Advertisement

ನೀಟ್‌ ರದ್ದಿಲ್ಲ; ಶೀಘ್ರ ಸಿಬಿಎಸ್‌ಇ ವೇಳಾಪಟ್ಟಿ; ವಿದ್ಯಾರ್ಥಿಗಳಿಗೆ ನಿಶಾಂಕ್‌ ಭರವಸೆ

01:20 AM Dec 11, 2020 | mahesh |

ಹೊಸದಿಲ್ಲಿ/ಚಂಡೀಗಢ‌: ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಿರುವ “ನೀಟ್‌- 2021′ ಪರೀಕ್ಷೆಯನ್ನು ರದ್ದು ಮಾಡುವ ಯೋಚನೆ ಕೇಂದ್ರ ಸರಕಾರದ ಮುಂದಿಲ್ಲ. ಜೆಇಇ ಮುಖ್ಯ ಪರೀಕ್ಷೆಯನ್ನು ಹಲವು ಹಂತಗಳಲ್ಲಿ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ಸ್ಪಷ್ಟಪಡಿಸಿದ್ದಾರೆ.

Advertisement

ಸಿಬಿಎಸ್‌ಇ, ಜೆಇಇ, ನೀಟ್‌ ಸಂಬಂ ಧಿತ ವಿದ್ಯಾರ್ಥಿಗಳ “ವೆಬಿನಾರ್‌’ನಲ್ಲಿ ಮಾತನಾಡಿದ ನಿಶಾಂಕ್‌ “ಜೆಇಇ ಮುಖ್ಯ ಪರೀಕ್ಷೆಯನ್ನು ಎರಡಕ್ಕಿಂತ ಹೆಚ್ಚು ಅವಧಿ ಯಲ್ಲಿ ನಡೆಸುವ ಬಗ್ಗೆ ಚಿಂತಿಸಲಾಗುತ್ತಿದೆ. ಅದು ಅದು 3 ಅಥವಾ 4 ಹಂತಗಳಿಗೂ ವಿಸ್ತರಣೆಯಾಗಬಹುದು’ ಎಂದಿದ್ದಾರೆ.

ಸಿಬಿಎಸ್‌ಇ ಪರೀ ಕ್ಷೆ: “ಸಿಬಿಎಸ್‌ಇ ಮಂಡಳಿ ಪರೀಕ್ಷೆ ದಿನಾಂಕ ಪ್ರತಿ ವರ್ಷ ನವೆಂಬರ್‌, ಡಿಸೆಂಬರ್‌ನಲ್ಲಿ ಪ್ರಕಟ ವಾಗುತ್ತಿತ್ತು. ಆದರೆ ಇದುವರೆಗೂ ಘೋಷಣೆಯಾಗಿಲ್ಲ. ಪ್ರಸ್ತುತ ಸನ್ನಿವೇಶ ವನ್ನು ಗಮನದಲ್ಲಿಟ್ಟುಕೊಂಡು, ಶೀಘ್ರವೇ ಸಿಬಿಎಸ್‌ಇ ಪರೀಕ್ಷಾ ದಿನಾಂಕ ಪ್ರಕಟಿಸ ಲಿದೆ. ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಿ’ ಎಂದು ಸಲಹೆ ನೀಡಿದರು.

ಪ್ರ್ಯಾಕ್ಟಿಕಲ್‌ ಇರಲಿದೆ: ಸಿಬಿಎಸ್‌ಇ ಪ್ರಾಯೋಗಿಕ ಪರೀಕ್ಷೆಗಳು ಸಂಬಂಧ ಪಟ್ಟ ಶಾಲೆಗಳು ಕೋವಿಡ್‌ ಮಾರ್ಗ ಸೂಚಿ ಅಡಿಯಲ್ಲಿ ಸಂಘಟಿಸಲಿವೆ. ಪರಿಷ್ಕೃತ ಪಠ್ಯ ಕ್ರಮ ಕುರಿತ ಮಾಹಿತಿ ತಿಳಿಯಲು cಚಿsಛಿ.nಜಿc.ಜಿn ವೆಬ್‌ಸೈಟ್‌ಗೆ ಭೇಟಿ ನೀಡಲು ಸೂಚಿಸಿದ್ದಾರೆ.

14ರಿಂದ ಹರಿಯಾಣದಲ್ಲಿ ಶಾಲೆಗಳು ಶುರು
ಹರ್ಯಾಣ ಸರಕಾರ ಡಿ.14ರಿಂದ ಹಂತಹಂತವಾಗಿ ಶಾಲೆಗಳನ್ನು ತೆರೆಯಲು ಆದೇಶ ಹೊರಡಿಸಿದೆ. ಡಿ.14ರಿಂದ 10 ಮತ್ತು 12ನೇ ತರಗತಿ, ಡಿ.21ರಿಂದ 9 ಮತ್ತು 11ನೇ ತರಗತಿಗಳನ್ನು ತೆರೆಯಲು ತೀರ್ಮಾನಿಸಲಾಗಿದೆ. ಎಲ್ಲ ಸರಕಾರಿ ಮತ್ತು ಖಾಸಗಿ ಶಾಲೆಗಳು ಬೆ.10- ಮ.1ರ ವರೆಗೆ 3 ಗಂಟೆ ಮಾತ್ರವೇ ತರಗತಿ ಗಳನ್ನು ನಡೆಸಬೇಕು ಎಂದೂ ಸೂಚಿಸಿದೆ. ಶಾಲೆ ಪ್ರವೇಶಕ್ಕೂ ಮುನ್ನ 72 ಗಂಟೆಗಳ ಅವಧಿಯಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕರು ಕೊರೊನಾ ಪರೀಕ್ಷೆ ಮಾಡಿಸಿಕೊಂಡು, ಕಡ್ಡಾಯವಾಗಿ ವರದಿಗಳನ್ನು ತರಬೇಕು. ಶಾಲಾವರಣದಲ್ಲಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್‌ಗಳನ್ನೂ ಜತೆಗಿಟ್ಟುಕೊಂಡಿರಬೇಕು ಎಂದು ಆದೇಶಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next