ಶಿರಸಿ: ಯಕ್ಷಗಾನದ ಮೇರು ಭಾಗವತರಾಗಿದ್ದ ದಿ.ನಾರಾಯಣ ಭಾಗವತ ಅವರ ನೆನಪಿನ ನೆಬ್ಬೂರು ನಾರಾಯಣ ಭಾಗವತ ಪ್ರತಿಷ್ಠಾನ ನೀಡುವ ನೆಬ್ಬೂರು ನಾರಾಯಣ ಭಾಗವತ ಪ್ರಥಮ ಪ್ರಶಸ್ತಿಯನ್ನು ಪ್ರಸಿದ್ಧ ಭಾಗವತ ಕೇಶವ ಹೆಗಡೆ ಕೊಳಗಿ ಅವರಿಗೆ ಪ್ರಕಟಿಸಲಾಗಿದೆ.
ಕಳೆದ ನಾಲ್ಕು ವರೆದಶಕಗಳಿಗೂ ಅಧಿಕ ವರ್ಷದಿಂದ ಯಕ್ಷಗಾನದ ಭಾಗವತರಾಗಿ ಸೇವೆ ಸಲ್ಲಿಸುತ್ತಿರುವ ಕೊಳಗಿ ಅವರಿಗೆ ಈ ಪ್ರಶಸ್ತಿ ಪ್ರಕಟಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಜಿ.ಎನ್.ಹೆಗಡೆ ಹಾವಳಿಮನೆ ತಿಳಿಸಿದ್ದಾರೆ.
ಪ್ರಶಸ್ತಿಯನ್ನು ಜ.29 ರಂದು ಸಂಜೆ 4 ಕ್ಕೆ ತಾಲೂಕಿನ ಸಂಪಖಂಡ ಪ್ರೌಢಶಾಲೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಅತಿಥಿಗಳಾಗಿ ಯಕ್ಷಗಾನ ವಿದ್ವಾಂಸ ಡಾ.ಜಿ.ಎಲ್.ಹೆಗಡೆ, ಆರ್.ಜಿ.ಭಟ್ಟ ವರ್ಗಾಸರ, ಡಾ. ದಿನೇಶ ಹೆಗಡೆ, ವಿನಾಯಕ ಭಾಗ್ವತ್ ಹಣಗಾರ ಪಾಲ್ಗೊಳ್ಳುವರು.
ಕಾಶ್ಯಪ ಪರ್ಣಕುಟಿ ಅಭಿನಂದನಾ ನುಡಿಯಾಡಲಿದ್ದಾರೆ. ಇದೇ ವೇಳೆ ಎಂ.ಆರ್.ಹೆಗಡೆ ಕಾನಗೋಡ, ಗಣಪತಿ ಭಟ್ಟ ಓಣಿ ವಿಘ್ನೇಶ್ವರ ಅವರನ್ನು ಗೌರವಿಸಲಾಗುತ್ತಿದೆ. ಬಳಿಕ ಯಕ್ಷ ಸೌರಭ ತಂಡದಿಂದ ಸುಧನ್ವಾರ್ಜುನ ಹಾಗೂ ನಿರಂಜನ ಜಾಗನಳ್ಳಿ ತಂಡದಿಂದ ಯಕ್ಷಗಾನ ನಡೆಯಲಿದೆ ಎಂದು ಟ್ರಸ್ಟ್ ನ ಸುಬ್ರಹ್ಮಣ್ಯ ಹೆಗಡೆ ಸುತ್ಮನೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.