಗೂ ಗೊತ್ತು. ಇದೊಂದು ವಿಷವರ್ತುಲ. ಬಲಾಢ್ಯರು – ಐಎಎಸ್, ಐಪಿಎಸ್ ಮತ್ತಿತರ ಹಿರಿಯ ಅಧಿಕಾರಿಗಳು, ರಾಜಕಾರಣಿಗಳು, ಉದ್ಯಮಿಗಳು ಮತ್ತಿತರರು ಸೇರಿ ಪಬ್, ಬಾರ್ ಗಳನ್ನು ನಡೆಸುತ್ತಿದ್ದಾರೆ. ಮಈ ಸ್ಥಳಗಳಲ್ಲಿ ಮೇಲ್ಕಂಡವರ ಕ್ರಪಾಕಟಾಕ್ಷದಲ್ಲಿಯೇ ಅಲ್ಲಿಗೆ ಬರುವವರಿಗೆ ಸರ್ವಸ್ವವೂ ನಿರಾತಂಕವಾಗಿ, ಸುಲಭವಾಗಿ ಮತ್ತು ಮನಸೋಇಚ್ಛೆ ಸಿಗುತ್ತದೆ.