Advertisement

ಫೆ.14 ರಂದು “ನೀ ಇದ್ದರೆ’ಮ್ಯೂಸಿಕ್‌ ವಿಡಿಯೊ ಬಿಡುಗಡೆ

06:33 AM Feb 10, 2019 | Team Udayavani |

ಬೆಂಗಳೂರು: ಪ್ರೇಮಿಗಳ ದಿನಾಚರಣೆ ಅಂಗವಾಗಿ ಫೆ.14 ರಂದು ಕನ್ನಡದ ಪಾಪ್‌ ಗಾಯಕ ಆದಿತ್ಯಾ ವಿನೋದ್‌ ಅವರು ಸಂಗೀತ ಸಂಯೋಜನೆ ಜತಗೆ ಗಾಯನ ನೀಡಿರುವ “ನೀ ಇದ್ದರೆ’ ಮ್ಯೂಸಿಕ್‌ ವಿಡಿಯೋ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಲಿದೆ.

Advertisement

ಆದಿತ್ಯಾ ವಿನೋದ್‌ ಜತಗೆ ನಟಿ ಕ್ರಿಷ್‌ ಈ ಅಲ್ಬಂನಲ್ಲಿ ನಟಿಸಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಗೀತ ಸಂಯೋಜಕ ಆದಿತ್ಯಾ ವಿನೋದ್‌, ಪ್ರೇಮಿಗಳಿಗಾಗಿಯೇ ಈ  ಅಲ್ಬಂ ಅನ್ನು ಸಿದ್ಧಪಡಿಸಲಾಗಿದ್ದು, ನಂದಿಬೆಟ್ಟದಲ್ಲಿ ಈ ಹಾಡಿನ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ.

ಎಲ್ಲ ಹಾಡುಗಳು ವಿಷಯಾಧರಿತ ಮತ್ತು ಸಂದೇಶಾತ್ಮಕವಾಗಿವೆ ಎಂದು ಹೇಳಿದರು. ನಟಿ ಕ್ರಿಷ್‌ ಮಾತನಾಡಿ, ಇದೇ ಮೊದಲ ಬಾರಿಗೆ ಅಲ್ಬಂನಲ್ಲಿ ನಟಿಸಿದ್ದೇನೆ. ಕೌಬಾಯ್‌ ವಿಷಯ ಆಧಾರಿತ ಅಲ್ಬಂ ಇದಾಗಿದ್ದು ನಂದಿಬೆಟ್ಟದ ಸುತ್ತ-ಮುತ್ತ ಚಿತ್ರೀಕರಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next