Advertisement

ವಯರ್‌ಲೆಸ್‌ ಯುಗದಲ್ಲಿ ನೆಕ್‌ಬ್ಯಾಂಡ್‌

09:07 PM Feb 13, 2020 | Sriram |

ಹಿಂದೆ ಒಂದು ಕಾಲ ಇತ್ತು ಫೋನ್‌ ಹತ್ತಿರದಲ್ಲೇ ಸಂಗೀತವನ್ನು ಕುಳಿತು ಕೇಳುವುದು. ಬಳಿಕ ಕ್ರಮೇಣವಾಗಿ ಇಯರ್‌ಸಸಫೋನ್‌ಗಳು ಮಾರುಕಟ್ಟೆಗೆ ಬಂದವು. ಫೋನ್‌ನ್ನು ಅದಕ್ಕೆ ಕನೆಕ್ಟ್ ಮಾಡಿ ಕಿವಿಗೆ ಬಡ್ಸ್‌ನ್ನು ತುರುಕಿಸಿ ಹಾಡು ಕೇಳಬೇಕಿತ್ತು. ಈಗ ಅವೆಲ್ಲವನ್ನು ಮರೆಗೆ ಸರಿಸಿ ವಯರ್‌ಲೆಸ್‌ ಬ್ಲೂಟೂತ್‌ ಇಯರ್‌ ಫೋನ್‌ಗಳು ಮಾರುಕಟ್ಟೆಗೆ ಲಗ್ಗೆಇಟ್ಟಿವೆ.ನೆಕ್‌ಬ್ಯಾಂಡ್‌ ಬಳಸಿ, ಸಂಗೀತ, ಕರೆಗಳಿಗೆ ಕಿವಿಯಾಗುವುದು ಮಾಮೂಲಿಯಾಗಿದೆ. ಕೆಲಸ ಮಾಡುವ ಕಚೇರಿಗಳಲ್ಲಿ, ಮೆಟ್ರೋ ಸ್ಟೇಶನ್‌ಗಳಲ್ಲಿ ಯುವಕರು ಇಂತಹ ಟ್ರೆಂಡ್‌ಗಳನ್ನು ಕಾಣಬಹುದಾಗಿದೆ.

Advertisement

ಕುತ್ತಿಗೆಗೆ ಹಾಕಿಕೊಳ್ಳುವಂಥ ವಿನ್ಯಾಸದ ನೆಕ್‌ ಬ್ಯಾಂಡ್‌ಗಳು ಗಮನ ಸೆಳೆಯುತ್ತಿವೆ. ಈ ಬೇಡಿಕೆಯನ್ನು ಮನಗಂಡು ಬಹುತೇಕ ಇಯರ್‌ಫೋನ್‌ ತಯಾರಿಕ ಸಂಸ್ಥೆಗಳು ಆಕರ್ಷಕ ನೆಕ್‌ಬ್ಯಾಂಡ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ವನ್‌ಪ್ಲಸ್‌, ರಿಯಲ್‌ ಮೀ, ರೆಡ್‌ಮೀ, ಸ್ಯಾಮ್‌ಸಂಗ್‌, ಜೆಬ್ರಾನಿಕ್ಸ್‌, ಬೋಟ್‌, ಜೆಬಿಎಲ್‌, ಬೀಟ್ಸ್‌ , ಎಲ್‌ಜಿ ಮೊದಲಾದ ಸಂಸ್ಥೆಗಳು ನೆಕ್‌ಬ್ಯಾಂಡ್‌ ಅನ್ನು ಮಾರುಕಟ್ಟೆಗಿಳಿಸಿವೆ. ಬೇರೆ ಇಯರ್‌ಫೋನ್‌ಗಳಿಗೆ ಹೋಲಿಸಿದರೆ, ತೀರಾ ಕಡಿಮೆ ದರದಲ್ಲಿ ದೊರೆಯುತ್ತದೆ. ಹಗುರ ತೂಕದ, ಬ್ಲೂಟೂತ್‌ ಮೂಲಕ ಮೊಬೈಲ್‌ ಫೋನ್‌ ಸಂಪರ್ಕಿಸಿ ಹಾಡುಗಳನ್ನು ಆನಂದಿಸಲು, ಮೊಬೈಲ್‌ ಫೋನ್‌ ಕರೆ ಮಾಡಲು ಮತ್ತು ಕರೆ ಸ್ವೀಕರಿಸಲು ಬಳಸಬಹುದಾಗಿದೆ.

ಆನ್‌ ಆಫ್
ರಿಯಲ್‌ ಮೀ ಮತ್ತು ಒನ್‌ಪ್ಲಸ್‌ನಂತಹ ನೆಕ್‌ಬ್ಯಾಂಡ್‌ಗಳಲ್ಲಿ ಪವರ್‌ ಆನ್‌-ಆಪ್‌ ಬಟನ್‌ಗಳಿಲ್ಲ. ಅದರ ಬದಲು ಇಯರ್‌ ಬಡ್ಸ್‌ನಲ್ಲಿ ಅವುಗಳನ್ನು ನಿಯಂತ್ರಿಸಬಹುದಾಗಿದೆ. ಎರಡು ಬಡ್‌ಗಳು ಅಂಟಿಕೊಂಡರೆ ಆಫ್ ಆಗಲಿದ್ದು, ಬೇರ್ಪಟ್ಟರೆ ಆನ್‌ ಆಗಲಿವೆ. ಧ್ವನಿ ಔಟ್‌ಫ‌ುಟ್‌ ಕೂಡ ಚೆನ್ನಾಗಿದೆ. ವಾಲ್ಯುಮ್‌ಗಳನ್ನು ಮತ್ತು ಹಾಡುಗಳನ್ನು ಬಟನ್‌ಗಳಲ್ಲಿಯೂ ನಿರ್ವಹಿಸಬಹುದಾಗಿದೆ. ಇಂದು ಎಂಎನ್‌ಸಿ ಕಂಪೆನಿಗಳಲ್ಲಿ ಕೆಲಸ ಮಾಡುವವರು ಇಂತಹ ಹೆಡ್‌ಫೋನ್‌ಗಳನ್ನು ಧರಿಸುವುದು ಟ್ರೆಂಡ್‌ ಆಗಿವೆ.

ಇದು ಎರಡೆರಡು ಸ್ಮಾರ್ಟ್‌ಫೋನ್‌ಗಳನ್ನು ಇಟ್ಟುಕೊಳ್ಳುವ ಕಾಲ. ಹೀಗೆ ಒಂದು ಇಯರ್‌ ಫೋನ್‌ಗಳಿಗೆ ಎರಡು ಫೋನ್‌ಗಳನ್ನು ಕನೆಕ್ಟ್ ಮಾಡಬಹುದಾದ ಡ್ಯುಯಲ್‌ ಪೇರಿಂಗ್‌ಯೂ ಇದೆ. ಕೃತಕ ಬುದ್ಧಿಮತ್ತೆ (ಆರ್ಟಿಫಿಯಲ್‌ ಇಂಟಲಿಜೆನ್ಸಿ) ತಂತ್ರಜ್ಞಾನವನ್ನು ಬೆಂಬಲಿಸುವ ಡಿಜಿಟಲ್‌ ವಾಯ್ಸ… ಅಸಿಸ್ಟೆಂಟ್‌ ಕೂಡ ಚೆನ್ನಾಗಿ ಕೆಲಸ ಮಾಡುತ್ತದೆ. ಗೂಗಲ್‌ ಅಸಿಸ್ಟೆಂಟ್‌, ಅಮೆಜಾನ್‌ ಅಲೆಕ್ಸಾ, ಆ್ಯಪಲ್‌ ಸಿರಿ ಧ್ವನಿ ಸಹಾಯಕವನ್ನೂ ಇವುಗಳು ಬೆಂಬಲಿಸುತ್ತದೆ.

ಅಯಸ್ಕಾಂತೀಯ ಇಯರ್‌ ಫಿಸ್‌ಗಳುನ ಇರುವುದರಿಂದ ನೆಕ್‌ ಬ್ಯಾಂಡ್‌ಗಳು ಹೆಚ್ಚು ಸುರಕ್ಷಿತ ವಾಗಿವೆ. ಕುತ್ತಿಗೆ ಯಿಂದ ಕೆಳಗೆ ಬೀಳುವುದು, ಕಳೆದು ಹೋಗುವುದು ತುಂಬಾ ವಿರಳ. ಬ್ಲೂಟೂತ್‌ 5.0 ಆವೃತ್ತಿಯ ಬೆಂಬಲದೊಂದಿಗೆ, ಹಗುರ ತೂಕವನ್ನು ಇವುಗಳು ಹೊಂದಿರುತ್ತವೆ. ಉತ್ತಮ ಬ್ಯಾಟರಿ ವ್ಯವಸ್ಥೆಯೂ ಇದ್ದು, ಕಡಿಮೆ ಎಂದರೆ ಒಮ್ಮೆ ಚಾರ್ಜ್‌ ಮಾಡಿದ 18 ತಾಸುಗಳು ಬಳಸಬಹುದಾಗಿದೆ. ಸಂಪೂರ್ಣ ಚಾರ್ಜ್‌ ಆಗಲು ಸುಮಾರು 1 ರಿಂದ 2 ಗಂಟೆಗಳು ಬೇಕಾಗುತ್ತದೆ.

Advertisement

- ಕಾರ್ತಿಕ್‌ ಅಮೈ

Advertisement

Udayavani is now on Telegram. Click here to join our channel and stay updated with the latest news.

Next