Advertisement

ತಂತ್ರಾಂಶ ಬದಲಿಸಲು 3 ತಿಂಗಳು ಬೇಕೇ?

12:56 PM Jan 11, 2018 | |

ಯಲಹಂಕ: ಭೂಮಿಯ ದಾಖಲೆಗಳನ್ನು ತಿದ್ದು ಪಡಿ ಮಾಡುವುದೂ ಸೇರಿದಂತೆ ವಿವಿಧ ಕಾರಣ ಗಳಿಂದ ಸಲ್ಲಿಸಿದ ಅರ್ಜಿಗಳು ವಿಲೇವಾರಿ ಯಾಗದ ಕಾರಣ ಬೇಸತ್ತ ರೈತರು ಭೂದಾಖಲೆ ವಿಭಾಗದ ಕಚೇರಿ ಎದುರು ಬುಧವಾರ ದಿಢೀರ್‌ ಧರಣಿ ನಡೆಸಿದರು.

Advertisement

ಮಿನಿ ವಿಧಾನಸೌಧದಲ್ಲಿರುವ ಕಂದಾಯ ಇಲಾಖೆಯ ಭೂಮಿ ವಿಭಾಗದಲ್ಲಿ ಕಳೆದ ಮೂರು ತಿಂಗಳಿನಿಂದ ವಿವಿಧ ಉದ್ದೇಶಗಳಿಂದ ಸಲ್ಲಿಸಿದ್ದ ಅರ್ಜಿಗಳು ಈವರೆಗೂ ವಿಲೇವಾರಿಯಾಗಿಲ್ಲ. ಕಂಪ್ಯೂಟರ್‌ ತಂತ್ರಾಂಶ ಬದಲಾವಣೆ ಮಾಡ ಲಾಗುತ್ತಿದೆ ಎಂಬ ನೆಪ ಹೇಳಿ ಅಲೆಸುತ್ತಿದ್ದಾರೆ.

ತಂತ್ರಾಂಶ ಬದಲಿಸಲು ಮೂರು ತಿಂಗಳು ಬೇಕೇ? ಎಂದು ಪ್ರಶ್ನಿಸಿದ ಪ್ರತಿಭಟನಾನಿರತ ರೈತರು, ಅರ್ಜಿ ವಿಲೇವಾರಿಯಾಗದ ಕಾರಣ ಹಲವು ಕೆಲಸ ಕಾರ್ಯಗಳಿಗೆ ತೊಡಕಾಗಿದೆ. ಸಮಸ್ಯೆ ಪರಿಹರಿಸು ವವರೆಗೂ ಧರಣಿ ನಿಲ್ಲಿಸುವುದಿಲ್ಲ ಎಂದು ಕಚೇರಿ ಬಾಗಿಲಲ್ಲೇ ಕುಳಿತರು.

ಈ ವೇಳೆ ಮಾತನಾಡಿದ ರೈತ ವೀರಭದ್ರೇಗೌಡ, ತಾಲೂಕಿನಲ್ಲಿ ಜಮೀನು ಖರೀದಿ, ಮಾರಾಟ ಪಾಲು ವಿಭಾಗ, ಪವತಿ ವಿರಾಸತ್‌, ಪಹಣಿ ತಿದ್ದುಪಡಿ, ಸೇರಿ ವಿವಿಧ ಕಾರ್ಯಗಳಿಗಾಗಿ ಸಲ್ಲಿಸಿದ ಅರ್ಜಿಗಳ ವಿಲೇವಾರಿ ಕಾರ್ಯ ಕಳೆದ ಮೂರು ತಿಂಗಳಿನಿಂದ ವಿಳಂಬವಾಗುತ್ತಿದೆ. ಕೇಳಿದರೆ ಕಂಪ್ಯೂಟರ್‌ ತಂತ್ರಾಂಶ ಬದಲಾವಣೆ ಮಾಡುತ್ತಿದ್ದೇವೆ.
ನಾಳೆ ಬನ್ನಿ, ನಾಡಿದ್ದು ಬನ್ನಿ ಎಂದು ಅಲೆದಾಡಿಸುತ್ತಿದ್ದಾರೆ. ಹೀಗಾಗಿ ಕೋರ್ಟು, ಕಚೇರಿಗಳಿಗೆ ದಾಖಲೆ ನೀಡಲಾಗುತ್ತಿಲ್ಲ ಎಂದು ದೂರಿದರು.

“ಕಚೇರಿಗೆ ಬರುವ ಸಾರ್ವಜನಿಕರಿಗೆ ಇಲ್ಲಿನ ಸಿಬ್ಬಂದಿ, ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡುವುದಿಲ್ಲ. ನಮ್ಮ ಸಮಸ್ಯೆಗಳ ಬಗ್ಗೆ ಯಾರ ಬಳಿ ಹೇಳಿಕೊಳ್ಳಬೇಕು ಎಂದೇ ತಿಳಿಯುವುದಿಲ್ಲ. ತಹಶೀಲ್ದಾರ್‌ಗೆ ಹೇಳ್ಳೋಣವೆಂದು ಹೋದರೆ ಅವರು ಕಚೇರಿಯಲ್ಲಿಲ್ಲ ಎಂದು ಹೇಳುತ್ತಾರೆ.

Advertisement

ರೆಕಾರ್ಡ್‌ ವಿಭಾಗಕ್ಕೆ ಅರ್ಜಿ ಸಲ್ಲಿಸಿ ತಿಂಗಳುಗಳು ಕಳೆದರೂ ದಾಖಲೆ ನೀಡುವುದಿಲ್ಲ. ಈ ಬಗ್ಗೆ ಅಧಿಕಾರಿಗಳು ಕೂಡಲೇ ಕ್ರಮ ತೆಗೆದುಕೊಳ್ಳ ಬೇಕು,’ ಎಂದು ಅರ್ಜಿದಾರ ನಾಗೇಂದ್ರಪ್ಪ ಎಂಬುವವರು ದೂರಿದರು.

ಸ್ಥಳಕ್ಕೆ ಬಂದ ವಿಶೇಷ ತಹಸೀಲ್ದಾರ್‌ ಅನಿಲ್‌, “17 ವರ್ಷಗಳ ನಂತರ ಕಂದಾಯ ಇಲಾಖೆಯಲ್ಲಿ ತಂತ್ರಾಂಶ ಬದಲಾವಣೆ ನಡೆಯುತ್ತಿದ್ದು, ಇದರಿಂದ ತೊಂದರೆಯಾಗಿದೆ. ಬಹುತೇಕ ಕಾರ್ಯಮುಗಿದಿದ್ದು, ಎರಡು ದಿನ ಕಾಲಾವಕಾಶ ನೀಡಿ,’ ಎಂದರು. ರೈತರು ಪ್ರತಿಭಟನೆ ಹಿಂಪಡೆದು ಕಚೇರಿ ಕೆಲಸಗಳಿಗೆ ಅನುವು ಮಾಡಿಕೊಟ್ಟರು. 

Advertisement

Udayavani is now on Telegram. Click here to join our channel and stay updated with the latest news.

Next