Advertisement

ಪ್ರತಿ ಜಡ್ಜ್ ಬಳಿ 4,500 ಕೇಸ್‌

12:45 AM Jan 28, 2019 | |

ಹೊಸದಿಲ್ಲಿ: ಕೋರ್ಟ್‌ಗಳಲ್ಲಿ ಕೇಸ್‌ಗಳು ತ್ವರಿತ ವಿಲೇವಾರಿಯಾಗುವುದಿಲ್ಲ ಎಂಬ ಕೊರಗಿನ ಮಧ್ಯೆಯೇ ಅಚ್ಚರಿಯ ದತ್ತಾಂಶವೊಂದು ಕಾನೂನು ಸಚಿವಾಲಯದಿಂದ ಬಿಡುಗಡೆಯಾಗಿದೆ. 

Advertisement

ದೇಶದ ಹೈಕೋರ್ಟ್‌ನಲ್ಲಿ ಪ್ರತಿ ನ್ಯಾಯಮೂರ್ತಿ ಬಳಿ ಸರಾಸರಿ 4500 ಪ್ರಕರಣಗಳು ಬಾಕಿ ಇವೆ ಎಂದು ಕಾನೂನು ಸಚಿವಾಲಯದ ಅಂಕಿ ಅಂಶಗಳಲ್ಲಿ ಉಲ್ಲೇಖವಾಗಿದೆ.

ಇದೇ ವೇಳೆ ಕೆಳ ಹಂತದ ನ್ಯಾಯಾಲಯದಲ್ಲಿ ಪ್ರತಿ ಜಡ್ಜ್ ಬಳಿ 1300 ಪ್ರಕರಣ ಗಳಿವೆ. ಒಟ್ಟು 24 ಹೈಕೋರ್ಟ್‌ಗಳಲ್ಲಿ 47.68 ಲಕ್ಷ ಪ್ರಕರಣಗಳು ಬಾಕಿ ಇದ್ದು, ಕೆಳ ಹಂತದ ನ್ಯಾಯಾಲಯದಲ್ಲಿ 2.91 ಕೋಟಿ ಪ್ರಕರಣಗಳು ಬಾಕಿ ಇವೆ. ಕೆಳ ಹಂತದ ಕೋರ್ಟ್‌ಗಳಲ್ಲಿ  22,644 ನ್ಯಾಯಾಧೀಶರ ಹುದ್ದೆಗಳಿದ್ದು, ಈ ಪೈಕಿ 5,135 ಹುದ್ದೆಗಳು ಖಾಲಿ ಇವೆ.

Advertisement

Udayavani is now on Telegram. Click here to join our channel and stay updated with the latest news.

Next