ಪೆರಾಗ್ವೆ: ಕಳೆದ ಹತ್ತು ದಿನಗಳಲ್ಲಿ ಪೂರ್ವ ಉರುಗ್ವೆಯ ಕರಾವಳಿ ಪ್ರದೇಶದಲ್ಲಿ ಸುಮಾರು 2,000 ಪೆಂಗ್ವಿನ್ ಗಳು ಸಾವನ್ನಪ್ಪಿದ್ದು, ಅವುಗಳ ದಿಢೀರ್ ಸಾವಿನ ಕಾರಣ ನಿಗೂಢವಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:Karnataka One ಕೇಂದ್ರಕ್ಕೆ ಡಿಸಿಎಂ ದಿಢೀರ್ ಭೇಟಿ:ಗೃಹಲಕ್ಷ್ಮೀ ನೋಂದಣಿ ಪ್ರಕ್ರಿಯೆಪರಿಶೀಲನೆ
ಈ ಮೆಗ್ನೆಲ್ನಾನಿಕ್ ಪೆಂಗ್ವಿನ್ ಗಳು ಬಹುತೇಕ ಮರಿಗಳಾಗಿದ್ದು ಅಟ್ಲಾಂಟಿಕ್ ಸಾಗರದಲ್ಲಿ ಸಾವನ್ನಪ್ಪಿದ್ದು, ಅಲೆಗಳಿಂದಾಗಿ ಉರುಗ್ವೆಯ ಕರಾವಳಿ ತೀರಕ್ಕೆ ತೇಲಿ ಬಂದಿರುವುದಾಗಿ ಫೌನಾ ಪರಿಸರ ಸಚಿವಾಲಯದ ಮುಖ್ಯಸ್ಥೆ ಕ್ರಮೆನ್ ಲೈಝಾಗೋಯೆನ್ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಪೆಂಗ್ವಿನ್ ಗಳ ಸಾವು ಸಮುದ್ರದ ನೀರಿನಲ್ಲೇ ಸಂಭವಿಸಿದೆ. ಶೇ.90ರಷ್ಟು ಅವುಗಳು ಮರಿಗಳಾಗಿದ್ದು, ಆಹಾರ ಕೊರತೆಯನ್ನು ಅನುಭವಿಸಿವೆ. ಈಗಾಗಲೇ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದ್ದು, ಏವಿಯನ್ ಇನ್ ಫ್ಲುಯೆಂಝಾ ಕೂಡಾ ಪತ್ತೆಯಾಗಿಲ್ಲ. ಆ ನಿಟ್ಟಿನಲ್ಲಿ ಪೆಂಗ್ವಿನ್ ಗಳ ಸಾವಿಗೆ ಕಾರಣ ಏನು ಎಂಬುದು ಇನ್ನಷ್ಟೇ ಪತ್ತೆಹಚ್ಚಬೇಕಾಗಿದೆ ಎಂದು ಕ್ರಮೆನ್ ತಿಳಿಸಿದ್ದಾರೆ.
ಮೆಗ್ನೆಲ್ನಾನಿಕ್ ಪೆಂಗ್ವಿನ್ ಗಳು ದಕ್ಷಿಣ ಅರ್ಜೈಂಟೀನಾದಲ್ಲಿ ಗೂಡು ಕಟ್ಟುತ್ತವೆ. ಸಾಮಾನ್ಯವಾಗಿ ಪ್ರತಿ ಹೆಣ್ಣು ಪೆಂಗ್ವಿನ್ ಗಳು ಎರಡು ಮೊಟ್ಟೆಗಳನ್ನು ಇಡುತ್ತವೆ. ಸುಮಾರು 38ರಿಂದ 42 ದಿನಗಳ ಕಾಲಾವಧಿಯಲ್ಲಿ ಕಾವು ಕೊಟ್ಟ ನಂತರ ಮರಿಗಳು ಹೊರಬರುತ್ತವೆ. ಬಳಿಕ ಇವುಗಳು ಆಹಾರ ಮತ್ತು ಬೆಚ್ಚನೆಯ ನೀರನ್ನು ಅರಸಿಕೊಂಡು ಉತ್ತರಕ್ಕೆ ವಲಸೆ ಹೋಗುತ್ತವೆ ಎಂದು ವರದಿ ವಿವರಿಸಿದೆ.
ಪೆಂಗ್ವಿನ್ ಗಳು ಸಾವನ್ನಪ್ಪುವುದು ಸಾಮಾನ್ಯವಾಗಿದೆ. ಆದರೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸಾವನ್ನಪ್ಪಿರುವುದು ಆಘಾತಕಾರಿಯಾಗಿದೆ. ಕಳೆದ ವರ್ಷ ಬ್ರೆಜಿಲ್ ನಲ್ಲಿಯೂ ಕೂಡಾ ನಿಗೂಢ ಕಾರಣಗಳಿಂದಾಗಿ ಸಾವಿರಾರು ಪೆಂಗ್ವಿನ್ ಗಳು ಸಾವನ್ನಪ್ಪಿರುವುದಾಗಿ ಕ್ರಮೆನ್ ತಿಳಿಸಿದ್ದಾರೆ.
1999-2000ನೇ ಇಸವಿಯಿಂದ ಪ್ರಾಣಿ, ಪಕ್ಷಿಗಳು ಆಹಾರ ಕೊರತೆಯನ್ನು ಎದುರಿಸುತ್ತಿರುವುದು ಆರಂಭವಾಗಿರುವುದಾಗಿ ಎನ್ ಜಿಒ ಮುಖ್ಯಸ್ಥ ರಿಚರ್ಡ್ ಟೆಸೋರ್ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.