Advertisement
ಆಗಿದ್ದೇನು?: ಈ ವರ್ಷ ಫೆಬ್ರವರಿ 23ರಿಂದ 25ವರೆಗೆ ನ್ಯೂಯಾರ್ಕ್‌ನ ಸರನಾಕ್ ಲೇಕ್ ಎಂಬಲ್ಲಿ ವಿಶ್ವ ಸ್ನೋ ಶೂ ಸ್ಪರ್ಧೆಯಲ್ಲಿ ಭಾಗವಹಿಸಲು ಕಾಶ್ಮೀರದ ತನ್ವೀರ್ ಹುಸೇನ್ ತೆರಳಿದ್ದರು. ಹಿಮಾಚ್ಛಾದಿತ ಸ್ಥಳದಲ್ಲಿ ವೇಗವಾಗಿ ನಡೆಯುವುದು ಸ್ಪರ್ಧೆಯ ಗುರಿ. ಭಾರತದಿಂದ ಈ ಕೂಟದಲ್ಲಿ ಭಾಗವಹಿಸುವ ಏಕೈಕ ಸ್ಪರ್ಧಿಯಾಗಿದ್ದರಿಂದ ತನ್ವೀರ್‌ಗೆ ನ್ಯೂಯಾರ್ಕ್‌ನಲ್ಲಿ ಭಾರೀ ಗೌರವ ಸಿಕ್ಕಿತ್ತು. ಆದರೆ ಫೆ.27ರಂದು ಸೇವಕಿಯಾಗಿ ಬಂದಿದ್ದ 12 ವರ್ಷದ ಬಾಲಕಿಯ ಕೆಲವು ಭಾಗಗಳಿಗೆ ಕೈಹಾಕಿದ್ದು, ಆಕೆಯನ್ನು ಚುಂಬಿಸಿದ ಆರೋಪದಡಿ ಅವರನ್ನು ಬಂಧಿಸಲಾಗಿತ್ತು. ಇದನ್ನು ತನ್ವೀರ್ ನಿರಾಕರಿಸಿ, ತನ್ನ ವಿರುದ್ಧ ಪಿತೂರಿ ಮಾಡಲಾಗಿದೆ, ಅದನ್ನು ಸಾಬೀತು ಮಾಡಿಯೇ ಭಾರತಕ್ಕೆ ಹಿಂತಿರುಗುತ್ತೇನೆಂದಿದ್ದರು.
ತನ್ವೀರ್ ಎಸೆಕ್ಸ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಇದನ್ನು ಗಮನಿಸಿದ ನ್ಯಾಯಾಲಯ ಅವರ ವೀಸಾ ಅವಧಿ ಆಗಸ್ಟ್‌ನಲ್ಲೇ
ಮುಗಿದಿರುವುದರಿಂದ ಭಾರತಕ್ಕೆ ಗಡೀಪಾರು ಮಾಡಲು ತೀರ್ಮಾನಿಸಿದೆ. ಆದರೆ ಇದನ್ನು ಅಲ್ಲಿನ ಸ್ಥಳೀಯ ಪತ್ರಿಕೆಗಳು ಟೀಕಿಸಿವೆ. ಸರಳವಾಗಿ ತನ್ವೀರ್ ರನ್ನು ಭಾರತಕ್ಕೆ ಮರಳಲು ಬಿಡಬಹುದಿತ್ತು. ಗಡೀಪಾರು ಪ್ರಕ್ರಿಯೆಗೆ ಇನ್ನೂ ಒಂದು ತಿಂಗಳು ಬೇಕಾಗುತ್ತದೆ ಎನ್ನುವುದು ಪತ್ರಿಕೆಗಳ ಆಕ್ಷೇಪ. ಇದೆಲ್ಲದರ ನಡುವೆ ತನ್ವೀರ್ ತಾಯಿ ಪ್ರತಿಕ್ರಿಯಿಸಿ, ತನ್ನ ಮಗಳ ಪ್ರಕರಣದಿಂದ ಬೇಸತ್ತು ತಪ್ಪಿತಸ್ಥ ಎಂದು ಒಪ್ಪಿಕೊಳ್ಳಲು ತೀರ್ಮಾನಿಸಿದ್ದಾನೆ. ಆತ ನಿರಪರಾಧಿ ಎಂದು ಸಮರ್ಥಿಸಿಕೊಂಡಿದ್ದಾನೆ.