Advertisement

ಒಂದೇ ದಿನ 28,637 ಜನರಿಗೆ ಸೋಂಕು ದೃಢ: 8.5 ಲಕ್ಷ ಸನಿಹ ತಲುಪಿದ ದೇಶದ ಸೋಂಕಿತರ ಸಂಖ್ಯೆ

02:43 PM Jul 12, 2020 | keerthan |

ಹೊಸದಿಲ್ಲಿ: ದೇಶದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಆತಂಕಕಾರಿ ರೀತಿಯಲ್ಲಿ ಏರಿಕೆ ಕಾಣುತ್ತಿದೆ. ಶನಿವಾರ ಒಂದೇ ದಿನ ದೇಶದಲ್ಲಿ ಕೋವಿಡ್ ಸೋಂಕು ದೃಢಪಟ್ಟವರ ಸಂಖ್ಯೆ 28,637. ಇದು ದೇಶದ ಇದುವರೆಗಿನ ದಾಖಲೆ. ಜುಲೈ ತಿಂಗಳ ಆರಂಭದಿಂದ ದೇಶದಲ್ಲಿ ಸೋಂಕಿತರ ಸಂಖ್ಯೆ ವಿಪರೀತ ಎನ್ನುವಂತೆ ಏರಿಕೆ ಕಾಣುತ್ತಿದೆ. ದೇಶದ ಒಟ್ಟು ಸೋಂಕಿತರ ಸಂಖ್ಯೆ ಸದ್ಯ 8.5 ಲಕ್ಷ ಸನಿಹ ತಲುಪಿದೆ.

Advertisement

ಕಳೆದ 24 ಗಂಟೆಯಲ್ಲಿ ದೇಶದಲ್ಲಿ  28,637 ಜನರಿಗೆ ಸೋಂಕು ತಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಈ ಸಮಯದಲ್ಲಿ 551 ಜನರು ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದಾರೆ. ಸದ್ಯ ದೇಶದ ಒಟ್ಟು ಸೋಂಕಿತರ ಸಂಖ್ಯೆ 849,553ಕ್ಕೆ ಏರಿಕೆಯಾಗಿದೆ.

ಜುಲೈ ತಿಂಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಾಣುತ್ತಿದೆ. ಕಳೆದ ಸತತ ಒಂಬತ್ತು ದಿನಗಳಲ್ಲಿ ದೇಶದಲ್ಲಿ 22 ಸಾವಿರಕ್ಕಿಂತ ಹೆಚ್ಚಿನ ಸೋಂಕಿತರ ಸಂಖ್ಯೆ ದಾಖಲಾಗಿದೆ.  ದೇಶದಲ್ಲಿ ಇದುವರೆಗೆ 534,621 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. 22,674 ಜನ ಸೋಂಕಿತರು ಸಾವನ್ನಪ್ಪಿದ್ದು, ಸದ್ಯ 292,258 ಸಕ್ರಿಯ ಪ್ರಕರಣಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next