Advertisement

ಗಣರಾಜ್ಯೋತ್ಸವ:ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದ ಭಾರತ -ಪಾಕ್‌ ಸೈನಿಕರು

02:06 PM Jan 26, 2017 | Team Udayavani |

ವಾಘಾ: ಸಾಮರಸ್ಯಕ್ಕೆ ಸಾಕ್ಷಿ ಎಂಬಂತೆ 68 ನೇ ಗಣರಾಜ್ಯೋತ್ಸವದ ದಿನವಾದ ಗುರುವಾರ ಭಾರತ ಮತ್ತು ಪಾಕಿಸ್ಥಾನದ ಸೈನಿಕರು ಪರಸ್ಪರ ಸಿಹಿ ಹಂಚಿ ಶುಭಾಶಯ ವಿನಿಯಮಯ ಮಾಡಿಕೊಂಡರು. 

Advertisement

ಪಂಜಾಬ್‌ನ ವಾಘಾ ಗಡಿ ನಿಯಂತ್ರಣ ರೇಖೆಯಲ್ಲಿ  ಉಭಯ ದೇಶಗಳ ಸೈನಿಕರು ಆಕರ್ಷಕ ಪಥ ಸಂಚಲನವನ್ನು ನಡೆಸಿದರು. ಬಾಂಗ್ಲಾ ಗಡಿಯಲ್ಲೂ ಸೈನಿಕರು ಪರಸ್ಪರ ಸಿಹಿ ಹಂಚಿ ಶುಭಾಶಯ ವಿನಿಮಯ ಮಾಡಿಕೊಂಡರು.
ಗಡಿಯಲ್ಲಿ ಸೈನಿಕರ ನಡುವೆ ಶಾಂತಿ ನೆಲೆಸುವ ಸಲುವಾಗಿ ಸಿಹಿ ಹಂಚಿಕೆ ಮಾಡಿಕೊಳ್ಳುವ ಕ್ರಮ ಹಿಂದಿನಿಂದಲೂ ನಡೆದು ಬಂದಿತ್ತು. 

ಕಳೆದ ಸ್ವಾತಂತ್ರ್ಯೋತ್ಸವದ ವೇಳೆ ಗಡಿಯಲ್ಲಿ ಉದ್ವಿಗ್ನ ವಾತಾವರಣ ಇದ್ದ ಹಿನ್ನಲೆಯಲ್ಲಿ ಭಾರತ ಮತ್ತು ಪಾಕ್‌ ಸೈನಿಕರ ನಡುವೆ ಸಿಹಿ ವಿನಿಮಯ ನಡೆದಿರಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next