Advertisement

ಭಾರತ- ನ್ಯೂಜಿಲ್ಯಾಂಡ್ ಮೊದಲ ಏಕದಿನ ಪಂದ್ಯ: ಟಾಸ್ ಗೆದ್ದ ನ್ಯೂಜಿಲ್ಯಾಂಡ್ ಫೀಲ್ಡಿಂಗ್ ಆಯ್ಕೆ

09:22 AM Feb 06, 2020 | Mithun PG |

ಹ್ಯಾಮಿಲ್ಟನ್: ಪ್ರವಾಸಿ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲ ಏಕದಿನ ಪಂದ್ಯ ಇಲ್ಲಿನ ಸೆಡ್ಡನ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿದೆ. ಟಾಸ್ ಗೆದ್ದಿರುವ ನ್ಯೂಜಿಲೆಂಡ್ ನಾಯಕ ಟಾಮ್ ಲೇಥಮ್ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದ್ದಾರೆ.

Advertisement

ಮಯಾಂಕ್, ಪೃಥ್ವಿಗೆ  ಓಪನಿಂಗ್

ಈ ಪಂದ್ಯದಲ್ಲಿ ಮಾಯಾಂಕ್‌ ಅಗರ್ವಾಲ್‌ ಮತ್ತು ಪೃಥ್ವಿ ಶಾ ಭಾರತದ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ. ಈ ಮೂಲಕ ಇಬ್ಬರೂ “ವನ್‌ ಡೇ ಕ್ಯಾಪ್‌’ ಧರಿಸಲಿದ್ದಾರೆ. ಭಾರತದ ಏಕದಿನ ಇತಿಹಾಸದಲ್ಲಿ ಆರಂಭಿಕರಿಬ್ಬರು ಒಟ್ಟಿಗೇ ಪದಾರ್ಪಣೆ ಮಾಡಿದ 4ನೇ ನಿದರ್ಶನ ಇದಾಗಲಿದೆ. ಈ ಮೂಲಕ ಒಂದೇ ಪಂದ್ಯದಲ್ಲಿ ಇಬ್ಬರು ಆರಂಭಿಕರು ಪಾದಾರ್ಪಣೆ ಮಾಡುತ್ತಿರುವ ವಿಶೇಷ ದಾಖಲೆಗೆ ಪಾತ್ರವಾಗಿದ್ದಾರೆ.

ಮನೀಶ್ ಔಟ್,  ಕೇದಾರ್ ಇನ್

ಕರ್ನಾಟಕದ ಮನೀಶ್ ಪಾಂಡೆ , ಇವರ ಜೊತೆಗೆ ರಿಷಬ್ ಪಂತ್, ಶಿವಂ ದುಬೆ, ನವದೀಪ್ ಸೈನಿ ಹಾಗೂ ಯುಜ್ವೇಂದ್ರ ಚಹಲ್ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ. ಈ ನಡುವೆ ಕೇದಾರ್ ಜಾಧವ್ ಆಡುವ ಅವಕಾಶ ಗಿಟ್ಟಿಸಿದ್ದಾರೆ.

Advertisement

ಆಡುವ ಹನ್ನೊಂದರ ಬಳಗ

ನ್ಯೂಜಿಲ್ಯಾಂಡ್: ಮಾರ್ಟಿನ್ ಗಪ್ಟಿಲ್, ಹೆನ್ರಿ ನಿಕೊಲಸ್, ಟಾಮ್ ಲಾಥಮ್ (w/c) ಟಾಮ್ ಬ್ಲಂಡೆಲ್, ರಾಸ್ ಟೇಲರ್ , ಜೇಮ್ಸ್ ನೀಶಮ್, ಕಾಲಿನ್ ಡಿ ಗ್ರ್ಯಾಂಡ್ ಹೋಮ್, ಮಿಚೆಲ್ ಸ್ಯಾಂಟ್ನರ್, ಟೀಮ್ ಸಂಥಿ, ಐಶ್ ಸೋಧಿ, ಹಾಮಿಶ್ ಬೆನೆಟ್

ಭಾರತ: ಪೃಥ್ವಿ ಶಾ, ಮಯಾಂಕ್ ಅಗರ್ವಾಲ್, ವಿರಾಟ್ ಕೊಹ್ಲಿ(c), ಶ್ರೇಯಸ್ ಆಯ್ಯರ್, ಲೋಕೇಶ್ ರಾಹುಲ್ (w), ಕೇಧಾರ್ ಜಾಧವ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಕುಲದೀಪ್ ಯಾದವ್ , ಜಸ್ಪ್ರೀತ್ ಬುಮ್ರಾ.

Advertisement

Udayavani is now on Telegram. Click here to join our channel and stay updated with the latest news.

Next