Advertisement

ದೂರಸಂಪರ್ಕ ಕ್ರಾಂತಿ : ಇಸ್ರೋದಿಂದ ಜಿ ಸ್ಯಾಟ್‌-17 ಯಶಸ್ವಿ ಉಡಾವಣೆ 

09:40 AM Jun 29, 2017 | |

ಹೊಸದಿಲ್ಲಿ: ಭಾರತದ ಅತ್ಯಾಧುನಿಕ ದೂರಸಂಪರ್ಕ ಉಪಗ್ರಹ ಜಿ ಸ್ಯಾಟ್‌-17 ನ್ನು ಇಸ್ರೋ ಗುರುವಾರ ಫ್ರೆಂಚ್‌ ಗಯಾನಾದ ಕೌರಾವ್‌ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ನಡೆಸಿದೆ. 

Advertisement

ಗುರುವಾರ ನಸುಕಿನ 2.29 ರ ವೇಳೆಗೆ ಫ್ರಾನ್ಸ್‌ ವಿಜ್ಞಾನಿಗಳ ಸಹಭಾಗಿತ್ವದಲ್ಲಿ 3,477 ಕೆಜಿ ತೂಕದ ಉಪಗ್ರಹವನ್ನು ಯಶಸ್ವಿಯಾಗಿ ನಭಕ್ಕೆ ಉಡಾವಣೆ ನಡೆಸಲಾಯಿತು.

ಬಾಹ್ಯಾಕಾಶ ಲೋಕದಲ್ಲಿ ಕ್ರಾಂತಿ ಎಂಬಂತೆ ಇಸ್ರೋ ಜೂನ್‌ ತಿಂಗಳಿನಲ್ಲಿ 3 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಮಹತ್ಸಾಧನೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next