Advertisement

ಜಾನುವಾರು ಜಾತ್ರೆಗೆ ಅಗತ್ಯ ಸೌಲಭ್ಯ

12:52 PM Jan 14, 2020 | Suhan S |

ವಿಜಯಪುರ: ಸಿದ್ಧೇಶ್ವರ ಜಾತ್ರೆ ನಿಮಿತ್ತ ತೊರವಿ ಬಳಿ ಇರುವ ನಮ್ಮ ಎಪಿಎಂಸಿ ಆವರಣದಲ್ಲಿ ಬೃಹತ್‌ ಜಾನುವಾರು ಜಾತ್ರೆ ನಡೆಯುತ್ತಿದೆ. ಜಾನುವಾರು ಜಾತ್ರೆಯಲ್ಲಿ ಪಾಲ್ಗೊಂಡ ಜಾನುವಾರುಗಳು ಹಾಗೂ ಅವುಗಳ ಮಾಲೀಕರಿಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ನಮ್ಮ ಸಮಿತಿಯಿಂದ ಕೈಗೊಳ್ಳಲಾಗಿದೆ. ಜೊತೆಗೆ ರೈತರಿಗೆ ಸರ್ಕಾರ ಅಭಿವೃದ್ಧಿ ಯೋಜನೆಗಳ ಮಾಹಿತಿ ನೀಡಲು ಪ್ರದರ್ಶನಕ್ಕೂ ವ್ಯವಸ್ಥೆ ಮಾಡಲಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ಸುರೇಶಗೌಡ ಬಿರಾದಾರ ಹೇಳಿದರು.

Advertisement

ಸೋಮವಾರ ವಿಜಯಪುರ ಸಮೀಪದ ತೊರವಿ ಗ್ರಾಮದಲ್ಲಿ ಸಿದ್ದೇಶ್ವರ ಸಂಕ್ರಮಣ ಜಾತ್ರಾ ಮಹೋತ್ಸವ ನಿಮಿತ್ತ ಜ. 13ರಿಂದ 16ರವರೆಗೆ ನಡೆಯುವ ಜಾನುವಾರು ಜಾತ್ರೆ ಹಾಗೂ ವಾರ್ತಾ ಇಲಾಖೆ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸರ್ಕಾರ ಕೃಷಿ ಹಾಗೂ ಕೃಷಿಗೆ ಪೂರಕವಾಗಿ ಕೈಗೊಂಡಿರುವ ಕಾರ್ಯಕ್ರಮಗಳ ಕುರಿತು ಜನರಿಗೆ ಮಾಹಿತಿ ನೀಡಲು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಸರ್ಕಾರದ ಸಾಧನೆಗಳು ಮತ್ತು ನೆರೆ ಹಾವಳಿ ಸಂದರ್ಭದಲ್ಲಿ ಸರ್ಕಾರ ಕೈಗೊಂಡ ಕ್ರಮಗಳ ಮಾಹಿತಿ ನೀಡಲಾಗುತ್ತಿದ್ದು ರೈತರು ಇದರ ಸದುಪಯೋಗ ಪಡೆಯಬೇಕು ಎಂದರು.

ಸರ್ಕಾರ ಅಭಿವೃದ್ಧಿ ವಿಷಯವಾಗಿ ಹಲವು ಯೋಜನೆಗಳಿಗೆ ಆದ್ಯತೆ ನೀಡಿದೆ. ಪ್ರವಾಹ ಸಂತ್ರಸ್ತರ ನೋವಿಗೆ ಸ್ಪಂದಿಸಿರುವ ಸರ್ಕಾರ, ಸಂತ್ರಸ್ತರ ಕಣ್ಣೀರು ಒರೆಸಿದೆ. ಈ ಕುರಿತು ಛಾಯಾಚಿತ್ರ ಮತ್ತು ಎಲ್‌ಇಡಿ ಮೂಲಕ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದೆ. ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌, ಕಾರ್ಮಿಕ ಇಲಾಖೆ, ವಸತಿ ಇಲಾಖೆ, ಕೈಗಾರಿಕೆ, ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಕಲ್ಯಾಣ ಪರ್ವಕ್ಕೆ ಚಾಲನೆ, ಮೀನುಗಾರರ- ನೇಕಾರರ ಸಾಲಮನ್ನಾ, ಐಟಿಬಿಟಿ ಅಭಿವೃದ್ಧಿ ಆವಿಷ್ಕಾರ ಪ್ರಾಧಿಕಾರ, ಮಾಹಿತಿ ತಂತ್ರಜ್ಞಾನ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತ ಛಾಯಾಚಿತ್ರಗಳು ಪ್ರದರ್ಶನ ವೀಕ್ಷಿಸುವಂತೆ ಮನವಿ ಮಾಡಿದರು.

ಸರ್ಕಾರದ ಸಾಧನೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತಹ ಅಪರೂಪದ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಛಾಯಾಚಿತ್ರ ಪ್ರದರ್ಶನ ವೀಕ್ಷಿಸಿ ಸದುಪಯೋಗ ಪಡೆಯುವಂತೆ ಉಪಾಧ್ಯಕ್ಷ ಸುರೇಶ ತಳವಾರ ಕೋರಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯರಾದ ಎಚ್‌. ಎಸ್‌. ಲೋಕೂರೆ, ಪೀರಗೊಂಡ ಗದ್ಯಾಳ, ವಿಜಯಕುಮಾರ ಮಂಗಳವೆಡೆ, ಸಹಾಯಕ ನಿರ್ದೇಶಕ ಛಬನೂರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಸುಲೆಮಾನ್‌ ನದಾಫ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next